ಚೆನ್ನೈ:ಇಲಿಗಳ ಕಾಟ ತಡೆಯುವುದಕ್ಕಾಗಿ ಇಟ್ಟಿದ್ದ ಪಾಷಾಣದ ವಿಷಕಾರಿ ಗಾಳಿಯನ್ನು ಉಸಿರಾಡಿದ ಮಕ್ಕಳಿಬ್ಬರು ಸಾವನ್ನಪ್ಪಿರುವ ಘಟನೆ ಚೆನ್ನೈನ ಕುಂದ್ರಥೂರ್ನಲ್ಲಿ ನಡೆದಿದ್ದು, ಕೀಟನಾಯಕ ನಿಯಂತ್ರಣ ಸಂಸ್ಥೆಯ ಓರ್ವನನ್ನು ಬಂಧಿಸಲಾಗಿದೆ. ಆರು ವರ್ಷದ ವೈಷ್ಣವಿ ಮತ್ತು ನಾಲ್ಕು ವರ್ಷದ ಸಾಯಿ ಸುದರ್ಶನ್ ಸಾವನ್ನಪ್ಪಿದ ಮಕ್ಕಳಾಗಿದ್ದಾರೆ.
ಏನಿದು ಘಟನೆ?: ಗಿರಿಥರನ್ ಮತ್ತು ಪವಿತ್ರಾ ದಂಪತಿ ಚೆನ್ನೈನ ಕುದ್ರಥೂರ್ ನಿವಾಸಿಗಳಾಗಿದ್ದಾರೆ. ಮನೆಯಲ್ಲಿ ಇಲಿ ಕಾಟ ಹೆಚ್ಚಾದ ಕಾರಣ, ಉಪಶಮನಕ್ಕೆ ಖಾಸಗಿ ಕೀಟ ನಿಯಂತ್ರಣ ಕಂಪನಿಯನ್ನು ಸಂಪರ್ಕಿಸಿದ್ದಾರೆ. ಮನೆಗೆ ಬಂದ ಕೀಟ ನಿಯಂತ್ರಕ ಕಂಪನಿ ಸದಸ್ಯರು ಮನೆಯ ಎಲ್ಲಾ ಮೂಲೆಗಳಲ್ಲಿ ಇಲಿ ಸಾಯುವ ಪಾಷಾಣವನ್ನು ಇರಿಸಿದ್ದಾರೆ. ಮಲಗುವ ಕೋಣೆಯಲ್ಲೂ ಇರಿಸಿದ್ದಾರೆ. ಈ ಪಾಷಣಾದಲ್ಲಿ ಕೊಂಚ ಹೆಚ್ಚಿನ ಮಟ್ಟದ ವಿಷಕಾರಿ ಅಂಶ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ದಂಪತಿ ಪಾಷಾಣವಿರಿಸಿದ್ದ ಬೆಡ್ ರೂಂನಲ್ಲಿ ಎಂದಿನಂತೆ ಮಕ್ಕಳೊಂದಿಗೆ ರಾತ್ರಿ ಎಸಿ ಹಾಕಿ ಎಲ್ಲಾ ಬಾಗಿಲುಗಳನ್ನು ಬಂದ್ ಮಾಡಿ ಮಲಗಿದ್ದಾರೆ. ಎಸಿ ಹಾಕಿದ ಹಿನ್ನೆಲೆಯಲ್ಲಿ ಗಾಳಿಯಾಡಲು ಸಾಧ್ಯವಾಗದೇ ಇಲಿಯ ಪಾಷಾಣದ ಗಾಳಿಯನ್ನು ಮನೆಯ ನಾಲ್ಕು ಮಂದಿ ಉಸಿರಾಡಿದ್ದಾರೆ. ಬೆಳಗ್ಗೆ ಏಳುತ್ತಿದ್ದಂತೆ ದಂಪತಿಗಳಿಬ್ಬರು ಅಸ್ವಸ್ಥರಾಗಿದ್ದಾರೆ. ಮಕ್ಕಳು ಕೂಡ ಪ್ರಜ್ಞೆ ತಪ್ಪಿದ್ದಾರೆ.