ನವದೆಹಲಿ: ರೈತ ಪ್ರತಿಭಟನಾ ಗುಂಪು ಇಂದು ತಮ್ಮ 'ದೆಹಲಿ ಚಲೋ' ಮೆರವಣಿಗೆಯನ್ನು ಪುನಾರಂಭಿಸಿದ್ದಾರೆ. ಈ ಈ ವೇಳೆ ಪರಿಸ್ಥಿತಿಯನ್ನು ನಿಯಂತ್ರಿಸಲು ದೆಹಲಿ ಪೊಲೀಸರು ಶಂಭು ಗಡಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ.
ಪಂಜಾಬ್-ಹರಿಯಾಣ ಗಡಿಯಲ್ಲಿರುವ ಶಂಭುದಲ್ಲಿ ಶನಿವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ರೈತ ಪ್ರತಿನಿಧಿ ಸರ್ವಾನ್ ಸಿಂಗ್ ಪಂಧೇರ್, 101 ರೈತರ ಗುಂಪು ಭಾನುವಾರ ಮಧ್ಯಾಹ್ನ ದೆಹಲಿಗೆ ತೆರಳಲಿದೆ ಎಂದು ತಿಳಿಸಿದ್ದರು.
ಶುಕ್ರವಾರ ಹರಿಯಾಣ ಭದ್ರತಾ ಸಿಬ್ಬಂದಿ ನಡೆಸಿದ ಅಶ್ರುವಾಯು ಶೆಲ್‌ನಿಂದ 16 ರೈತರು ಗಾಯಗೊಂಡಿದ್ದಾರೆ ಮತ್ತು ಅವರಲ್ಲಿ ಒಬ್ಬರು ಶ್ರವಣ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ ಎಂದು ಪಂಧೇರ್ ಹೇಳಿದರು.
"ರೈತರನ್ನು ಏಕೆ ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ? ಇಡೀ ಪರಿಸ್ಥಿತಿಯನ್ನು ಅರಿತುಕೊಂಡ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಈಗಾಗಲೇ 101 ರೈತರ 'ಜಾಥಾ' ರಾಷ್ಟ್ರ ರಾಜಧಾನಿಯತ್ತ ಸಾಗಲು ನಿರ್ಧರಿಸಿವೆ. ಭಾನುವಾರ ಮಧ್ಯಾಹ್ನ ಶಾಂತಿಯುತವಾಗಿ ನಮ್ಮ ಗುಂಪು ಶಾಂತಿಯುತವಾಗಿ ಹೋಗುತ್ತದೆ ಮತ್ತು ಯಾವುದೇ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂದು ಅವರು ತಿಳಿಸಿದರು.
''ಮೋದಿ ಸರ್ಕಾರ ಮಾತುಕತೆ ನಡೆಸುವ ಮನಸ್ಥಿತಿಯಲ್ಲಿಲ್ಲ; ಗಾಯಗೊಂಡ ನಾಲ್ವರು ರೈತರನ್ನು ಹೊರತುಪಡಿಸಿ ಉಳಿದವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಪಂಧೇರ್ ತಿಳಿಸಿದ್ದಾರೆ. "ಮಾತುಕತೆ ನಡೆಸುವಂತೆ ಕೇಂದ್ರದಿಂದ ನಮಗೆ ಯಾವುದೇ ಸಂದೇಶ ಬಂದಿಲ್ಲ. (ನರೇಂದ್ರ) ಮೋದಿ ಸರ್ಕಾರ ಮಾತುಕತೆ ನಡೆಸುವ ಮನಸ್ಥಿತಿಯಲ್ಲಿಲ್ಲ" ಎಂದು ದೂರಿದರು.
ಶುಕ್ರವಾರ, ಪ್ರತಿಭಟನಾನಿರತ ರೈತರು ಪಂಜಾಬ್-ಹರಿಯಾಣ ಗಡಿಯಲ್ಲಿ ಅವರನ್ನು ತಡೆದ ಭದ್ರತಾ ಸಿಬ್ಬಂದಿಯಿಂದ ಹಾರಿಸಿದ ಅಶ್ರುವಾಯು ಶೆಲ್‌ಗಳಿಂದ ಕೆಲವರು ಗಾಯಗೊಂಡ ನಂತರ ರಾಷ್ಟ್ರ ರಾಜಧಾನಿಗೆ ತಮ್ಮ ಮೆರವಣಿಗೆಯನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಿದರು. ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ರೈತರು ಒತ್ತಾಯಿಸುತ್ತಿದ್ದಾರೆ.
ಕಿಸಾನ್ ಮಜ್ದೂರ್ ಮೋರ್ಚಾ ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ ಪ್ರತಿಭಟನೆ 300 ನೇ ದಿನವನ್ನು ತಲುಪಿದೆ. ಆದರೂ ಕೇಂದ್ರ ಸರ್ಕಾರವು ಮಣಿಯದೆ ಉಳಿದಿದೆ ಎಂದು ಪಂಧೇರ್ ಆರೋಪಿಸಿದರು.
"ಕಿಸಾನ್ ಮಜ್ದೂರ್ ಮೋರ್ಚಾ ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ (ರಾಜಕೀಯೇತರ) ಪ್ರತಿಭಟನೆ 300ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಕೇಂದ್ರ ಸರ್ಕಾರ ಇನ್ನೂ ಹಠಮಾರಿ ಧೋರಣೆ ತಳೆದಿದೆ.. ಪಂಜಾಬ್‌ನಲ್ಲಿ ಬಿಜೆಪಿ ನಾಯಕರ ಪ್ರವೇಶವನ್ನು ನಾವು ವಿರೋಧಿಸುತ್ತೇವೆ. ಆದರೆ ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಮಾತುಕತೆಗೆ ಹೋಗುತ್ತಿದ್ದಾರೆ ಎಂದು ನಾವು ಕೇಳಿದ್ದೇವೆ. ಅಮೃತಸರಕ್ಕೆ ಅವರ ಪ್ರವೇಶವನ್ನು ವಿರೋಧಿಸುವಂತೆ ನಾವು ಪಂಜಾಬ್‌ನ ರೈತರಿಗೆ ಕರೆ ನೀಡುತ್ತೇವೆ ”ಎಂದು ಪಂಧೇರ್ ತಿಳಿಸಿದರು.
ರೈತರ ಬೇಡಿಕೆಗಳು; ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಜೊತೆಗೆ, ಕೃಷಿ ಸಾಲ ಮನ್ನಾ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ವಿದ್ಯುತ್ ದರದಲ್ಲಿ ಹೆಚ್ಚಳ ಮಾಡಬಾರದು, ರೈತರ ವಿರುದ್ಧದ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು ಮತ್ತು 2021 ರ ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ "ನ್ಯಾಯ" ಬೇಕು ಒತ್ತಾಯಿಸುತ್ತಿದ್ದಾರೆ.
2013ರ ಭೂಸ್ವಾಧೀನ ಕಾಯ್ದೆ ಮರುಸ್ಥಾಪನೆ ಮತ್ತು 2020-21ರ ಹಿಂದಿನ ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ನೀಡುವುದು ಅವರ ಬೇಡಿಕೆಗಳ ಭಾಗವಾಗಿದೆ.
ಇದನ್ನೂ ಓದಿ:ನೋಯ್ಡಾ ಗಡಿಯಲ್ಲಿ ರೈತರ ಪ್ರತಿಭಟನೆ; ಸಮಸ್ಯೆ ಆಲಿಸಲು ಐವರು ಸದಸ್ಯರ ಸಮಿತಿ ರಚಿಸಿದ ಯುಪಿ ಸರ್ಕಾರ