ETV Bharat / opinion

ಪೇಜರ್​ ದಾಳಿ: ಹೆಚ್ಚುತ್ತಿರುವ ಹೈಬ್ರಿಡ್​ ಯುದ್ಧತಂತ್ರ - ವಿಶ್ವಕ್ಕೆ ಕಾದಿದೆಯಾ ಅಪಾಯ? - Hybrid War Tactics

ಹೈಬ್ರಿಡ್​ ಯುದ್ಧತಂತ್ರಗಳ ಆವಿಷ್ಕಾರದ ಬಗ್ಗೆ ಒಂದು ವಿಶ್ಲೇಷಣೆ ಇಲ್ಲಿದೆ.

ಪೇಜರ್​ ದಾಳಿ: ಹೆಚ್ಚುತ್ತಿರುವ ಹೈಬ್ರಿಡ್​ ಯುದ್ಧತಂತ್ರ
ಪೇಜರ್​ ದಾಳಿ: ಹೆಚ್ಚುತ್ತಿರುವ ಹೈಬ್ರಿಡ್​ ಯುದ್ಧತಂತ್ರ (AFP)
author img

By ETV Bharat Karnataka Team

Published : Sep 20, 2024, 8:12 PM IST

ಲೆಬನಾನ್​​ನಲ್ಲಿ ಪೇಜರ್​ಗಳು, ವಾಕಿ ಟಾಕಿಗಳು ಮತ್ತು ಸೋಲಾರ್ ಇಂಧನ ಫಲಕಗಳನ್ನು ಇಸ್ರೇಲ್​ನ ಮೊಸ್ಸಾದ್ ಮತ್ತು ಅದರ ಸೈಬರ್ ಯುದ್ಧತಂತ್ರ ಘಟಕ 8200 ಹೇಗೆ ಸ್ಫೋಟಿಸಿದವು ಎಂಬ ಬಗ್ಗೆ ನಿಖರ ಮಾಹಿತಿಗಳು ಎಂದಿಗೂ ಬಹಿರಂಗವಾಗದಿರಬಹುದು. ಆದರೆ ಹೈಬ್ರಿಡ್ ಯುದ್ಧತಂತ್ರಗಳು ಮತ್ತೊಂದು ಎತ್ತರಕ್ಕೆ ತಲುಪಿವೆ ಎಂಬುದನ್ನು ಮಾತ್ರ ಈ ಸ್ಪೋಟಗಳು ಸಾಬೀತುಪಡಿಸಿವೆ.

ಈ ದಾಳಿಗಳಿಂದ ಲೆಬನಾನ್​ನಲ್ಲಿ ಎಷ್ಟೊಂದು ದೊಡ್ಡ ಪ್ರಮಾಣದ ಭೀತಿ ಸೃಷ್ಟಿಯಾಗಿದೆ ಎಂದರೆ, ಇಲ್ಲಿನ ಜನ ಎಲ್ಲಾ ಆಧುನಿಕ ತಾಂತ್ರಿಕ ಸಾಧನಗಳನ್ನು ದೂರವಿಟ್ಟು ಹಳೆಯ ಕಾಲದ ಸಂಪರ್ಕ ವ್ಯವಸ್ಥೆಯನ್ನು ಬಳಸಲು ಮುಂದಾಗುತ್ತಿದ್ದಾರೆ. ಪೇಜರ್, ವಾಕಿಟಾಕಿ ಸ್ಫೋಟಗಳಿಂದ ವಿಚಲಿತವಾಗಿರುವ ಹಿಜ್ಬುಲ್ಲಾ ನಾಯಕರು ಅನಿಶ್ಚಿತತೆ ಮತ್ತು ಗೊಂದಲದ ಮನಸ್ಥಿತಿಗೆ ಒಳಗಾಗಿದ್ದಾರೆ. ಸದ್ಯ ಈ ಗೊಂದಲದ ಸ್ಥಿತಿಯು ಇಸ್ರೇಲ್ ತನ್ನ ದಾಳಿಗಳನ್ನು ಕರಾರುವಾಕ್ಕಾಗಿ ಪ್ಲಾನ್ ಮಾಡಲು ಸಮಯ ಮತ್ತು ಅವಕಾಶ ನೀಡಿದಂತಾಗಿದೆ. ಜೊತೆಗೆ ಈ ಘಟನೆಯು ಎಲೆಕ್ಟ್ರಾನಿಕ್ ಸಾಧನಗಳು ಒಡ್ಡಬಲ್ಲ ಅಪಾಯಗಳ ಬಗ್ಗೆ ಕಳವಳಗಳನ್ನು ಕೂಡ ಮೂಡಿಸಿದೆ.

