Cyber Scam:ಇತ್ತೀಚಿಗೆ ಕೆಲವರು ಹಳೆ ಸೆಲ್ ಫೋನ್ ಕೊಂಡು ಸ್ಟೀಲ್ ಅಡುಗೆ ಸಾಮಗ್ರಿ ನೀಡುತ್ತೇವೆ ಎಂದು ಆಟೋ ರಿಕ್ಷಾಗಳಲ್ಲಿ ಓಡಾಡುತ್ತಿದ್ದಾರೆ. ಅನೇಕರು ಇವರ ಮಾತು ನಂಬಿ ಮನೆಯಲ್ಲಿದ್ದ ಹಳೆಯ ಫೋನ್‌ಗಳನ್ನು ಕೊಟ್ಟು ಅಡುಗೆ ಪಾತ್ರೆಗಳನ್ನು ಖರೀದಿಸುತ್ತಿದ್ದಾರೆ. ಆದರೆ ಈ ರೀತಿ ಹಳೆ ಫೋನ್‌ಗಳನ್ನು ಕೊಟ್ಟು ಅಡುಗೆ ಸಾಮಗ್ರಿ ಖರೀದಿಸುವ ಮುನ್ನ ಒಮ್ಮೆ ಯೋಚಿಸಬೇಕು ಎನ್ನುತ್ತಾರೆ ಪೊಲೀಸರು. ಏಕೆಂದರೆ, ಈ ಸೆಲ್ ಫೋನ್‌ಗಳನ್ನು ಸೈಬರ್ ವಂಚಕರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಬಿಹಾರದ ಕೆಲವರು ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಹಳೆಯ ಸೆಲ್ ಫೋನ್‌ಗಳನ್ನು ಖರೀದಿಸುತ್ತಿದ್ದಾರೆ. ಇತ್ತೀಚೆಗೆ, ಸೈಬರ್ ಅಪರಾಧಿಗಳು ಜಾರ್ಖಂಡ್ ರಾಜ್ಯದ ದೇವಗಢದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸೈಬರ್ ಕ್ರೈಂ ಇಲಾಖೆ ಗುರುತಿಸಿದೆ. ಪೊಲೀಸರು ರಾಮಗುಂಡಂನಲ್ಲಿ ನಾಲ್ವರು ಬಿಹಾರಿಗಳನ್ನು ಬಂಧಿಸಿ 4,000 ಹಳೆಯ ಫೋನ್‌ಗಳನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿದಾಗ ವಿವರಗಳು ಹೊರಬಿದ್ದಿವೆ.
ಹಳೆಯ ಸೆಲ್ ಫೋನ್‌ಗಳನ್ನು ಮಾರಾಟ ಮಾಡುವಾಗ ನೀವು ಯಾರಿಗೆ ಮಾರಾಟ ಮಾಡುತ್ತಿದ್ದೀರಿ ಎಂದು ತಿಳಿದಿರಬೇಕು. ನಿಮ್ಮ ಹಳೆಯ ಫೋನ್ಗಳು ಬೇರೆಯವರ ಕೈಗೆ ಬಿದ್ದರೆ ಅಪಾಯ ತಪ್ಪಿದ್ದಲ್ಲ. ಏಕೆಂದರೆ ಇತರರನ್ನು ಮೋಸಗೊಳಿಸಲು ಇವುಗಳನ್ನು ಬಳಸುತ್ತಾರೆ ಎಂಬುದನ್ನು ಗಮನಿಸಬೇಕು. ನಿಜಾಮಾಬಾದ್ ಜಿಲ್ಲಾ ಕೇಂದ್ರದ ಗಂಗಾಸ್ಥಾನ, ಮಾರುತಿನಗರ, ವಿನಾಯಕನಗರ ಮತ್ತಿತರ ಪ್ರದೇಶಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿರುವ ಬಗ್ಗೆ ವರದಿಯಾಗಿದೆ. ಅವರು ಬೇರೆ ರಾಜ್ಯದವರೇ ಅಥವಾ ನಮ್ಮ ಜಿಲ್ಲೆಯವರೇ ಎಂಬುದನ್ನು ಗುರುತಿಸಬೇಕು. ಅನುಮಾನವಿದ್ದಲ್ಲಿ ನಮಗೆ ಮಾಹಿತಿ ನೀಡಿ ಎಂದು ಪೊಲೀಸ್ ಹಿರಿಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಸೈಬರ್ ಅಪರಾಧಿಗಳಿಗೆ ಹಳೆಯ ಫೋನ್ನಿಂದ ಹಲವು ಉಪಯೋಗ: ಹಳೆಯ ಫೋನ್‌ನಲ್ಲಿನ ಡೇಟಾ, UPI ಐಡಿಗಳು, ಸಂಖ್ಯೆಗಳು ಮತ್ತು ಫೋಟೋಗಳನ್ನು ಕಳವು ಮಾಡಬಹುದಾಗಿದೆ. ಇಲ್ಲದಿದ್ದರೆ ನಿಮ್ಮ ಹಳೆಯ ಫೋನ್ ರಿಪೇರಿ ಮಾಡಿ ತಮ್ಮ ಸಿಮ್ ಕಾರ್ಡ್ ಹಾಕಿ ವಂಚನೆ ಮಾಡುತ್ತಾರೆ. ಮೊಬೈಲ್ ಐಎಂಇಐ ನಂಬರ್ ಮೂಲಕ ಪೊಲೀಸರ ತನಿಖೆ ವೇಳೆ ಫೋನ್ ಮಾಲಿಕರ ವಿವರ ಹೊರಬೀಳಲಿದೆ. ಇದರಿಂದ ಅಪರಾಧಿ ಪರಾರಿಯಾಗಲಿದ್ದು, ಸೆಲ್ ಫೋನ್ ಮಾಲೀಕ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾನೆ. ಇದರಿಂದಾಗಿ ನೀವು ಹಳೆಯ ಫೋನ್ ಅನ್ನು ಮಾರಾಟ ಮಾಡುವಾಗ ಎಚ್ಚೆತ್ತುಕೊಳ್ಳಬೇಕು.
ಇದನ್ನೂ ಓದಿ:ಮಾನವ ಮೆದುಳಿನೊಂದಿಗೆ ಸ್ಪರ್ಧಿಸಲು ವ್ಯೋಮಮಿತ್ರ ತಲೆಬುರುಡೆ ಅಭಿವೃದ್ಧಿಪಡಿಸಿದ ಇಸ್ರೋ! ಏನಿದರ ಕೆಲಸ? - Humanoid Skull For Gaganyaan