ಕರ್ನಾಟಕ

karnataka

ETV Bharat / bharat

ವಿಚಿತ್ರ ಸಂಗತಿ: ಮೃತಪಟ್ಟ ವ್ಯಕ್ತಿ ಮರಣೋತ್ತರ ಪರೀಕ್ಷೆಗೆ ಕರೆದೊಯ್ಯುವಾಗ ಎದ್ದು ಕುಳಿತ- ಹೀಗೂ ಉಂಟೆ!! - dead person alive

ಕೆಲವೊಂದು ಘಟನೆಗಳು ಹೇಗೆ ನಡೆದವು ಎಂಬುದೇ ತಿಳಿಯುವುದಿಲ್ಲ. ವಿಸ್ಮಯ ಮತ್ತು ಅಚ್ಚರಿಗೆ ಕಾರಣವಾಗಿರುತ್ತವೆ. ಅಂಥದ್ದೇ ಒಂದು ವಿದ್ಯಮಾನ ಬಿಹಾರದ ಆಸ್ಪತ್ರೆಯಲ್ಲಿ ಘಟಿಸಿದೆ. ಏನಾಯ್ತು ಎಂಬುದನ್ನು ಮುಂದೆ ಓದಿ.

ಮೃತಪಟ್ಟ ವ್ಯಕ್ತಿ ಮರಣೋತ್ತರ ಪರೀಕ್ಷೆಗೆ ಕರೆದೊಯ್ಯುವಾಗ ಎದ್ದು ಕುಳಿತ
ಮೃತಪಟ್ಟ ವ್ಯಕ್ತಿ ಮರಣೋತ್ತರ ಪರೀಕ್ಷೆಗೆ ಕರೆದೊಯ್ಯುವಾಗ ಎದ್ದು ಕುಳಿತ (ETV Bharat)

By ETV Bharat Karnataka Team

Published : Sep 23, 2024, 6:21 PM IST

ನಳಂದಾ (ಬಿಹಾರ):ಇಲ್ಲಿನ ಆಸ್ಪತ್ರೆಯಲ್ಲಿನ ಸ್ನಾನಗೃಹದಲ್ಲಿ ವ್ಯಕ್ತಿಯೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಎಷ್ಟೇ ಪ್ರಯತ್ನಪಟ್ಟರೂ ಆತ ಎಚ್ಚರವಾಗಿರಲಿಲ್ಲ. ಇದರಿಂದ ಮೃತಪಟ್ಟಿದ್ದಾನೆ ಎಂದು ಪರಿಗಣಿಸಿ ವೈದ್ಯರು ಮತ್ತು ಪೊಲೀಸರು ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದರು. ಈ ವೇಳೆ, ಆ ವ್ಯಕ್ತಿ ದಿಢೀರ್​ ಎದ್ದು ಕುಳಿತಿದ್ದಾನೆ. ಇದು ಎಲ್ಲರಲ್ಲಿ ಅಚ್ಚರಿಗೆ ಕಾರಣವಾಗಿದೆ.

ಘಟನೆಯ ವಿವರ: ಸ್ವಚ್ಛತಾ ಸಿಬ್ಬಂದಿ ಆಸ್ಪತ್ರೆಯಲ್ಲಿನ ಸ್ನಾನಗೃಹವನ್ನು ಶುಚಿ ಮಾಡಲು ಬಂದಾಗ, ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ವ್ಯಕ್ತಿಯ ಚಪ್ಪಲಿ ಹೊರಗೆ ಬಿದ್ದಿದ್ದವು. ಬಹಳ ಸಮಯ ಕಳೆದರೂ ಆತ ಬಾಗಿಲು ತೆರೆಯದಿದ್ದಾಗ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕಾಗಮಿಸಿ ಆರಕ್ಷಕರು ಬಾಗಿಲು ಒಡೆದಿದ್ದಾರೆ. ಈ ವೇಳೆ, ವ್ಯಕ್ತಿಯೊಬ್ಬ ಸ್ನಾನಗೃಹದಲ್ಲಿ ಪ್ರಜ್ಞಾಹೀನವಾಗಿ ಬಿದ್ದಿರುವುದು ಕಂಡು ಬಂದಿದೆ.