ಜೆರುಸಲೇಂ ಪೋಸ್ಟ್ ಪ್ರಕಾರ, ಯುನಿಟ್ 8200 ಯುಎಸ್ ರಾಷ್ಟ್ರೀಯ ಭದ್ರತಾ ಸಂಸ್ಥೆ (ಎನ್​ಎಸ್​ಎ) ಅಥವಾ ಬ್ರಿಟನ್​ನ ಜಿಸಿಎಚ್​ಕ್ಯೂಗೆ ಸಮಾನವಾಗಿದೆ ಮತ್ತು ಇಸ್ರೇಲ್ ರಕ್ಷಣಾ ಪಡೆಗಳಲ್ಲಿನ ಅತಿದೊಡ್ಡ ಏಕೈಕ ಮಿಲಿಟರಿ ಘಟಕವಾಗಿದೆ. ಸಿಗ್ನಲ್​ಗಳನ್ನು ಪತ್ತೆ ಮಾಡುವುದು, ರಹಸ್ಯ ಡೇಟಾ ಮೈನಿಂಗ್ ಸೇರಿದಂತೆ ಸೈಬರ್ ದಾಳಿ ನಡೆಸುವುದರವರೆಗೆ ಇದು ಕಾರ್ಯವ್ಯಾಪ್ತಿಯನ್ನು ಹೊಂದಿದೆ.

ಯುನಿಟ್ 8200 ಭಾಗಿ: ಇರಾನಿನ ಪರಮಾಣು ಸೆಂಟ್ರಿಫ್ಯೂಜ್​ಗಳನ್ನು ನಿಷ್ಕ್ರಿಯಗೊಳಿಸಲು ಸೈಬರ್ ದಾಳಿ ನಡೆಸಿದ್ದು ಸೇರಿದಂತೆ ಹಿಂದಿನ ಇಂಥ ಅನೇಕ ಘಟನೆಗಳಲ್ಲಿ ಯುನಿಟ್ 8200 ಭಾಗಿಯಾಗಿದೆ. ಕೃತಕ ಬುದ್ಧಿಮತ್ತೆಯನ್ನು ಬಳಸಿ ಹಮಾಸ್​ನ ನೆಲೆಗಳನ್ನು ಗುರುತಿಸಿ ದಾಳಿಗಳನ್ನು ಯೋಜಿಸಿರುವುದು ಇದರ ಹೆಗ್ಗಳಿಕೆಯಾಗಿದೆ. ಆದರೆ, ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್​ ನಡೆಸಿದ ದಾಳಿಯನ್ನು ಮೊದಲೇ ಪತ್ತೆಹಚ್ಚಲು ಮಾತ್ರ ಇದು ವಿಫಲವಾಗಿತ್ತು. ಇದೇ ಕಾರಣದಿಂದ ಇದರ ಮುಖ್ಯಸ್ಥರು ರಾಜೀನಾಮೆ ನೀಡಿದ್ದರು.

