ಕರ್ನಾಟಕ

karnataka

ಲೆಕ್ಕ ತಪ್ಪಿದ ಎಕ್ಸಿಟ್​ ಪೋಲ್​: ಫಲಿತಾಂಶಕ್ಕೂ ನಿರೀಕ್ಷೆಗಳಿಗೂ ಭಾರಿ ವ್ಯತ್ಯಾಸ! - Exit Polls vs Exact Results

By ETV Bharat Karnataka Team

Published : Jun 5, 2024, 11:26 AM IST

Exit Polls Vs Exact Results In Lok Sabha Elections : ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ಹಲವು ಸಮೀಕ್ಷೆಗಳು ಮತ್ತು ಎಕ್ಸಿಟ್ ಪೋಲ್‌ಗಳು ಬಹಳಷ್ಟು ತಪ್ಪು ಲೆಕ್ಕಾಚಾರ ಮಾಡಿವೆ. ವಾಸ್ತವಿಕ ಫಲಿತಾಂಶಗಳಿಗೂ ಸಮೀಕ್ಷೆಗಳ ನಿರೀಕ್ಷೆಗಳಿಗೂ ಅಜಗಜಾಂತರವಿದೆ. ಇದು ಈ ಬಾರಿಯ ಚುನಾವಣೆಯಲ್ಲಿ ಮಾತ್ರವಲ್ಲ.. ಈ ಹಿಂದೆಯೂ ಅನೇಕ ಬಾರಿ ನಡೆದಿದೆ.

LOK SABHA ELECTIONS  NATIONAL EXIT POLLS FAIL  EXIT POLLS FAIL TO ACCURATELY PREDICT
ಲೋಕಸಭೆ ಚುನಾವಣೆಯ ಫಲಿತಾಂಶ (ಕೃಪೆ: ETV Bharat Karnataka)

ಹೈದರಾಬಾದ್​:ಬಹುತೇಕ ಎಲ್ಲಾ ಸಮೀಕ್ಷಾ ಸಂಸ್ಥೆಗಳು ಲೋಕಸಭಾ ಚುನಾವಣೆಯ ಫಲಿತಾಂಶದ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಎಕ್ಸಿಟ್ ಪೋಲ್‌ಗಳಲ್ಲಿ ಬಹಿರಂಗವಾದ ಫಲಿತಾಂಶಗಳಿಗೆ ವ್ಯತ್ಯಾಸವು ಸ್ಪಷ್ಟವಾಗಿತ್ತು. ಎಲ್ಲ ಮತಗಟ್ಟೆ ಸಂಸ್ಥೆಗಳು ಎನ್‌ಡಿಎ ಮೈತ್ರಿಕೂಟದ ಗೆಲುವಿನ ಮುನ್ಸೂಚನೆ ನೀಡಿದ್ದವು. ಆದರೆ, ಸ್ಥಾನಗಳ ವಿಷಯದಲ್ಲಿ ಅವರ ಭವಿಷ್ಯವು ತಪ್ಪಾಗಿದೆ. ಎನ್‌ಡಿಎ ಮತ್ತು ಭಾರತ ಮೈತ್ರಿಕೂಟಗಳ ನಡುವೆ ಕೊಂಚ ಬದಲಾವಣೆಯಾಗಲಿದೆ ಎಂದು ಹೇಳಲು ಸಮೀಕ್ಷಾ ಸಂಸ್ಥೆಗಳು ವಿಫಲವಾಗಿವೆ. ಬಿಜೆಪಿ ಮೈತ್ರಿಕೂಟ 300ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಎಲ್ಲ ಸಮೀಕ್ಷಾ ಸಂಸ್ಥೆಗಳು ಭವಿಷ್ಯ ನುಡಿದಿದ್ದರೂ, ಆ ಅಂಕವನ್ನೂ ತಲುಪಲು ಸಾಧ್ಯವಾಗಿಲ್ಲ.

ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 361 - 401 ಸ್ಥಾನಗಳನ್ನು ಪಡೆಯಲಿದ್ದು, ಪ್ರತಿಪಕ್ಷ ಇಂಡಿಯಾ ಅಲಯನ್ಸ್ 131-166 ಸ್ಥಾನಗಳಿಗೆ ಸೀಮಿತವಾಗಲಿದೆ ಎಂದು ಸಮೀಕ್ಷೆ ಸಂಸ್ಥೆ 'ಇಂಡಿಯಾಟುಡೆ ಆಕ್ಸಿಸ್ ಮೈ ಇಂಡಿಯಾ' ಹೇಳಿತ್ತು. ಟೈಮ್ಸ್ ನೌ-ಇಟಿಜಿ ರಿಸರ್ಚ್ ತಮ್ಮ ಸಮೀಕ್ಷೆಯಲ್ಲಿ ಎನ್‌ಡಿಎ 358 ಸ್ಥಾನಗಳನ್ನು ಮತ್ತು ಭಾರತ ಮೈತ್ರಿಕೂಟ 152 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿತ್ತು. ರಿಪಬ್ಲಿಕ್ ಟಿವಿ ಪಿ ಮಾರ್ಕ್ ಕೂಡ ಬಹುತೇಕ ಅದೇ ಸಂಖ್ಯೆಯ ಎಕ್ಸಿಟ್ ಪೋಲ್‌ಗಳನ್ನು ಬಿಡುಗಡೆ ಮಾಡಿತ್ತು. ಎನ್‌ಡಿಎ 400 ಸ್ಥಾನಗಳನ್ನು ಮತ್ತು ಇಂಡಿಯಾ ಮೈತ್ರಿಕೂಟ 107 ಸ್ಥಾನಗಳನ್ನು ಪಡೆಯಲಿದೆ ಎಂದು 'ಟುಡೇಸ್ ಚಾಣಕ್ಯ' ಹೇಳಿತ್ತು. ಜಾಂಕಿಬಾತ್ ಸಮೀಕ್ಷೆ ಪ್ರಕಾರ ಬಿಜೆಪಿ ಮೈತ್ರಿಕೂಟಕ್ಕೆ 390 ಸ್ಥಾನಗಳು ಹಾಗೂ ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ 161 ಸ್ಥಾನಗಳು ಲಭಿಸಲಿವೆ ಎಂದಿತ್ತು. ಎನ್‌ಡಿಎ 378 ಸ್ಥಾನಗಳನ್ನು ಮತ್ತು ಇಂಡಿಯಾ ಮೈತ್ರಿಕೂಟ 169 ಸ್ಥಾನಗಳನ್ನು ಪಡೆಯಲಿದೆ ಎಂದು ನ್ಯೂಸ್ ನೇಷನ್ ಹೇಳಿತ್ತು.

ತಲೆಕೆಳಗಾದ ಸಮೀಕ್ಷೆಗಳು: ಅದರಲ್ಲೂ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಂಗಾಳ ಮತ್ತು ರಾಜಸ್ಥಾನದಂತಹ ದೊಡ್ಡ ರಾಜ್ಯಗಳಲ್ಲಿ ಮತದಾರರ ಹೃದಯವನ್ನು ಗ್ರಹಿಸುವಲ್ಲಿ ಸಮೀಕ್ಷಾ ಸಂಸ್ಥೆಗಳು ವಿಫಲವಾಗಿವೆ. ಈ ರಾಜ್ಯಗಳಲ್ಲಿ ಬಿಜೆಪಿ ಏಕಪಕ್ಷೀಯವಾಗಿ ಗೆಲುವು ಸಾಧಿಸಲಿದೆ ಎಂದು ಸಮೀಕ್ಷಾ ಸಂಸ್ಥೆಗಳು ಭವಿಷ್ಯ ನುಡಿದಿದ್ದವು. ಆದರೆ, ಕಾಂಗ್ರೆಸ್ ಉತ್ತಮ ಫಲಿತಾಂಶಗಳನ್ನು ಸಾಧಿಸಿ ಬಿಜೆಪಿಯ ಆಕ್ರಮಣವನ್ನು ತಡೆಯಿತು.

