ಕರ್ನಾಟಕ

karnataka

ETV Bharat / bharat

ವಯನಾಡ ಲೋಕಸಭಾ ಕ್ಷೇತ್ರದ ಉಪ ಚುನಾವಣೆ; ಪ್ರಿಯಾಂಕಾರನ್ನು ಸ್ವಾಗತಿಸಿದ ಕೇರಳ ಕಾಂಗ್ರೆಸ್​ - Priyanka Gandhi - PRIYANKA GANDHI

ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಕಾಂಗ್ರೆಸ್ ನಾಯಕ ವಿ. ಡಿ ಸತೀಶನ್ ಅವರು ವಯನಾಡಿಗೆ ಸ್ವಾಗತಿಸಿದ್ದಾರೆ.

Rahul Gandhi, Mallikarjuna Kharge, Priyanka Gandhi
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ (ETV Bharat)

By PTI

Published : Jun 17, 2024, 10:53 PM IST

ತಿರುವನಂತಪುರಂ (ಕೇರಳ) :ಕಾಂಗ್ರೆಸ್ ನಾಯಕ ವಿ. ಡಿ ಸತೀಶನ್ ಅವರುಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಸೋಮವಾರ ವಯನಾಡಿಗೆ ಸ್ವಾಗತಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಮುಂಬರುವ ಉಪಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಹೈ-ವೋಲ್ಟೇಜ್​ ಕ್ಷೇತ್ರದಲ್ಲಿ ದಾಖಲೆಯ ಗೆಲುವಿನ ಅಂತರವನ್ನು ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಪ್ರೀತಿಯ ವಯನಾಡಿನಲ್ಲಿ ಹೆಚ್ಚು ಜನಪ್ರಿಯವಾಗಿರುವ ಪ್ರಿಯಾಂಕಾ ಅವರನ್ನು ರಾಹುಲ್ ಮತ್ತು ಪಕ್ಷವು ಪರಿಚಯಿಸುತ್ತಿದೆ " ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸತೀಶನ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಪ್ರಿಯಾಂಕಾ ಐತಿಹಾಸಿಕ ಗೆಲುವಿನ ಅಂತರವನ್ನು ಸಾಧಿಸುವ ಮೂಲಕ ಅವರು ಇಡೀ ರಾಜ್ಯಕ್ಕೆ ಪ್ರಿಯರಾಗುತ್ತಾರೆ ಎಂದು ಅವರು ಹೇಳಿದ್ದಾರೆ.

ಉತ್ತರ ಪ್ರದೇಶದ ರಾಯ್‌ಬರೇಲಿ ಲೋಕಸಭಾ ಕ್ಷೇತ್ರವನ್ನು ರಾಹುಲ್‌ ಉಳಿಸಿಕೊಳ್ಳಲಿದ್ದಾರೆ. ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸ್ಪರ್ಧಿಸಲಿರುವ ವಯನಾಡ್‌ ಕ್ಷೇತ್ರವನ್ನು ರಾಹುಲ್‌ ತೆರವು ಮಾಡಲಿದ್ದಾರೆ ಎಂದು ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ನವದೆಹಲಿಯಲ್ಲಿ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್‌ ರಾಜ್ಯ ಘಟಕದ ಪ್ರತಿಕ್ರಿಯೆ ಬಂದಿದೆ.

ರಾಹುಲ್ ಅವರು ವಯನಾಡ್ ಮತ್ತು ರಾಯ್ ಬರೇಲಿ ಲೋಕಸಭಾ ಕ್ಷೇತ್ರಗಳಿಂದ ಗೆದ್ದಿದ್ದರು ಮತ್ತು ಜೂನ್ 4 ರಂದು ಹೊರಬಿದ್ದ ಲೋಕಸಭೆಯ ಫಲಿತಾಂಶದ 14 ದಿನಗಳಲ್ಲಿ ಅವರು ಒಂದು ಸ್ಥಾನವನ್ನು ಖಾಲಿ ಮಾಡಬೇಕಾಗಿದೆ.

ಇದನ್ನೂ ಓದಿ :ಲೋಕಸಭೆ ಚುನಾವಣೆ ಬಳಿಕ ಸಂವಿಧಾನದ ಪಾಕೆಟ್ ಆವೃತ್ತಿಗೆ ಬೇಡಿಕೆ ಹೆಚ್ಚು: ಈ ಪುಸ್ತಕದ ಇತಿಹಾಸ ಹೀಗಿದೆ - Pocket Constitution Of India

ABOUT THE AUTHOR

...view details