ETV Bharat / health

'ಕಪ್ಪು ಆಹಾರಗಳಲ್ಲಿದೆ ಸಮೃದ್ಧವಾದ ಪೋಷಕಾಂಶಗಳು': ಬ್ಲ್ಯಾಕ್​ ಫುಡ್ಸ್ ಲಿಸ್ಟ್ ಇಲ್ಲಿದೆ ನೋಡಿ - Black foods benefits

author img

By ETV Bharat Health Team

Published : 2 hours ago

Black foods benefits: ಪೌಷ್ಟಿಕಾಂಶ ಪಡೆಯಲು ಬಣ್ಣಬಣ್ಣದ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವ ಅನೇಕ ಜನರಿಗೆ ಕಪ್ಪು ಆಹಾರಗಳಲ್ಲಿ ಸಮೃದ್ಧವಾಗಿರುವ ಪೋಷಕಾಂಶಗಳ ಬಗ್ಗೆ ತಿಳಿದಿದೆಯೇ? ಹಾಗಾದರೆ, ಕೆಲವು ಕಪ್ಪು ಆಹಾರಗಳು ಮತ್ತು ಅವುಗಳಿಂದ ದೊರೆಯುವ ಪ್ರಯೋಜನಗಳನ್ನು ಈ ಸ್ಟೋರಿಯಲ್ಲಿ ತಿಳಿಯೋಣ

BLACK RICE BENEFITS  BLACK GRAPES BENEFITS  NUTRITION IN BLACK FOODS  BLACK FOODS BENEFITS
ಬ್ಲ್ಯಾಕ್​ ಫುಡ್ಸ್ (GETTY IMAGES)

Black foods benefits: ಕಪ್ಪು ಬಣ್ಣವನ್ನು ಯಾರು ಇಷ್ಟಪಡುವುದಿಲ್ಲ? ಅದೇ ರೀತಿ ಕಪ್ಪು ಆಹಾರಗಳು ನಮ್ಮ ಉಪಹಾರ, ಊಟದ ತಟ್ಟೆಯಲ್ಲಿ ಇದ್ದರೆ ಯಾವೆಲ್ಲಾ ಪ್ರಯೋಜನಗಳು ಲಭಿಸತ್ತೇವೆ? ಈ ಕಪ್ಪು ಆಗಿ ಕಾಣುವ ಆಹಾರಗಳು ಆರೋಗ್ಯಕ್ಕೆ ಬಹು ಉಪಯೋಗಗಳನ್ನು ನೀಡುತ್ತವೆ ಎನ್ನುತ್ತಾರೆ ತಜ್ಞರು.

ಕೆಲವು ಕಪ್ಪು ಆಹಾರಗಳು ಆಂಥೋಸಯಾನಿನ್‌ಗಳೆಂಬ ವರ್ಣದ್ರವ್ಯಗಳನ್ನು ಹೊಂದಿರುತ್ತವೆ. ಅದರಿಂದ ಅವುಗಳನ್ನು ಕಪ್ಪು, ನೀಲಿ ಅಥವಾ ನೇರಳೆ ಬಣ್ಣದಲ್ಲಿ ಕಾಣುವಂತೆ ಮಾಡುತ್ತದೆ. ಈ ಆಹಾರಗಳಲ್ಲಿನ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಇತರ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮತ್ತು ರೋಗಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ದೇಹವನ್ನು ಶಕ್ತಗೊಳಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ, ನಾವು ನೋಡುತ್ತಾ, ತಿನ್ನುತ್ತಾ ಬೆಳೆದ ಕೆಲವು ಕಪ್ಪು ಆಹಾರಗಳ ಪ್ರಯೋಜನಗಳನ್ನು ಇದೀಗ ತಿಳಿದುಕೊಳ್ಳೋಣ.

