ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ನೆಟ್ವರ್ಕ್ ಡೌನ್ ಆಗಿದ್ದು, ಬಳಕೆ ವೇಳೆ ವ್ಯತ್ಯಯ ಉಂಟಾಗಿದೆ. ರಾತ್ರಿ ಸುಮಾರು 8.50ರ ಬಳಿಕ ಎಫ್ಬಿ ಮತ್ತು ಇನ್ಸ್ಟಾ ಸೇವೆ ಸ್ಥಗಿತಗೊಂಡಿದೆ.
ಮೆಟಾದ ಸಾಮಾಜಿಕ ಜಾಲತಾಣಗಳಲ್ಲಿ ಡೌನ್ ಟೈಮ್ ಉಂಟಾಗಿರುವುದು ಬಳಕೆದಾರರ ಎಫ್ಬಿ ಮತ್ತು ಇನ್ಸ್ಟಾ ಸ್ವಯಂ ಲಾಗ್ಔಟ್ ಆಗಿದೆ. ಈ ಸಮಸ್ಯೆ ಆ್ಯಪ್ ಮತ್ತು ವೆಬ್ಸೈಟ್ ಎರಡರಲ್ಲೂ ಕಂಡುಬಂದಿದೆ. ಈ ವೇಳೆ ಬಳಕೆದಾರರು ಎರಡೂ ಜಾಲತಾಣಗಳನ್ನು ಉಪಯೋಗಿಸಲು ಪರದಾಡಿದರು. ಡೌನ್ ಟೈಮ್ಗೆ ಕಾರಣ ತಿಳಿದು ಬಂದಿಲ್ಲ.
ಇನ್ನು ಎಫ್ಬಿ ಮತ್ತು ಇನ್ಸ್ಟಾ ಡೌನ್ ಆದ ಬೆನ್ನಲ್ಲೇ ಮಾಲೀಕ ಮಾರ್ಕ್ ಜುಕರಬುರ್ಗ್ ಪೋಸ್ಟ್ ಮಾಡಿ, 'ಕೆಲವೇ ನಿಮಿಷಗಳಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ, ಚಿಲ್ ಗೈಯ್ಸ್' ಅಂತಾ ಬರೆದುಕೊಂಡಿದ್ದಾರೆ.