ಹಿಜ್ಬುಲ್​​​​​ ಸಂದೇಶ ಪತ್ತೆ ಹಚ್ಚಿ ಮುಟ್ಟಿ ನೋಡಿಕೊಳ್ಳುವ ತಿರುಗೇಟು?: ಹಲವಾರು ಸಂಪರ್ಕ ಸಾಧನಗಳ ಮೂಲಕ ಹಿಜ್ಬುಲ್ಲಾ ಕಳುಹಿಸುತ್ತಿರುವ ಸಾಮೂಹಿಕ ಸಂದೇಶಗಳನ್ನು ಪತ್ತೆ ಮಾಡುವಲ್ಲಿ ಇಸ್ರೇಲ್ ಯಶಸ್ವಿಯಾಗಿದೆ. ಅಲ್ಲದೇ ಆ ಸಾಧನಗಳನ್ನು ತನಗೆ ಬೇಕಾದಂತೆ ಮಾರ್ಪಡಿಸಿ ಅವುಗಳಲ್ಲಿ ಸ್ಫೋಟಕಗಳು ಮತ್ತು ಚಿಪ್​ಗಳನ್ನು ಅಳವಡಿಸಿ, ರಿಮೋಟ್​ ಮೂಲಕ ಅವನ್ನು ಸ್ಫೋಟಿಸಲು ಕೂಡ ಅದು ಯಶಸ್ವಿಯಾಗಿದೆ. ಸ್ಫೋಟಗೊಂಡ ಸಾಧನಗಳನ್ನು ತಯಾರಿಸಿವೆ ಎಂದು ಹೇಳಲಾದ ಕಂಪನಿಗಳು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿವೆ. ಇಸ್ರೇಲ್ ಕಾರ್ಯಕರ್ತರ ಒಡೆತನದ ಶೆಲ್ ಕಂಪನಿಗೆ ಈ ಸಾಧನಗಳನ್ನು ತಯಾರಿಸುವ ಆರ್ಡರ್​ ನೀಡಲಾಗಿತ್ತು ಎಂಬ ಆರೋಪಗಳಿಗೆ ಪುಷ್ಟಿ ಸಿಗುತ್ತಿದೆ.

ಪ್ರತಿಕ್ರಿಯೆಗೆ ಇಸ್ರೇಲ್​ ನಕಾರ: ಲೆಬನಾನ್​ನಲ್ಲಿ ಪೇಜರ್​ ದಾಳಿ ನಡೆಯುವ ವಿಷಯ ತನಗೆ ತಿಳಿದಿರಲಿಲ್ಲ ಎಂದು ಅಮೆರಿಕ ಹೇಳಿಕೊಂಡಿದೆ. ಆದರೆ ಯಾವ ರೀತಿಯಲ್ಲಿ ದಾಳಿ ನಡೆಯಲಿವೆ ಎಂಬುದು ತಿಳಿಯದಿದ್ದರೂ ದಾಳಿ ನಡೆಯಲಿವೆ ಎಂಬುದು ಅಮೆರಿಕಕ್ಕೆ ತಿಳಿದಿತ್ತು ಎಂದು ಸಿಎನ್ಎನ್ ವರದಿ ಹೇಳಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಇಸ್ರೇಲ್ ನಿರಾಕರಿಸಿದ್ದರೂ, ಅದರ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, 'ನಾವು ಈ ಯುದ್ಧದಲ್ಲಿ ಹೊಸ ಯುಗದ ಪ್ರಾರಂಭದಲ್ಲಿದ್ದೇವೆ ಮತ್ತು ಇದಕ್ಕಾಗಿ ನಮ್ಮನ್ನು ನಾವು ಹೊಂದಿಸಿಕೊಳ್ಳಬೇಕಿದೆ' ಎಂದು ಹೇಳಿದ್ದಾರೆ. ಲೆಬನಾನ್​​ ದಾಳಿಗಳನ್ನು ಇಸ್ರೇಲ್​​ನೇ ನಡೆಸಿದ್ದು ಎಂಬುದಕ್ಕೆ ಇದೊಂದು ಸಣ್ಣ ಪುರಾವೆಯಾಗಿದೆ. ಆದರೆ ಸದ್ಯ ವಿಶ್ವದಲ್ಲಿ ಹೈಬ್ರಿಡ್ ಯುದ್ಧದ ಅಪಾಯಕಾರಿ ಹಂತವನ್ನು ನೋಡಿದರೆ ಸಾಮಾನ್ಯ ಜನತೆ ಕೂಡ ಈ ಅಪಾಯ ಎದುರಿಸುವ ಸಾಧ್ಯತೆಗಳಿವೆ.