BLACK RICE BENEFITS  BLACK GRAPES BENEFITS  NUTRITION IN BLACK FOODS  BLACK FOODS BENEFITS
ಕಪ್ಪು ಅಕ್ಕಿ​ (GETTY IMAGES)

ಕಪ್ಪು ಅಕ್ಕಿ​: ನಮ್ಮ ಸಾಂಪ್ರದಾಯಿಕ ಅಕ್ಕಿಗಳಲ್ಲಿ ಒಂದಾದ ಕಪ್ಪು ಅಕ್ಕಿಯನ್ನು ಆಗ್ನೇಯ ಏಷ್ಯಾದ ದೇಶಗಳಲ್ಲಿ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಇದನ್ನು ಭಾರತದಲ್ಲಿ ಎಲ್ಲರೂ ಬಳಸುತ್ತಿದ್ದರು. ಪ್ರಾಚೀನ ಚೀನಾದಲ್ಲಿ ರಾಜರು ಮಾತ್ರ ಈ ಅಕ್ಕಿಯನ್ನು ತಿನ್ನುತ್ತಿದ್ದರು. ಸಾಮಾನ್ಯ ಜನರಿಗೆ ಇದನ್ನು ನಿಷೇಧಿಸಲಾಗಿದೆ. ಕಾರಣ ಅದರಲ್ಲಿರುವ ಪೋಷಕಾಂಶಗಳು ಮತ್ತು ಅದು ಒದಗಿಸುವ ಆರೋಗ್ಯ ಪ್ರಯೋಜನಗಳು ಅನೇಕ. ಕಪ್ಪು ಕಂದು ಅಕ್ಕಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಸೇರಿದಂತೆ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇದು ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದರಲ್ಲಿರುವ ಫೈಬರ್ ಮತ್ತು ಆ್ಯಂಟಿ - ಆಕ್ಸಿಡೆಂಟ್‌ಗಳು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ. ತೂಕ ಇಳಿಸಿಕೊಳ್ಳಲು ಇದು ತುಂಬಾ ಸಹಕಾರಿ. ಈ ಅಕ್ಕಿಯಿಂದ ಪುಲಾವ್, ಬಿರಿಯಾನಿ, ಕಡುಬು, ದೋಸೆ, ಇಡ್ಲಿ ಇತ್ಯಾದಿಗಳನ್ನು ಮಾಡಬಹುದು.

ಕಪ್ಪು ಉದ್ದಿನ ಬೇಳೆ (GETTY IMAGES)

ಕಪ್ಪು ಉದ್ದಿನ ಬೇಳೆ: ಕಪ್ಪು ಉದ್ದಿನ ಬೇಳೆಯಲ್ಲಿ ಫೈಬರ್, ಕಬ್ಬಿಣ, ಫೋಲೇಟ್, ಪ್ರೋಟೀನ್ ಮತ್ತು ಮೆಗ್ನೀಸಿಯಮ್ ಸಮೃದ್ಧವಾಗಿದೆ. ಇದು ದೇಹದಲ್ಲಿ ಆರೋಗ್ಯಕರ ಕೊಬ್ಬಿನ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ಇದರಲ್ಲಿನ ಪೊಟ್ಯಾಸಿಯಮ್ ಅಂಶವು ರಕ್ತ ಪರಿಚಲನೆ ಸುಧಾರಿಸುತ್ತದೆ. ಮೂಳೆ ಸವೆತದಿಂದ ಉಂಟಾಗುವ ಸೊಂಟ ಮತ್ತು ಕೀಲು ನೋವಿಗೆ ಕಪ್ಪು ಉದ್ದಿನ ಬೇಳೆ ವರದಾನವಾಗಿದೆ. ಅಂತೆಯೇ, ನಿಮ್ಮ ಆಹಾರದಲ್ಲಿ ಕಪ್ಪು ಉದ್ದಿನ ಬೇಳೆ ಸೇರಿಸಿದರೆ ಉತ್ತಮ.

