ನವದೆಹಲಿ: ಚೆನ್ನೈನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ದಿನದಲ್ಲಿ ಭಾರತ ಪ್ರಾಬಲ್ಯ ಸಾಧಿಸಿದೆ. ಸದ್ಯ 308 ರನ್‌ಗಳ ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ಎರಡನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 81 ರನ್ಗಳನ್ನು ಕಲೆ ಹಾಕಿದೆ. ಶುಭಮನ್ ಗಿಲ್ (33*) ಮತ್ತು ರಿಷಬ್ ಪಂತ್ (12*) ಮೂರನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ದೊಡ್ಡ ಎಡವಟ್ಟೊಂದನ್ನು ಮಾಡಿಕೊಂಡಿದ್ದು, ರೋಹಿತ್ ಶರ್ಮಾ ಅವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೌದು, ಎರಡನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 2 ಬೌಂಡರಿಗಳ ಸಹಾಯದಿಂದ 17 ರನ್ ಗಳಿಸಿ ಉತ್ತಮ ಫಾರ್ಮ್ನಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಮೆಹದಿ ಹಸನ್ ಎಸೆತದಲ್ಲಿ ನಾಟ್ಔಟ್ ಆಗಿದ್ದರೂ ಪೆವಿಲಿಯನ್ಗೆ ಸೇರಿದ್ದಾರೆ. ಇದರಿಂದ ತಂಡದ ನಾಯಕ ರೋಹಿತ್ ಶರ್ಮಾ ಅಸಮಾಧಾನ ಹೊರ ಹಾಕಿದ್ದಾರೆ.
— Kirkit Expert (@expert42983) September 20, 2024
ವಾಸ್ತವವಾಗಿ, 18ನೇ ಓವರ್‌ನ ಎರಡನೇ ಎಸೆತದ ವೇಳೆ ಕೊಹ್ಲಿ ಲೆಗ್ ಸೈಡ್ ಕಡೆಗೆ ಸ್ಟ್ರೋಕ್ ಮಾಡುವುದಕ್ಕಾಗಿ ಚೆಂಡನ್ನು ಹೊಡೆಯಲು ಯತ್ನಿಸಿದ್ದರು. ಆದರೆ, ಚೆಂಡು ಅವರ ಪ್ಯಾಡ್‌ಗೆ ತಗುಲಿತ್ತು. ಬಳಿಕ ಮೆಹದಿ ಹಸನ್ ಅಪೀಲ್ ಮಾಡಿದ್ದರು. ಅಂಪೈರ್ ತಕ್ಷಣವೇ ಔಟ್ ನೀಡಿದ್ದರು. ಇದಾದ ನಂತರ ಕೊಹ್ಲಿ, ಗಿಲ್ ಜೊತೆ ಚರ್ಚಿಸಿ ರಿವಿವ್ಯೂ ತೆಗೆದುಕೊಳ್ಳದೇ ಪೆವಿಲಿಯನ್ಗೆ ಸೇರಿದರು. ಆದರೆ, ಬಳಿಕ ವಿಕೆಟ್ ರಿಪ್ಲೇ ವೇಳೆ ಇದು ನಾಟೌಟ್ ಎಂದು ತಿಳಿದು ಬಂದಿತ್ತು. ಕೊಹ್ಲಿ ಡಿಆರ್ಎಸ್ ತೆಗೆದುಕೊಳ್ಳದೇ ಪೆವಿಲಿಯನ್ಗೆ ಸೇರಿರುವುದರಿಂದ ನಾಯಕ ರೋಹಿತ್ ಶರ್ಮಾ ಕೂಡ ಅಸಮಾಧಾನ ಹೊರ ಹಾಕಿದ್ದಾರೆ. ಸದ್ಯ ಈ ವಿಡಿಯೋ ಭಾರೀ ವೈರಲ್ ಆಗಿದೆ.