ಕೋಝಿಕ್ಕೋಡ್ (ಕೇರಳ): ವಯನಾಡ್ ಭೂಕುಸಿತದಲ್ಲಿ 401 ಮೃತ ದೇಹಗಳು ಮತ್ತು ದೇಹದ ಭಾಗಗಳ ಡಿಎನ್ಎ ಪರೀಕ್ಷೆ ಪೂರ್ಣಗೊಂಡಿದೆ. ಇದರಲ್ಲಿ 349 ದೇಹದ ಭಾಗಗಳು 248 ಜನರಿಗೆ ಸೇರಿದ್ದು ಎಂದು ಗುರುತಿಸಲಾಗಿದೆ. 121 ಪುರುಷರು ಮತ್ತು 127 ಮಹಿಳೆಯರನ್ನು ಗುರುತಿಸಲಾಗಿದೆ. ಇದುವರೆಗೆ 437 ದೇಹದ ಭಾಗಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚು ಕೊಳೆತ ದೇಹದ ಭಾಗಗಳ DNA ಫಲಿತಾಂಶಗಳು ಇನ್ನಷ್ಟು ವಿಳಂಬವಾಗುತ್ತವೆ. ಮುಂದಿನ ಹಂತವೆಂದರೆ ಸಂಬಂಧಿಕರ ಡಿಎನ್‌ಎಯೊಂದಿಗೆ ಹೊಂದಾಣಿಕೆ ಮಾಡುವ ಮೂಲಕ ವ್ಯಕ್ತಿಯನ್ನು ಗುರುತಿಸುವುದು. ಇದಕ್ಕಾಗಿ 119 ರಕ್ತದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಫಲಿತಾಂಶ ಬಂದರೆ ಸತ್ತವರ ಸಂಖ್ಯೆ ಮತ್ತು ಅವರ ವಿವರಗಳ ಬಗ್ಗೆ ಸ್ಪಷ್ಟತೆ ಸಿಗಲಿದೆ. ಸರ್ಕಾರದ ಪ್ರಕಾರ, ಇದುವರೆಗೆ 231 ಸಾವುಗಳು ದೃಢಪಟ್ಟಿವೆ. 128 ಮಂದಿ ನಾಪತ್ತೆಯಾಗಿದ್ದಾರೆ.