ಕರ್ನಾಟಕ

karnataka

ETV Bharat / bharat

ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು: ಪವನ್ ಕಲ್ಯಾಣ್‌ಗೆ ಚಿರು ಕುಟುಂಬದಿಂದ ಭವ್ಯ ಸ್ವಾಗತ - Pawan Kalyan

ಆಂಧ್ರ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಐಸಿಹಾಸಿಕ ಸಾಧನೆ ಮಾಡಿರುವ ಜನಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌ ಅವರು ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು. ಚಿರಂಜೀವಿ ಮನೆಗೆ ಆಗಮಿಸಿದ ಪವನ್‌ ಅವರನ್ನು ಮೆಗಾಸ್ಟಾರ್ ಕುಟುಂಬ ಅದ್ಧೂರಿಯಾಗಿ ಸ್ವಾಗತಿಸಿತು.

Pawan Kalyan Meets Chiranjeevi
ಪವನ್ ಕಲ್ಯಾಣ್‌ಗೆ ಚಿರು ಕುಟುಂಬದಿಂದ ಭವ್ಯ ಸ್ವಾಗತ (ETV Bharat)

By ETV Bharat Karnataka Team

Published : Jun 7, 2024, 6:59 PM IST

Updated : Jun 7, 2024, 7:39 PM IST

ಪವನ್ ಕಲ್ಯಾಣ್‌ಗೆ ಚಿರು ಕುಟುಂಬದಿಂದ ಭವ್ಯ ಸ್ವಾಗತ (ETV Bharat)

ತೆಲಂಗಾಣ: ಆಂಧ್ರ ಪ್ರದೇಶ ವಿಧಾನಸಬೆ ಚುನಾವಣೆಯಲ್ಲಿ ಐತಿಹಾಸಿಕ ವಿಜಯ ದಾಖಲಿಸಿದ ಜನಸೇನಾ ಪಕ್ಷದ ಮುಖ್ಯಸ್ಥ, ನಟ, ಪವರ್‌ಸ್ಟಾರ್ ಪವನ್ ಕಲ್ಯಾಣ್ ಅವರಿ​ಗೆ ತಮ್ಮ ಸಹೋದರ, ಮೆಗಾ ಸ್ಟಾರ್​ ಚಿರಂಜೀವಿ ಅವರಿಂದ ಅದ್ಧೂರಿ ಸ್ವಾಗತ ದೊರೆತಿದೆ. ದೆಹಲಿಯಲ್ಲಿ ಎನ್​ಡಿಎ ಮೈತ್ರಿಕೂಟದ ಸಭೆಯ ಬಳಿಕ ಪತ್ನಿ ಅನ್ನಾಲೆಜಿನೋವಾ ಹಾಗೂ ಪುತ್ರ ಅಕಿರಾ ನಂದನ್ ಜೊತೆಗೆ ನೇರವಾಗಿ ಹೈದರಾಬಾದ್​ಗೆ ಬಂದ ಪವನ್, ಚಿರಂಜೀವಿ ಆಶೀರ್ವಾದ ಪಡೆದರು. ನಿವಾಸಕ್ಕೆ ಆಗಮಿಸುತ್ತಿದ್ದಂತೆ ಪವನ್ ಕಲ್ಯಾಣ್ ದಂಪತಿಗೆ ತಾಯಿ ಅಂಜನಾ ದೇವಿ ಕುಂಬಳಕಾಯಿಯಿಂದ ದೃಷ್ಟಿ ತೆಗೆದು, ಆರತಿ ಬೆಳಗಿ ಹೂಗುಚ್ಚ ನೀಡಿದರು.

