ಹೈದರಾಬಾದ್: ಭಾರತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಪ್ರಭಾವ ಬೀರುವ ಉದ್ದೇಶದಿಂದ ಚೀನಾ ಕೃತಕ ಬುದ್ದಿಮತ್ತೆ (ಎಐ) ಆಧಾರಿತ ವಿಷಯಗಳನ್ನು ನಿರ್ವಹಣೆ ಮಾಡುವ ಸಾಧ್ಯತೆ ಇದೆ ಎಂದು ಮೈಕ್ರೋಸಾಫ್ಟ್ ಎಚ್ಚರಿಸಿದೆ. ಭಾರತವಷ್ಟೇ ಅಲ್ಲದೇ ಅಮೆರಿಕ ಮತ್ತು ದಕ್ಷಿಣ ಕೊರಿಯಾದಲ್ಲೂ ಕೂಡ ಎಐ ಆಧಾರಿತ ವಿಷಯಗಳು ಚುನಾವಣೆ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದೆ.
ಮೈಕ್ರೋಸಾಫ್ಟ್ ಥ್ರೆಟ್ ಇಂಟಲಿಜೆನ್ಸ್ (ಗುಪ್ತಚರ ಬೆದರಿಕೆ) ಅಂದಾಜಿಸಿದಂತೆ, ಉನ್ನತ ಮಟ್ಟದ ಚುನಾವಣೆಗಳ ಮೇಲೆ ಪ್ರಭಾವ ಬೀರಲು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಬುದ್ದಿವಂತಿಕೆಯಿಂದ ನಿರ್ವಹಿಸಲು ಎಐ ಆಧಾರಿತ ವಿಷಯಗಳನ್ನು ಚೀನಾ ಬಳಕೆ ಮಾಡಲಿದೆ. ಇಂತಹ ವಿಷಯಗಳು ಚುನಾವಣೆ ಫಲಿತಾಂಶದ ಮೇಲೆ ಪ್ರಭಾವ ಬೀರುವುದು ಕಡಿಮೆಯಾಗಿದ್ದರೂ, ಚೀನಾ ಮೆಮೆ, ವಿಡಿಯೋ ಮತ್ತು ಆಡಿಯೊ ವಿಷಯವನ್ನು ಹೆಚ್ಚಿಸುವ ಪ್ರಯೋಗವು ಮುಂದುವರಿಯುವ ಸಾಧ್ಯತೆಯಿದ್ದು, ಇದು ಭವಿಷ್ಯದಲ್ಲಿ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.
'ಸೇಮ್ ಟಾರ್ಗೆಟ್, ನ್ಯೂ ಪ್ಲೇಬುಕ್ಸ್: ಈಸ್ಟ್ ಏಷ್ಯಾ ಥ್ರೆಟ್ ಆಕ್ಟರ್ಸ್ ಎಂಪ್ಲಾಯ್ ಯುನಿಕ್ ಮೆಥಡ್ಸ್' ಎಂಬ ಶೀರ್ಷಿಕೆಯಲ್ಲಿ ಮೈಕ್ರೋಸಾಫ್ಟ್ ಥ್ರೆಟ್ ಇಂಟಲಿಜೆನ್ಸ್ ಒಳನೋಟವನ್ನು ಹಂಚಿಕೊಂಡಿದೆ. ಇದನ್ನು ಮೈಕ್ರೋಸಾಫ್ಟ್ ಥ್ರೆಡ್ ಅನಾಲಿಸಿಸ್ ಸೆಂಟರ್ನಿಂದ (ಎಂಟಿಎಸಿ)ಯಲ್ಲಿ ಪ್ರಕಟಿಸಲಾಗಿದೆ. ಜನವರಿ 2021ರಲ್ಲಿ ಮೈಕ್ರೋಸಾಫ್ಟ್ ವರದಿ ಮಾಡಿದಂತೆ ರಾಜ್ಯ ಬೆಂಬಲಿತ ನಟರುಗಳು ತೈವಾನ್ನ ವಿದೇಶಿ ಚುನಾವಣೆಯಲ್ಲಿ ಎಐ ಆಧಾರಿತ ವಿಷಯಗಳ ಮೂಲಕ ಕುಶಲತೆಯಿಂದ ಕಾರ್ಯ ನಿರ್ವಹಿಸಿದ್ದರು.