ಮಾಲ್ವೇರ್ ಬಳಸಿ ಸ್ಫೋಟ ಮಾಡಲಾಗಿದೆಯೇ?: ಸಾಧನಗಳಲ್ಲಿ ಸ್ಫೋಟಕಗಳನ್ನು ಇರಿಸಲಾಗಿತ್ತೇ ಅಥವಾ ಎಲೆಕ್ಟ್ರಾನಿಕ್ ಸಂಕೇತಗಳನ್ನು ಬಳಸಿಕೊಂಡು ಬ್ಯಾಟರಿಗಳನ್ನು ಸ್ಫೋಟಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಸಾಧನವನ್ನು ದೂರದಿಂದಲೇ ಸ್ಫೋಟಗೊಳಿಸಲು ಮಾಲ್ವೇರ್ ಅನ್ನು ಬಳಸಿರುವ ಸಾಧ್ಯತೆಯಿದೆ ಎಂದು ಹ್ಯಾಕರ್​ಗಳು ದೃಢಪಡಿಸಿದ್ದಾರೆ. ಆದರೆ, ಇದನ್ನು ಖಚಿತಪಡಿಸುವುದು ಸಾಧ್ಯವಿಲ್ಲ. ಇಸ್ರೇಲಿಗಳು ಮೊಬೈಲ್ ಸಿಗ್ನಲ್​ಗಳ ಆಧಾರದ ಮೇಲೆ ಹಿರಿಯ ಕಮಾಂಡರ್​ಗಳನ್ನು ಪತ್ತೆಹಚ್ಚಿ, ಅವರ ಮೇಲೆ ನಿಖರವಾಗಿ ದಾಳಿ ಮಾಡುತ್ತಿದ್ದಾರೆ ಎಂಬುದು ತಿಳಿದ ನಂತರ ಹಿಜ್ಬುಲ್ಲಾ ಉಗ್ರರು ಮೊಬೈಲ್​ಗಳನ್ನು ಬಿಟ್ಟು ಪೇಜರ್​ಗಳನ್ನು ಬಳಸಲಾರಂಭಿಸಿದ್ದರು. ಆದರೆ, ಈಗ ನಡೆದ ದಾಳಿಗಳನ್ನು ನೋಡಿದರೆ ಲೆಬನಾನ್​ನಲ್ಲಿ ಪೇಜರ್ ಮತ್ತು ಕೈಯಲ್ಲಿ ಹಿಡಿಯಬಹುದಾದ ವಾಕಿ-ಟಾಕಿಗಳು ಸಹ ಅಪಾಯಕಾರಿಯಾಗಿ ಕಾಣಿಸಿವೆ. ಸದ್ಯ ಇದರಿಂದ ಯುದ್ಧಕ್ಕೆ ತೀರಾ ಅಗತ್ಯವಾದ ಸಂಪರ್ಕ ವ್ಯವಸ್ಥೆ ಹಾಳಾಗಿರುವುದರಿಂದ ಹಿಜ್ಬುಲ್ಲಾದ ಯುದ್ಧ ಸಿದ್ಧತೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ.

ಇಸ್ರೇಲ್​ನ ಈ ಯುದ್ಧತಂತ್ರದ ಕಾರ್ಯಾಚರಣೆಯು ಆರಂಭದಲ್ಲಿ ಅನೇಕ ಭಯೋತ್ಪಾದಕ ಸಂಘಟನೆಗಳು ಸೇರಿದಂತೆ ಜಾಗತಿಕವಾಗಿ ಕಾರ್ಯತಂತ್ರದ ಪರಿಣಾಮಗಳನ್ನು ಬೀರಲಿದೆ. ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಪದೇ ಪದೆ ಹೇಳುತ್ತಿದ್ದರೂ, ಹಿಂದಿನ ಕಾಲದ ಸಂಪರ್ಕ ವ್ಯವಸ್ಥೆಗಳೊಂದಿಗೆ ಅದು ಸುಲಭವಲ್ಲ. ಹಿಜ್ಬುಲ್ಲಾ ನಾಯಕರು ಇನ್ನು ಕೆಲ ಕಾಲ ಗೊಂದಲದ ಮನಸ್ಥಿತಿಯಲ್ಲಿಯೇ ಇರಲಿದ್ದು, ಇಸ್ರೇಲಿಗಳು ಇದನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಬಹುದು.