ಆತನನ್ನು ಎಚ್ಚರಿಸಲು ಪೊಲೀಸರು ಮತ್ತು ವೈದ್ಯ ಸಿಬ್ಬಂದಿ ಪ್ರಯತ್ನಿಸಿದ್ದಾರೆ. ಆದರೆ, ಎಚ್ಚರಗೊಂಡಿರಲಿಲ್ಲ. ಹೃದಯಾಘಾತವಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ವೈದ್ಯರು ಕೂಡ ತಪಾಸಣೆ ನಡೆಸಿ, ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದರು. ವ್ಯಕ್ತಿಯನ್ನು ಸಾಗಿಸಲು ಸ್ಟ್ರೆಚರ್ ತರಲಾಯಿತು. ಈ ವೇಳೆ ಶಬ್ಧ ಕೇಳಿದ ವ್ಯಕ್ತಿ ದಿಢೀರ್​ ಎದ್ದು ಕುಳಿತಿದ್ದಾನೆ.

ಮೃತಪಟ್ಟಿದ್ದಾನೆ ಎಂದುಕೊಂಡಿದ್ದ ವ್ಯಕ್ತಿ ಎದ್ದು ಕುಳಿತಿದ್ದು ಕಂಡು ಎಲ್ಲರಲ್ಲೂ ಅಚ್ಚರಿ ಉಂಟಾಗಿದೆ. ಈ ವೇಳೆ ಆತನನ್ನು ವಿಚಾರಿಸಿದಾಗ, ಔಷಧ ತೆಗೆದುಕೊಳ್ಳಲು ಆಸ್ಪತ್ರೆಗೆ ಬಂದಿದ್ದೆ. ಈ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದೆ ಎಂದು ತಿಳಿಸಿದ್ದಾನೆ. ಇನ್ನೂ, ಈ ವ್ಯಕ್ತಿ ಪಾನಮತ್ತನಾಗಿದ್ದ ಎಂದು ಅಲ್ಲಿದ್ದವರು ಆರೋಪಿಸಿದ್ದಾರೆ.

ವ್ಯಕ್ತಿ ಹೇಳೋದೇನು?:ತನ್ನ ಹೆಸರು ರಾಕೇಶ್. ಆಸ್ತಾವನ್ ಪೊಲೀಸ್ ಠಾಣೆ ವ್ಯಾಪ್ತಿಯ ಜಿರೈನ್ ಗ್ರಾಮದವ. ನಾನು ಔಷಧ ತೆಗೆದುಕೊಳ್ಳಲು ಆಸ್ಪತ್ರೆಗೆ ಬಂದಿದ್ದೆ. ಆದರೆ, ಇಲ್ಲಿ ಹೇಗೆ ಬಿದ್ದಿದ್ದೇನೆ ಎಂದು ಗೊತ್ತಿಲ್ಲ. ನಾನು ಮದ್ಯಪಾನ ಮಾಡಿಲ್ಲ. ನನಗೆ ಏನಾಗಿದೆ ಎಂದು ಗೊತ್ತಿಲ್ಲ ಎಂದು ಆತ ತಿಳಿಸಿದ್ದಾನೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್​ ಅಧಿಕಾರಿ ಬಿಯಾಸ್​ ಪ್ರಸಾದ್​, ಸ್ನಾನಗೃಹದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ ಎಂದು ಮಾಹಿತಿ ಬಂದಿತು. ಈ ವೇಳೆ ಅಲ್ಲಿಗೆ ಹೋಗಿ ನೋಡಿದಾಗ ವ್ಯಕ್ತಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ಆತನನ್ನು ಎಚ್ಚರಿಸಲು ಮುಂದಾದರೂ, ಪ್ರಜ್ಞೆ ಬಂದಿರಲಿಲ್ಲ. ಹೃದಯಾಘಾತವಾಗಿರುವ ಸಾಧ್ಯತೆ ಹಿನ್ನೆಲೆ ಮರಣೋತ್ತರ ಪರೀಕ್ಷೆಗೆ ಮುಂದಾದಾಗ, ಆತ ಎದ್ದು ಕುಳಿತಿದ್ದಾನೆ. ಸದ್ಯ ಆತನನ್ನು ತಪಾಸಣೆ ನಡೆಸಲಾಗಿದ್ದು, ಉತ್ತಮವಾಗಿದ್ದಾನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:'ಸಂವಿಧಾನ, ಸಿಎಂ ಸ್ಥಾನಕ್ಕೆ ಅತಿಶಿ ಅಪಮಾನ': ಖಾಲಿ ಕುರ್ಚಿ ಇಟ್ಟುಕೊಂಡಿದ್ದಕ್ಕೆ ಬಿಜೆಪಿ, ಕಾಂಗ್ರೆಸ್ ಕಿಡಿ - BJP Congress attack on Atishi

ABOUT THE AUTHOR

...view details