ಕರ್ನಾಟಕ

karnataka

ETV Bharat / bharat

ಈ ನಗರದಲ್ಲಿ ಡೆಂಗ್ಯೂ ಅಬ್ಬರ: ಇದುವರೆಗೆ 8 ಮಂದಿ ಬಲಿ - Dengue and fever epidemic spread - DENGUE AND FEVER EPIDEMIC SPREAD

ಸೂರತ್‌ನಲ್ಲಿ ಡೆಂಗ್ಯೂ ಮತ್ತು ಜ್ವರ ಸಾಂಕ್ರಾಮಿಕದ ಅಬ್ಬರ ಜೋರಾಗಿದ್ದು, ಜನರು ಮನೆಯಿಂದ ಹೊರ ಬರಲು ಅಂಜುವಂತಹ ಪರಿಸ್ಥಿತಿ ತಲೆದೋರಿದೆ. ಇದುವರೆಗೆ ಮಾರಕ ಡೆಂಗ್ಯೂಗೆ 8 ಜನರು ಸಾವನ್ನಪ್ಪಿದ್ದಾರೆ. ಸ್ಥಳೀಯ ಆಡಳಿತದ ವಿರುದ್ಧ ಆಡಳಿತಾರೂಢ ಬಿಜೆಪಿ ಶಾಸಕರೇ ತರಾಟೆಗೆ ತೆಗೆದುಕೊಂಡಿದ್ದಾರೆ.

Dengue and fever epidemic spread in Surat, 8 people dead so far
ಸೂರತ್​​ನಲ್ಲಿ ಡೆಂಗ್ಯೂ ಅಬ್ಬರ: ಇದುವರೆಗೆ 8 ಮಂದಿ ಬಲಿ (ETV Bharat)

By ETV Bharat Karnataka Team

Published : Sep 16, 2024, 7:41 PM IST

ಸೂರತ್, ಗುಜರಾತ್​: ಸದ್ಯ ಜಿಲ್ಲೆಯಲ್ಲಿ ಕೆಲವೆಡೆ ಬಿಸಿಲು, ಮತ್ತೆ ಕೆಲವೆಡೆ ಸಣ್ಣ ಮಳೆಯ ವಾತಾವರಣ, ಈ ದ್ವಂದ್ವ ವಾತಾವರಣದಿಂದ ಜನರು ಅನಾರೋಗ್ಯಕ್ಕೆ ಈಡಾಗುತ್ತಿದ್ದಾರೆ. ಇನ್ನೊಂದೆಡೆ ವೈರಲ್‌ ಜ್ವರದ ಹಾವಳಿ ಜೋರಾಗಿದೆ. ಇದರಿಂದ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ. ಮತ್ತೊಂದು ಕಡೆ ಸೂರತ್ ನಗರದಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ.

ರೋಗಿಗಳಿಂದಾಗಿ ತುಂಬಿ ತುಳುಕುತ್ತಿರುವ ಆಸ್ಪತ್ರೆಗಳು (ETV Bharat)

ಆಸ್ಪತ್ರೆಗೆ ದಾಖಲಾದವರಲ್ಲಿ ಶೇ.30ರಷ್ಟು ರೋಗಿಗಳು ಡೆಂಗ್ಯೂ ಪೀಡಿತರಾಗಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದ್ದು, ತನಿಖೆ ಆರಂಭಿಸಿದೆ.

ಆಸ್ಪತ್ರೆಯಲ್ಲಿನ ವಾರ್ಡ್‌ಗಳ ಹೊರಗೂ ಹಾಸಿಗೆ: ಸೂರತ್‌ನ ಹೊಸ ಸಿವಿಲ್ ಆಸ್ಪತ್ರೆಯ ವಾರ್ಡ್‌ಗಳು ರೋಗಿಗಳಿಂದ ತುಂಬಿರುವುದರಿಂದ, ಈಗ ಸೂರತ್ ಸಿವಿಲ್ ಆಸ್ಪತ್ರೆಯ ವಾರ್ಡ್‌ಗಳ ಹೊರಗೆ ಹಾಸಿಗೆಗಳನ್ನು ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನು ನೋಡಿದರೆ ಡೆಂಗ್ಯೂ ಹಾಗೂ ವೈರಲ್​ ಫೀವರ್​​​ ಸಾಂಕ್ರಮಿಕದ ಅಬ್ಬರ ಎಷ್ಟು ಜೋರಾಗಿದೆ ಎಂಬುದು ಗೊತ್ತಾಗುತ್ತಿದೆ. ಮಾರಕ ಡೆಂಗ್ಯೂ ಜ್ವರಕ್ಕೆ ಇದುವರೆಗೆ 8 ಮಂದಿ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ಹೇಳುತ್ತಿದ್ದಾರೆ.

ಗುಜರಾತ್​ನಲ್ಲಿ ವೈರಲ್​ ಫೀವರ್​ ಹೆಚ್ಚಳ (ETV Bharat)

ಪಾಲಿಕೆ ಆಯುಕ್ತರಿಗೆ ಶಾಸಕ ಕುಮಾರ ಕನಾನಿ ಪತ್ರ:ಸೂರತ್‌ನಲ್ಲಿ ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಹಾಗೂ ಮಾಜಿ ರಾಜ್ಯ ಸಚಿವ ಕುಮಾರ್ ಕನಾನಿ, ಆರೋಗ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಡಳಿತದ ಕಣ್ಣು ತೆರೆಸುವಂತೆ ಶಾಸಕರು ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಡೆಂಗ್ಯೂ, ಮಲೇರಿಯಾದಂತಹ ರೋಗಗಳು ಹೆಚ್ಚುತ್ತಿರುವ ಬಗ್ಗೆ ಉತ್ತರ ಕೋರಿ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವ್ಯವಸ್ಥೆ ಸುಪ್ತ ಸ್ಥಿತಿಯಲ್ಲಿದೆ ಎಂದು ಕುಮಾರ್ ಕಣಣಿ ಹೇಳಿದರು. ಸೂರತ್ ಭಾಗದಲ್ಲಿ ಔಷಧ ಸಿಂಪಡಣೆಯಾಗುತ್ತಿಲ್ಲ ಎಂದು ಕುಮಾರ್ ಕನಾನಿ ಆರೋಪಿಸಿದ್ದಾರೆ.

ಇದನ್ನು ಓದಿ:ಇಲ್ಲಿನ 1,864 ಸರ್ಕಾರಿ ಶಾಲೆಗಳಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿಯೂ ಇಲ್ಲ: ಆಘಾತಕಾರಿ ಮಾಹಿತಿ ಬಹಿರಂಗ - Telangana Schools

ABOUT THE AUTHOR

...view details