ಇಸ್ರೇಲ್​ ಈ ರಹಸ್ಯ ಭೇದಿಸಿದ್ದಾದರೂ ಹೇಗೆ? - ಹೀಗೂ ಆಗಿರಬಹುದಾ?: ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಚಾರವೆಂದರೆ- ಹಿಜ್ಬುಲ್ಲಾ ಸಂಘಟನೆಯೊಳಗೇ ಇಸ್ರೇಲಿ ಗೂಢಚಾರರು ಸೇರಿಕೊಂಡಿರುವ ಮತ್ತು ಅವರು ಸಂವಹನ ಸಾಧನಗಳ ಖರೀದಿಯ ಬಗೆಗಿನ ವಿವರಗಳನ್ನು ಮೊಸ್ಸಾದ್ ಗೆ ಸೋರಿಕೆ ಮಾಡಿರಬಹುದು ಎಂಬ ಸಂಶಯ. ಇದರಿಂದ ಸಂಘಟನೆಯೊಳಗೇ ಅಪನಂಬಿಕೆ ಹೆಚ್ಚಾಗಬಹುದು. ಸ್ಫೋಟಗಳಲ್ಲಿ ಸಾವಿನ ಸಂಖ್ಯೆ ಕಡಿಮೆ ಇದ್ದರೂ, ಗಾಯಗೊಂಡವರ ಪೈಕಿ ಹೆಚ್ಚಿನವರು ಹಿಜ್ಬುಲ್ಲಾದ ಮಧ್ಯಮ ಶ್ರೇಣಿಯ ಕಾರ್ಯಕರ್ತರಾಗಿರುವುದರಿಂದ ಇದು ಸಂಘಟನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ಘಟನೆಯ ನಂತರ ಇಸ್ರೇಲ್ ನೊಂದಿಗೆ ಸಂಘರ್ಷದಲ್ಲಿ ತೊಡಗಿರುವ ಇತರ ಭಯೋತ್ಪಾದಕ ಸಂಘಟನೆಗಳು ಎಲೆಕ್ಟ್ರಾನಿಕ್ ಸಂವಹನ ಸಾಧನಗಳನ್ನು ಬಳಸಿಕೊಳ್ಳುವ ಬಗ್ಗೆ ಜಾಗರೂಕರಾಗಿರುತ್ತವೆ.