ತಮ್ಮನಿಗೆ ಚಿರಂಜೀವಿ ಹೂವಿನ ಹಾರ ಹಾಕಿದರು. ಈ ಸಂದರ್ಭದಲ್ಲಿ ಆರತಿ ಎತ್ತಿ, ಹಣೆಗೆ ತಿಲಕ ಇಡಲಾಯಿತು. ಮನೆ ಪ್ರವೇಶದ ಬಾಗಿಲಿನಲ್ಲೇ ಅಣ್ಣನ ಕಾಲಿಗೆ ಪವನ್​ ಕಲ್ಯಾಣ್​ ನಮಸ್ಕರಿಸಿದರು. ರಾಮ್​ ಚರಣ್​ ಕೂಡ ಪವನ್​ ಕಲ್ಯಾಣ್​ಗೆ ಅಭಿನಂದಿಸಿದರು. ಈ ಸಂತಸದ ಕ್ಷಣಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ತನ್ನ ಕಾಲಿಗೆರಗಿದ ಪವನ್ ಅವರನ್ನು ಮೇಲಕ್ಕೆತ್ತಿದ ಚಿರಂಜೀವಿ ಆತ್ಮೀಯವಾಗಿ ಅಪ್ಪಿಕೊಂಡರು. ಈ ವೇಳೆ ಹೂಮಳೆ ಸುರಿಸಲಾಯಿತು. 'ಕಲ್ಯಾಣ್ ಬಾಬು ಹ್ಯಾಟ್ಸ್ ಆಫ್' ಎಂಬ ಕೇಕ್​ ಕತ್ತರಿಸಿದರು.

ತಮ್ಮನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಚಿರಂಜೀವಿ: ವಿಧಾನಸಭೆ ಚುನಾವಣೆಯಲ್ಲಿ ತಮ್ಮನ ಸಾಧನೆ ಕುರಿತು ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. 'ನನ್ನ ಪ್ರೀತಿಯ ಕಲ್ಯಾಣ್ ಬಾಬು (ಪವನ್ ಕಲ್ಯಾಣ್‌) ಅವರಿಗೆ ಆಂಧ್ರಪ್ರದೇಶದ ಜನ ನೀಡಿದ ಅದ್ಭುತ ಜನಾದೇಶದಿಂದ ನಾನು ರೋಮಾಂಚನಗೊಂಡಿದ್ದೇನೆ. ಎಲ್ಲಿ ಏಳಬೇಕು, ಎಲ್ಲಿ ಬೀಳಬೇಕು ಎಂದು ತಿಳಿದಿರುವ, ಎಲ್ಲವನ್ನೂ ಬಲ್ಲ ನಿಮ್ಮನ್ನು ಕಂಡು ಹೆಮ್ಮೆ ಅನ್ನಿಸುತ್ತಿದೆ. ನೀನು ನಿಜವಾಗಿಯೂ ಈ ಚುನಾವಣೆಯ ಗೇಮ್ ಚೇಂಜರ್. ಮ್ಯಾನ್ ಆಫ್ ದಿ ಮ್ಯಾಚ್. ಆಂಧ್ರದ ಜನರ ಬಗ್ಗೆ ನಿನಗಿರುವ ಆಳವಾದ ಕಾಳಜಿ, ನಿನ್ನ ದೂರದೃಷ್ಟಿ, ರಾಜ್ಯದ ಅಭಿವೃದ್ಧಿಯ ಬಗ್ಗೆ ನೀನು ಹೊಂದಿರುವ ಬಯಕೆ, ನಿನ್ನ ತ್ಯಾಗ, ನಿನ್ನ ರಾಜಕೀಯ ತಂತ್ರಗಳು ಈ ಅದ್ಭುತ ಫಲಿತಾಂಶ ನೀಡಿವೆ. ಈ ಹೊಸ ಅಧ್ಯಾಯದಲ್ಲಿ ಶುಭವಾಗಲಿ' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅಡ್ವಾಣಿ, ಜೋಷಿ, ಕೋವಿಂದ್ ನಿವಾಸಕ್ಕೆ ಪ್ರಧಾನಿ ಮೋದಿ ಭೇಟಿ - Modi Meets Bjp Veterans

Last Updated : Jun 7, 2024, 7:39 PM IST

ABOUT THE AUTHOR

...view details