ವಯನಾಡು (ಕೇರಳ) :ವಯನಾಡು ಕ್ಷೇತ್ರದಲ್ಲಿ ಯುಡಿಎಫ್ ಮತ್ತು ಎಲ್ಡಿಎಫ್ನ ಚುನಾವಣಾ ಪ್ರಚಾರ ಸದ್ದಿಲ್ಲದೇ ಶುರುವಾಗಿದೆ. ವಯನಾಡ್ನಲ್ಲಿರುವ UDF ಜಿಲ್ಲಾ ಕಾಂಗ್ರೆಸ್ನ ಕೇಂದ್ರ ಕಚೇರಿಯಾದ ಡಿಸಿಸಿ ಕಚೇರಿಯಲ್ಲಿ ಅಂತಹ ಸಂಭ್ರಮವೇನೂ ಕಂಡು ಬರುತ್ತಿಲ್ಲ. ಕೇರಳದ ಇತರ ಪ್ರದೇಶಗಳಲ್ಲಿ ಚುನಾವಣಾ ಜ್ವರವೂ ಸಹ ಮಂದಗತಿಯಲ್ಲಿದೆ. ಕಲ್ಪೆಟ್ಟಾ ಪಟ್ಟಣದಿಂದ ವಯನಾಡು ಡಿಸಿಸಿ ಕಚೇರಿಯವರೆಗೆ ಯಾವುದೇ ಪಕ್ಷದ ಧ್ವಜಗಳು ಅಥವಾ ಪೋಸ್ಟರ್ಗಳೇನು ಕಂಡುಬರುತ್ತಿಲ್ಲ.
ಇದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹಾಲಿ ಕ್ಷೇತ್ರವಾದ ವಯನಾಡಿನಲ್ಲಿ ಕಂಡು ಬಂದ ಸದ್ಯದ ಸ್ಥಿತಿ. ಪ್ರತ್ಯೇಕ ಸ್ಥಳಗಳಲ್ಲಿ ರಾಹುಲ್ ಗಾಂಧಿ ಅವರ ಚಿತ್ರವಿರುವ ಬೋರ್ಡ್ಗಳನ್ನು ಹಾಕಿರುವುದು ಬಿಟ್ಟರೆ ಪ್ರಚಾರದ ಬಿಸಿ ಯುಡಿಎಫ್ ಪಾಳಯಕ್ಕೆ ತಲುಪಿಲ್ಲ. ಡಿಸಿಸಿ ಕಚೇರಿಯ ಗೋಡೆಯ ಮೇಲೆ ‘ ರಾಹುಲ್ ವಯನಾಡು ಪ್ರೇಮ’ ಎಂದು ಬರೆದಿರುವ ಪೋಸ್ಟರ್ಗಳಿವೆ. ಕಚೇರಿಯನ್ನು ಗುರುತಿಸಲು ರಾಜೀವ್ ಭವನ ಎಂದು ಬರೆದ ಬೋರ್ಡ್ ಮಾತ್ರ ಇದೆ. ಜಿಲ್ಲಾ ಕೇಂದ್ರವಾದ ರಾಜೀವ್ ಭವನದಲ್ಲಿ ಚುನಾವಣೆಯ ಲಕ್ಷಣಗಳು ಕಾಣುತ್ತಿಲ್ಲ.
ಈ ಬಗ್ಗೆ ಮಾತನಾಡಿರುವ ಕಾರ್ಯಕರ್ತರೊಬ್ಬರು, 'ಈಗಾಗಲೇ ಕ್ಷೇತ್ರದಲ್ಲಿ ಯಶಸ್ಸು ಕಂಡಿರುವ ಹಾಗೂ ದೇಶಾದ್ಯಂತ ಪ್ರಸಿದ್ಧರಾಗಿರುವವರಿಗೆ ಇದು ಸಾಕಲ್ಲವೇ? ನಮ್ಮ ಪ್ರತಿಸ್ಪರ್ಧಿಗಳಂತೆ ದೇಶಾದ್ಯಂತ ಇಷ್ಟೊಂದು ಪ್ರಚಾರ ಫಲಕಗಳು, ಪೋಸ್ಟರ್ಗಳು ಬೇಕೇ?. ವಯನಾಡಿನ ಜನರ ಹೃದಯದಲ್ಲಿ ರಾಹುಲ್ ಇದ್ದಾರೆ ಎಂದರು.