ಆದರೆ ಪೇಜರ್​ ದಾಳಿಗಳ ನಂತರ ಹಿಜ್ಬುಲ್ಲಾ ದೊಡ್ಡ ಪ್ರಮಾಣದ ದಾಳಿ ಆರಂಭಿಸಬಹುದು ಎಂಬ ಆತಂಕ ಈಗ ಇಸ್ರೇಲ್​​ನ ಜನರಲ್ಲಿ ಆರಂಭವಾಗಿದೆ. ಕದನ ವಿರಾಮ ಸಾಧ್ಯವಾಗಬಹುದು ಎಂದು ಕೆಲ ದಿನಗಳ ಹಿಂದೆ ಅಂದುಕೊಳ್ಳಲಾಗಿತ್ತು. ಆದರೆ ಇದು ಈಗ ಸಾಧ್ಯವೇ ಇಲ್ಲ ಅನಿಸುತ್ತಿದೆ. ಇನ್ನು ಹಮಾಸ್ ವಶದಲ್ಲಿರುವ ಇಸ್ರೇಲ್​ನ ಒತ್ತೆಯಾಳುಗಳ ಸುರಕ್ಷತೆಯ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಇನ್ನು ಇರಾನ್​​ ಬೆಂಬಲಿತ ಪ್ರತಿರೋಧ ಗುಂಪುಗಳು ಇಸ್ರೇಲ್ ವಿರುದ್ಧ ಒಗ್ಗೂಡುವ ಸಾಧ್ಯತೆಗಳಿವೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸಂಘರ್ಷವನ್ನು ವಿಸ್ತರಿಸುವ ತಮ್ಮ ಗುರಿಯನ್ನು ಸಾಧಿಸಿದ್ದಾರೆ. ಇದರಿಂದ ಅವರು ತಮ್ಮ ಕುರ್ಚಿಯನ್ನು ಇನ್ನೂ ಕೆಲ ಕಾಲದವರೆಗೆ ಸುಭದ್ರವಾಗಿ ಉಳಿಸಿಕೊಳ್ಳಬಹುದು. ಹಿಜ್ಬುಲ್ಲಾ ದಾಳಿಯಿಂದಾಗಿ ಸ್ಥಳಾಂತರಗೊಂಡ ಇಸ್ರೇಲಿಗಳನ್ನು ಉತ್ತರ ಇಸ್ರೇಲ್​​ನಲ್ಲಿರುವ ಅವರ ಮನೆಗಳಿಗೆ ಸ್ಥಳಾಂತರಿಸುವ ಭರವಸೆಯ ಆಧಾರದ ಮೇಲೆ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.

ಹಮಾಸ್ ದಾಳಿಯ ಮೊದಲ ವಾರ್ಷಿಕೋತ್ಸವವು ಹತ್ತಿರದಲ್ಲಿದೆ. ಆದರೆ, ಇಸ್ರೇಲ್ ತನ್ನ ಯುದ್ಧದ ಗುರಿಗಳನ್ನು ಸಾಧಿಸಲು ಇನ್ನೂ ಸಾಧ್ಯವಾಗಿಲ್ಲ. ಅದು ಯಾವುದೇ ಕಾರ್ಯತಂತ್ರ ಅಥವಾ ಅಂತಿಮ ಗುರಿಯನ್ನು ಹೊಂದಿಲ್ಲ ಎಂದು ತೋರುತ್ತದೆ. ಅಲ್ಲದೇ ಇದರಿಂದ ಮತ್ತಷ್ಟು ಭಯೋತ್ಪಾದಕ ಗುಂಪುಗಳು ಸಂಘರ್ಷಕ್ಕೆ ಕೈಜೋಡಿಸಿವೆ. ಈ ಪ್ರದೇಶದಾದ್ಯಂತ, ಪ್ರಾಣಹಾನಿ ಮತ್ತು ವಿನಾಶವು ಹೆಚ್ಚಾಗಿದೆ.

ಗಾಯಗೊಂಡ ಸುಮಾರು ನೂರು ಹಿಜ್ಬುಲ್ಲಾ ಸೈನಿಕರನ್ನು ವೈದ್ಯಕೀಯ ಚಿಕಿತ್ಸೆಗಾಗಿ ತನ್ನ ದೇಶಕ್ಕೆ ಕರೆಸಿಕೊಂಡಿರುವ ಇರಾನ್, ತನ್ನ ದೇಶದಲ್ಲೂ ಪೇಜರ್ ಮಾದರಿಯ ದಾಳಿಗಳು ನಡೆಯಬಹುದು ಎಂದು ಶಂಕಿಸಿದೆ. ಈ ಹಿಂದೆ ಇಸ್ರೇಲ್ ನಡೆಸಿದ ಸೈಬರ್ ದಾಳಿಯಲ್ಲಿ ಇರಾನ್​ ಪರಮಾಣು ಘಟಕದ ಸೆಂಟ್ರಿಫ್ಯೂಜ್ ಗಳನ್ನು ನಿಷ್ಕ್ರಿಯಗೊಳಿಸಿತ್ತು. ಇಂಥ ದಾಳಿಯ ಪುನರಾವರ್ತನೆಯಾಗಬಹುದು. ಲೆಬನಾನ್ ಮೇಲಿನ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ವಿಷಯದಲ್ಲಿ ಅಮೆರಿಕ ಇರಾನ್​​ಗೆ ಎಚ್ಚರಿಕೆ ನೀಡಿದೆ.

