ಕರ್ನಾಟಕ

karnataka

ETV Bharat / bharat

POSH ಕಾಯ್ದೆ ಸಮರ್ಪಕ ಜಾರಿ ವಿಳಂಬ ಆತಂಕಕಾರಿ; ಆಂತರಿಕ ದೂರು ಸಮಿತಿ ರಚಿಸಲು ಸುಪ್ರೀಂ ​ತಾಕೀತು

ಕೆಲಸದ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯನ್ನು ಸಮರ್ಪಕವಾಗಿ ಜಾರಿ ಮಾಡಲು ಸುಪ್ರೀಂ ಕೋರ್ಟ್ ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ತಿಳಿಸಿದೆ.

POSH ಕಾಯ್ದೆ ಸಮರ್ಪಕ ಜಾರಿ ವಿಳಂಬ
ಸಾಂದರ್ಭಿಕ ಚಿತ್ರ (ETV Bharat)

By PTI

Published : Dec 3, 2024, 10:41 PM IST

ನವದೆಹಲಿ:ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಕಿರುಕುಳವನ್ನು ತಡೆಯಲು ಲೈಂಗಿಕ ದೌರ್ಜನ್ಯ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ತಡೆ ಕಾಯ್ದೆ-2013(POSH) ಅನ್ನು ರಾಷ್ಟ್ರವ್ಯಾಪಿ ಜಾರಿ ಮಾಡುವ ಉದ್ದೇಶದಿಂದ ಸುಪ್ರೀಂ ಕೋರ್ಟ್​ ಮಂಗಳವಾರ ಮಹತ್ವದ ಆದೇಶ ನೀಡಿತು.

ಎಲ್ಲಾ ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ ರಚಿಸಬೇಕು. ಈ ಬಗ್ಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಾಹಿತಿ ನೀಡಬೇಕು ಎಂದಿದೆ.

ಕೆಲಸದ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯದ ಕುರಿತು ಸಲ್ಲಿಸಲಾದ ಅರ್ಜಿ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಎನ್.ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು POSH ಕಾಯ್ದೆಯನ್ನು ದೇಶಾದ್ಯಂತ ಏಕರೂಪದಲ್ಲಿ ಜಾರಿಗೆ ತೆರಬೇಕು ಎಂದು ಹೇಳಿದೆ.

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸರ್ಕಾರಗಳು ಪ್ರತಿ ಜಿಲ್ಲೆಗೆ ಒಬ್ಬ ಅಧಿಕಾರಿಯನ್ನು ಡಿಸೆಂಬರ್ 31ರೊಳಗೆ ನೇಮಿಸಬೇಕು. ಆ ಅಧಿಕಾರಿಯು 2025ರ ಜನವರಿ 31ರೊಳಗೆ ಸ್ಥಳೀಯ ದೂರುಗಳ ಸಮಿತಿಯನ್ನು ರಚಿಸಬೇಕು. ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಆಗಬೇಕು ಎಂದು ಕೋರ್ಟ್​ ನಿರ್ದೇಶನ ನೀಡಿದೆ.

ಪೂರ್ಣ ವರದಿ ಸಲ್ಲಿಸಿ:ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿ ಇದೆಯೇ ಇಲ್ಲವೇ? ಎಂಬುದರ ಮಾಹಿತಿಯನ್ನು ಆಯಾ ಜಿಲ್ಲಾಧಿಕಾರಿಗಳು ಸಂಗ್ರಹಿಸಬೇಕು. ಬಳಿಕ ಅವರು ಸರ್ಕಾರಕ್ಕೆ ಪೂರ್ಣ ವರದಿಯನ್ನು ನೀಡಬೇಕು ಎಂದು ಇದೇ ವೇಳೆ ಹೇಳಿದೆ.

ತನ್ನ ಸೂಚಿತ ಆದೇಶಗಳು ಪಾಲನೆ ಆಗುತ್ತಿವೆಯೇ ಎಂಬುದನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮೇಲ್ವಿಚಾರಣೆ ಮಾಡಬೇಕು. ಆಂತರಿಕ ದೂರು ಸಮಿತಿ ರಚನೆಯು ಮಾರ್ಚ್​ 31ರೊಳಗೆ ಮುಗಿಯಬೇಕು ಎಂದು ಪೀಠ ಗಡುವು ನೀಡಿದೆ.

ಎಲ್ಲಾ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಆರೋಪಗಳನ್ನು ತನಿಖೆ ಮಾಡಲು ಸಮಿತಿಗಳನ್ನು ರಚಿಸಲಾಗಿದೆಯೇ ಎಂಬುದನ್ನು ಕಾಲಮಿತಿಯೊಳಗೆ ಪರಿಶೀಲಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಳೆದ ವರ್ಷವೇ ಕೋರ್ಟ್​ ಸೂಚಿಸಿತ್ತು. ಈ ಬಗ್ಗೆ ಹೆಚ್ಚಿನ ಪ್ರಗತಿ ಕಾಣದ ಕಾರಣ ಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದೆ.

ಜಾರಿಯಲ್ಲಿ ಲೋಪ ಆತಂಕಕಾರಿ:2013 ರ ಕಾಯ್ದೆಯನ್ನು ಇಷ್ಟು ದೀರ್ಘ ಅವಧಿಯಲ್ಲೂ ಜಾರಿ ಸಮರ್ಪಕವಾಗಿ ಮಾಡದೇ ಇರುವುದು ಗಂಭೀರ ಲೋಪ ಎಂದು ಕೋರ್ಟ್​ ಹೇಳಿತು. ಸೂಕ್ಷ್ಮ ವಿಚಾರದಲ್ಲೂ ಸರ್ಕಾರಗಳು ಹೆಚ್ಚಿನ ಆಸ್ಥೆ ವಹಿಸದೇ ಇರುವುದು ಆತಂಕಕಾರಿ. ಇದೊಂದು ಕ್ಷಮಾರ್ಹ ತಪ್ಪಲ್ಲ. ಇದು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಅಧಿಕಾರಿಗಳು ಮತ್ತು ಖಾಸಗಿ ಉದ್ಯಮಗಳ ಮೇಲೆ ಅನುಮಾ ಮೂಡಿಸುವಂತಿದೆ ಎಂದು ಕೋರ್ಟ್​ ಹೇಳಿದೆ.

ಇದನ್ನೂ ಓದಿ:ಆರು ಕಾರ್ಮಿಕರು, ವೈದ್ಯನ ಕೊಂದಿದ್ದ ಉಗ್ರನನ್ನು ಹೊಡೆದುರುಳಿಸಿದ ಸೇನೆ

ABOUT THE AUTHOR

...view details