ಮುಂಬೈ:ಅಂಗಡಿಗಳು ಮತ್ತು ವಸತಿ ಸಮುಚ್ಚಯವಿದ್ದ ಎರಡು ಮಹಡಿಯ ಕಟ್ಟಡದಲ್ಲಿ ಇಂದು ಬೆಳಗ್ಗೆ ಬೆಂಕಿ ಅನಾಹುತ ಸಂಭವಿಸಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ.
ಚೆಂಬೂರ್ ಪ್ರದೇಶದ ಸಿದ್ದಾರ್ಥ ಕಾಲೊನಿಯಲ್ಲಿ ಬೆಳಗ್ಗೆ 5.20ರ ಸುಮಾರಿಗೆ ಘಟನೆ ನಡೆದಿದೆ.
By PTI
Published : Oct 6, 2024, 9:42 AM IST
|Updated : Oct 6, 2024, 2:00 PM IST
ಮುಂಬೈ:ಅಂಗಡಿಗಳು ಮತ್ತು ವಸತಿ ಸಮುಚ್ಚಯವಿದ್ದ ಎರಡು ಮಹಡಿಯ ಕಟ್ಟಡದಲ್ಲಿ ಇಂದು ಬೆಳಗ್ಗೆ ಬೆಂಕಿ ಅನಾಹುತ ಸಂಭವಿಸಿದ್ದು, 7 ಮಂದಿ ಸಾವನ್ನಪ್ಪಿದ್ದಾರೆ.
ಚೆಂಬೂರ್ ಪ್ರದೇಶದ ಸಿದ್ದಾರ್ಥ ಕಾಲೊನಿಯಲ್ಲಿ ಬೆಳಗ್ಗೆ 5.20ರ ಸುಮಾರಿಗೆ ಘಟನೆ ನಡೆದಿದೆ.
ಕಟ್ಟಡದ ನೆಲ ಮಹಡಿಯಲ್ಲಿ ಅಂಗಡಿಗಳಿದ್ದು, ಮೇಲಿನ ಮಹಡಿಯಲ್ಲಿ ಮನೆಗಳಿದ್ದವು. ಬೆಂಕಿಯ ಜ್ವಾಲೆ ನೆಲಮಹಡಿಯ ಎಲೆಕ್ಟ್ರಿಕ್ ವೈರಿಂಗ್ ಮತ್ತು ಇತರೆ ಸಾಮಗ್ರಿಗಳಿಗೆ ಹೊತ್ತಿಕೊಂಡು ಬಳಿಕ ಎರಡನೇ ಮಹಡಿಗೆ ವ್ಯಾಪಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಐವರನ್ನು ತಕ್ಷಣ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಐವರು ಕೂಡಾ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದರು ಎಂದು ಅವರು ತಿಳಿಸಿದರು.
ಮೃತರನ್ನು ಪಾರಿಸ್ ಗುಪ್ತಾ(7), ಮಂಜು ಪ್ರೇಮ್ ಗುಪ್ತಾ(30), ಅನಿತಾ ಗುಪ್ತಾ (30) ಮತ್ತು ನರೇಂದ್ರ ಗುಪ್ತಾ (10) ಎಂದು ಗುರುತಿಸಲಾಗಿದೆ. ಇನ್ನುಳಿದವರ ಮಾಹಿತಿ ಲಭ್ಯವಾಗಬೇಕಿದೆ. ಘಟನೆ ಸಂಭವಿಸಲು ಕಾರಣವೇನು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಇದನ್ನೂ ಓದಿ:ಗಡಿಯಲ್ಲಿ ಒಳನುಸುಳುವಿಕೆ ಹಿಮ್ಮೆಟ್ಟಿಸಿದ ಸೇನಾ ಪಡೆ: ಇಬ್ಬರು ಉಗ್ರರು ಹತ - Kupwara Encounter