ವಿಶ್ವಾಸಾರ್ಹ ಕಂಪನಿಗಳಿಗೆ ಆರ್ಡರ್​: ಜಾಗತಿಕವಾಗಿ, ರಾಷ್ಟ್ರಗಳು ತಮ್ಮ ಉನ್ನತ ನಾಗರಿಕ ಮತ್ತು ಮಿಲಿಟರಿ ವ್ಯವಸ್ಥೆಗಳಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಸಾಫ್ಟ್​ವೇರ್​ಗಳೊಂದಿಗೆ ಸುರಕ್ಷಿತ ನೆಟ್​ವರ್ಕ್​ಗಳನ್ನು ಅಳವಡಿಸಿಕೊಳ್ಳಲು ಆರಂಭಿಸುತ್ತಿವೆ. ಇದಕ್ಕಾಗಿ ಈ ದೇಶಗಳು ವಿಶ್ವಾಸಾರ್ಹ ಕಂಪನಿಗಳಿಗೆ ಹೆಚ್ಚಿನ ಆರ್ಡರ್​ಗಲನ್ನು ನೀಡುತ್ತಿವೆ. ನಂತರ ಇವುಗಳನ್ನು ಮಾರ್ಪಡಿಸಲಾಗುತ್ತದೆ. ಹಿರಿಯ ಕಮಾಂಡರ್​ಗಳ ಲೊಕೇಶನ್ ಪತ್ತೆಯಾಗದಂತೆ ತಡೆಯುವುದು ಮತ್ತು ಸಂವಹನಗಳನ್ನು ಹ್ಯಾಕ್ ಮಾಡುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ. ಇಸ್ರೇಲ್​ ದಾಳಿಯ ನಂತರ ಎಲ್ಲಾ ಸಾಧನಗಳನ್ನು ಪರಿಶೀಲಿಸುವುದು ಈಗ ಕಡ್ಡಾಯವಾಗಿದೆ. ಆದರೆ ಇದು ದುಬಾರಿ ಖರ್ಚಿನ ಪ್ರಕ್ರಿಯೆಯಾಗಿದೆ.

ಮುಖ್ಯವಾಗಿ ಚೀನಾ ಅಥವಾ ಇತರ ವಿರೋಧಿ ದೇಶಗಳಿಂದ ಎಲೆಕ್ಟ್ರಾನಿಕ್ ಹಾರ್ಡ್​ವೇರ್​ ಆಮದು ಮಾಡಿಕೊಳ್ಳುವ ದೇಶಗಳು ತಮ್ಮ ಉಪಕರಣಗಳಲ್ಲಿ ಇದೇ ರೀತಿಯ ಮಾಲ್ವೇರ್ ಏನಾದರೂ ಇದೆಯಾ ಎಂದು ಪರಿಶೀಲನೆ ಮಾಡಲಾರಂಭಿಸಿವೆ. ಅಲ್ಲದೆ ಈ ಅಪಾಯವನ್ನು ತಪ್ಪಿಸಲು ಸ್ಥಳೀಯವಾಗಿ ಸಾಧನಗಳನ್ನು ಉತ್ಪಾದಿಸುವ ಅನಿವಾರ್ಯತೆಗೆ ಸಿಲುಕುತ್ತಿವೆ.