ವಿಧಾನಸಭಾ ಚುನಾವಣೆಯಲ್ಲಿಯೂ ಸುಳ್ಳಾಗಿದ್ದ ಭವಿಷ್ಯ!: ಚುನಾವಣಾ ಫಲಿತಾಂಶದಲ್ಲಿ ರಾಜಕೀಯ ಪಕ್ಷಗಳ ನಿರೀಕ್ಷೆ ಹುಸಿಯಾಗುತ್ತಿರುವುದು ಇದೇ ಮೊದಲಲ್ಲ. ಕೆಲವೊಮ್ಮೆ ಕೆಟ್ಟದಾಗಿ ಸೋತ ಪ್ರಕರಣಗಳಿವೆ. ಕಳೆದ ವರ್ಷ ನಡೆದ 5 ರಾಜ್ಯಗಳ ವಿಧಾನಸಭಾ ಚುನಾವಣೆಯ ವೇಳೆ ಎಕ್ಸಿಟ್ ಪೋಲ್‌ಗಳು ಕೆಲವೆಡೆ ಫಲಿತಾಂಶ ಭವಿಷ್ಯ ನುಡಿದಿದ್ದವು. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಬಿಜೆಪಿ ಗೆದ್ದರೆ, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆದರೆ, ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದಿತ್ತು.

ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಸೆಣಸಲಿವೆ ಎಂದ ಅಂದಾಜು ಹಾಕಿತ್ತು. ಮತ್ತೊಂದೆಡೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿಯೂ ಭಾರೀ ಪೈಪೋಟಿ ನಡೆಯುತ್ತೆ ಎಂದು ಎಕ್ಸಿಟ್​ ಪೋಲ್​ಗಳು ಭವಿಷ್ಯ ನುಡಿದಿದ್ದವು. ಎಕ್ಸಿಟ್ ಪೋಲ್‌ಗಳು ಪ್ರಕಾರ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದವು. ಕರ್ನಾಟಕದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಹಲವು ಸಮೀಕ್ಷೆಗಳು ಹೇಳಿದ್ದವು. ಆದರೆ ಕೆಲವು ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತು.

2004ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಸರ್ಕಾರ ಶೈನಿಂಗ್ ಎಂಬ ಘೋಷಣೆಯೊಂದಿಗೆ ಚುನಾವಣೆ ಎದುರಿಸಿತು. ಆಗ ಎಲ್ಲ ಎಕ್ಸಿಟ್ ಪೋಲ್​ಗಳು ಎನ್​ಡಿಎಗೆ 240 - 250 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದವು. ಆದರೆ ವಾಸ್ತವವಾಗಿ ಎನ್‌ಡಿಎ ಗೆದ್ದಿದ್ದು 187 ಸ್ಥಾನಗಳಲ್ಲಿ ಮಾತ್ರ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಎಷ್ಟು ಸ್ಥಾನಗಳನ್ನು ಗೆಲ್ಲಲಿದೆ ಎಂಬುದನ್ನು ಯಾವುದೇ ಸಂಸ್ಥೆಗೆ ಊಹಿಸಲು ಸಾಧ್ಯವಾಗಿಲ್ಲ. ಆ ಚುನಾವಣೆಯಲ್ಲಿ ಎನ್‌ಡಿಎ 300 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿ ಏಕಾಂಗಿಯಾಗಿ 272 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 44 ಸ್ಥಾನಗಳಿಗೆ ಸೀಮಿತವಾಗಿತ್ತು.

ನೋಟು ಅಮಾನ್ಯೀಕರಣದ ನಂತರ 2017ರಲ್ಲಿ ನಡೆದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹಂಗಿನ ವಿಧಾನಸಭೆ ಬರಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ 325 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. 2015ರಲ್ಲಿ ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಮಹಾಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಆದರೆ, ಚುನಾವಣೆಯಲ್ಲಿ ಮೈತ್ರಿಕೂಟಕ್ಕೆ 178 ಸ್ಥಾನಗಳು ಲಭಿಸಿವೆ. ಬಿಜೆಪಿ ಸೋಲು ಕಂಡಿತ್ತು. 2015ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಗೆಲ್ಲಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿದ್ದರೂ, 70 ರಲ್ಲಿ 67 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಯಾರು ಊಹೆ ಮಾಡಿರಲಿಲ್ಲ ಎಂಬುದು ಗಮನಾರ್ಹ.

ಓದಿ:ಲೋಕಸಮರ: ಒಂದೇ ಕ್ಲಿಕ್​ನಲ್ಲಿ ರಾಜ್ಯದ 28 ಕ್ಷೇತ್ರಗಳ ಫಲಿತಾಂಶ - lok sabha election Results 2024

ABOUT THE AUTHOR

...view details