ಚಿತ್ತೂರು (ಆಂಧ್ರಪ್ರದೇಶ) :ಮೇಯಲು ತೆರಳಿದ್ದ ಹಸುವೊಂದು ಕಾಲು ಜಾರಿ ಬಾವಿಯೊಳಗೆ ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸಿ ಬದುಕಿ ಬಂದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಚಿತ್ತೂರು ಜಿಲ್ಲೆ ಚೌಡೇಪಲ್ಲೆ ಮಂಡಲ ಪಂಚಾಯತ್‌ನ ಅಪ್ಪಿನೆಪಲ್ಲಿ ಗ್ರಾಮದ ಚಂದ್ರು ಅವರು ಹಾಲು ಕೊಡುವ ಹಸುವನ್ನ ಸಾಕಿದ್ದಾರೆ. ಅಲ್ಲಿನ ಹೊರವಲಯದಲ್ಲಿ ಅಧಿಕವಾಗಿ ಬೆಳೆದ ಕಳೆಯ ನಡುವೆ ಮೇಯುತ್ತಿದ್ದ ಹಸು ಅಲ್ಲಿಯೇ ಇದ್ದ ಬಾವಿಯೊಳಗೆ ಕಾಲುಜಾರಿ ಬಿದ್ದಿದೆ. ಆದರೆ, ಅದಕ್ಕೆ ಮೇಲೆ ಬರಲಾಗದೇ ಉಸಿರುಕಟ್ಟಿದಂತಾಗಿದೆ. ಆದರೂ ಬದುಕುಳಿಯುವುದಕ್ಕಾಗಿ ಪ್ರತಿ ಕ್ಷಣವೂ ಹೋರಾಡಿದೆ.
ಬಾವಿಯೊಳಗೆ ಬಿದ್ದ ಹಸುವನ್ನ ರಕ್ಷಿಸಿದ ಗ್ರಾಮಸ್ಥರು (ETV Bharat) ಬಾವಿಯಲ್ಲಿ ಸಿಲುಕಿರುವ ಹಸು (ETV Bharat) ನರಕಯಾತನೆ ಪಟ್ಟ ಹಸು : ಈ ವೇಳೆ ಹಸುವಿನ ಕಿರುಚಾಟ ಕೇಳಿ ಮಾಲೀಕ ಚಂದ್ರು ಸ್ಥಳಕ್ಕೆ ತೆರಳಿದ್ದಾರೆ. ಎರಡು ಗಂಟೆಗಳ ಕಾಲ ಹಸು ಹೊರಗೆ ಬರಲು ಪ್ರಯತ್ನಿಸಿದೆ. ಆದರೆ, ಬಾವಿ ಕಿರಿದಾಗಿದ್ದಾಗಿದ್ದರಿಂದ ಅದಕ್ಕೆ ಹೊರಗೆ ಬರಲು ಸಾಧ್ಯವಾಗಿಲ್ಲ. ಇದರಿಂದಾಗಿ ಒಂದೆಡೆ ಉಸಿರಾಡಲೂ ಸಾಧ್ಯವಾಗದೇ, ನರಕಯಾತನೆ ಅನುಭವಿಸಿದೆ.
ಜೆಸಿಬಿಯಿಂದ ಬಾವಿಯಲ್ಲಿನ ಮಣ್ಣನ್ನ ಹೊರತೆಗೆಯುತ್ತಿರುವುದು (ETV Bharat) ಜೆಸಿಬಿ ಸಹಾಯದಿಂದ ಹಸುವಿನ ರಕ್ಷಣೆ :ಈ ವೇಳೆ ಹಸುವಿನ ಮಾಲೀಕ ಚಂದ್ರು ಗ್ರಾಮದ ಸರಪಂಚ್ ಹಾಗೂ ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಲ್ಲರೂ ಸೇರಿ ಸ್ಥಳಕ್ಕೆ ಬಂದಿದ್ದಾರೆ. ನಂತರ ಸ್ಥಳಕ್ಕೆ ಜೆಸಿಬಿ ಕರೆಸಿ ಆರು ಗಂಟೆಗಳವರೆಗೆ ಶ್ರಮವಹಿಸಿ ಬಾವಿಯ ಕಿರಿದಾದ ಮಣ್ಣನ್ನು ತೆಗೆದು ಹಸುವನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತಿದ್ದಾರೆ. ಇದರಿಂದಾಗಿ ಅಲ್ಲಿ ನೆರೆದಿದ್ದ ಜನರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ. ಹಸು ಪ್ರಾಣಾಪಾಯದಿಂದ ಪಾರಾಗಿದೆ.
ಇದನ್ನೂ ಓದಿ :Video: ಮೇಯುತ್ತಿದ್ದಾಗ 25 ಅಡಿ ಆಳದ ಬಾವಿಗೆ ಬಿದ್ದ ಹಸು.. ಕ್ರೇನ್ ಮೂಲಕ ಗೋವಿನ ರಕ್ಷಣೆ