ಇಸ್ರೇಲಿ ಮಾದರಿ ಅಧ್ಯಯನಕ್ಕೆ ಇತರ ರಾಷ್ಟ್ರಗಳು ಮುಂದಾದರೆ?: ವಿಶ್ವದ ರಾಷ್ಟ್ರಗಳು ಈಗ ಇಸ್ರೇಲಿ ಮಾದರಿಯನ್ನು ಅಧ್ಯಯನ ಮಾಡಲು ಪ್ರಯತ್ನಿಸಲಿವೆ ಮತ್ತು ತಮ್ಮ ವಿರೋಧಿಗಳ ಮೇಲೆ ಪರಿಣಾಮಕಾರಿಯಾಗಿ ದಾಳಿ ಮಾಡಲು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಲಿವೆ. ಹೈಬ್ರಿಡ್ ಯುದ್ಧವು ಈಗ ಹೊಸ ಹಂತವನ್ನು ಪ್ರವೇಶಿಸಿದೆ. ಸೂಕ್ಷ್ಮ ಸ್ಥಳಗಳನ್ನು ಟ್ರ್ಯಾಕ್ ಮಾಡುವುದನ್ನು ತಡೆಯಲು ತನ್ನ ಸಿಬ್ಬಂದಿಯು ಇಂಟರ್ನೆಟ್ ಇಲ್ಲದ ಬೇಸಿಕ್​ ಮೊಬೈಲ್ ಫೋನ್​ಗಳನ್ನು ಬಳಸುವುದು ಇನ್ನು ಅನಿವಾರ್ಯವಾಗಬಹುದು.

ಕಾನೂನಾತ್ಮಕವಾಗಿ, ಈ ದಾಳಿಯನ್ನು ಬೂಬಿ ಟ್ರ್ಯಾಪ್ ಎಂದು ಕರೆಯಬಹುದು. ಇಂಥ ದಾಳಿಗಳನ್ನು ಅಂತರರಾಷ್ಟ್ರೀಯವಾಗಿ ನಿಷೇಧಿಸಲಾಗಿದೆ. ಆದಾಗ್ಯೂ, ದಾಳಿಯಲ್ಲಿ ತಾನು ಭಾಗಿಯಾಗಿಲ್ಲ ಎಂದು ಇಸ್ರೇಲ್ ಹೇಳಬಹುದು. ಯಾವುದಾದರೂ ಒಂದು ಮೊಬೈಲ್ ಫೋನ್ ಅನ್ನು ಸ್ಫೋಟಿಸಬಹುದಾದರೂ, ಒಂದೇ ಕಾಲದಲ್ಲಿ ಅನೇಕ ಮೊಬೈಲ್​ಗಳನ್ನು ಹೇಗೆ ಸ್ಪೋಟಿಸಬಹುದು ಎಂಬ ಬಗ್ಗೆ ಇನ್ನು ಸಂಶೋಧನೆಗಳು ನಡೆಯಬಹುದು. ಆಕ್ರಮಣಕಾರಿ ದಾಳಿಗಳಲ್ಲಿ ಡ್ರೋನ್​ಗಳನ್ನು ಬಳಸಿದ ಮೊದಲ ದೇಶ ಯುಎಸ್ ಆಗಿತ್ತು. ಆದರೆ ಈಗ ಪ್ರತಿಯೊಂದು ರಾಷ್ಟ್ರ ಮತ್ತು ಭಯೋತ್ಪಾದಕ ಗುಂಪುಗಳ ಬಳಿ ಈ ಡ್ರೋನ್​ಗಳಿವೆ. ಇಸ್ರೇಲ್ ಒಂದು ಮಾರ್ಗವನ್ನು ತೋರಿಸಿದೆ, ಇತರರು ಅದನ್ನು ಅನುಸರಿಸಬಹುದು. ಇದರಿಂದ ಜಗತ್ತು ಈಗ ಮತ್ತಷ್ಟು ಅಪಾಯಕಾರಿ ಸ್ಥಳವಾಗಬಹುದು.

ಲೇಖನ: ಹರ್ಷ ಕಾಕರ್, ಮೇಜರ್ ಜನರಲ್ (ನಿವೃತ್ತ)

ಇದನ್ನೂ ಓದಿ : ರಾಜಭವನ - ಕರ್ನಾಟಕ ಸರ್ಕಾರದ ಮಧ್ಯೆ ಸಂಘರ್ಷ: ಏನಿದರ ಮರ್ಮ? - Raj Bhavan Government Conflict

ETV Bharat Logo

Copyright © 2024 Ushodaya Enterprises Pvt. Ltd., All Rights Reserved.