ಕರಿ ಮೆಣಸು (GETTY IMAGES)

ಕರಿ ಮೆಣಸು: ಕೊಲೆಸ್ಟ್ರಾಲ್ ಮತ್ತು ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಕರಿಮೆಣಸು, ದೇಹಕ್ಕೆ ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದಲ್ಲದೇ, ಇದು ಶೀತ, ಶ್ವಾಸಕೋಶ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ. ಕೋವಿಡ್​ 19 ಸಮಯದಲ್ಲಿ ಕರಿಮೆಣಸಿನ ಹಿರಿಮೆ ಎಲ್ಲರಿಗೂ ತಿಳಿದಿದೆ ಎಂದು ಹೇಳುತ್ತಾರೆ ತಜ್ಞರು.

ಕಪ್ಪು ಆಲಿವ್​ಗಳು (GETTY IMAGES)

ಕಪ್ಪು ಆಲಿವ್​ಗಳು: ಆಲಿವ್ ಪಾಶ್ಚಾತ್ಯ ಆಹಾರಗಳಲ್ಲಿ ಒಂದಾಗಿದೆ. ಭಾರತದಲ್ಲಿ, ಹೆಚ್ಚಿನವರು ಇದನ್ನು ಪಿಜ್ಜಾಗಳು ಮತ್ತು ಅಂಗಡಿಯಲ್ಲಿ ಖರೀದಿಸಿದ ಪಾಸ್ಟಾಗಳಲ್ಲಿ ನೋಡಿದ್ದೇವೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕಪ್ಪು ಆಲಿವ್‌ಗಳಿಂದ ತಯಾರಿಸಿದ ಉಪ್ಪಿನಕಾಯಿ ಮತ್ತು ಪಾನೀಯಗಳು ಮೊನೊಸಾಚುರೇಟೆಡ್ ಕೊಬ್ಬುಗಳು ಮತ್ತು ಪಾಲಿಫಿನಾಲ್‌ಗಳನ್ನು ಹೊಂದಿರುತ್ತವೆ. ಅವರು ಕಣ್ಣಿನ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮತ್ತು ಚರ್ಮ ಮತ್ತು ಕೂದಲಿನ ಆರೈಕೆಗೆ ಮಹತ್ವದ ಕೊಡುಗೆ ನೀಡುತ್ತದೆ.

ಕಪ್ಪು ಎಳ್ಳು (GETTY IMAGES)

ಕಪ್ಪು ಎಳ್ಳು: ಕಪ್ಪು ಎಳ್ಳಿನಿಂದ ಆರೋಗ್ಯದ ಹಲವು ಲಾಭಗಳು ಲಭಿಸುತ್ತವೆ. ತೂಕ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಕಪ್ಪು ಎಳ್ಳು ತಿನ್ನುವುದು ಉತ್ತಮ ಫಲಿತಾಂಶ ನೀಡುತ್ತದೆ. ಕಪ್ಪು ಎಳ್ಳು ಫೈಬರ್, ಪ್ರೋಟೀನ್, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್ ಇ ಮುಂತಾದ ಪೋಷಕಾಂಶಗಳ ಉಗ್ರಾಣವಾಗಿದೆ. ಕೀಲು ನೋವು ಮತ್ತು ಊತವನ್ನು ಕಡಿಮೆ ಮಾಡಲು ಕಪ್ಪು ಎಳ್ಳು ಅತ್ಯುತ್ತಮ ಔಷಧಿಯಾಗಿದೆ.

ಕಪ್ಪು ದ್ರಾಕ್ಷಿ (GETTY IMAGES)

ಕಪ್ಪು ದ್ರಾಕ್ಷಿ: ಮಲಬದ್ಧತೆ, ರಕ್ತದೊತ್ತಡ, ಕೂದಲು ಬಿಳಿಯಾಗುವುದನ್ನು ತಡೆಯುವುದು, ಮೂಳೆಗಳ ಆರೋಗ್ಯ, ಕ್ಯಾನ್ಸರ್ ವಿರುದ್ಧ ಹೋರಾಡುವುದು, ಕಪ್ಪು ದ್ರಾಕ್ಷಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಲಿವೊಲಿಕ್ ಆಮ್ಲದಿಂದ ಸಮೃದ್ಧವಾಗಿದೆ ಎಂದು ತಜ್ಞರು ತಿಳಿಸುತ್ತಾರೆ.

ಪ್ರಮುಖ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.