ಕರ್ನಾಟಕ

karnataka

ETV Bharat / bharat

ಸಿಗರೇಟ್​, ಕಾದ ಕಬ್ಬಿಣದಿಂದ ಚಿತ್ರಹಿಂಸೆ; ದಂಪತಿಯ ಕ್ರೌರ್ಯಕ್ಕೆ ಮನೆಗೆಲಸಕ್ಕಿದ್ದ ಬಾಲಕಿ ಸಾವು, 6 ಮಂದಿ ಬಂಧನ - CRIME NEWS

ಮನೆಗೆಲಸಕ್ಕಿದ್ದ ಬಾಲಕಿಗೆ ಮನೆ ಮಾಲೀಕರು ಚಿತ್ರಹಿಂಸೆ ನೀಡಿರುವ ಕೊಂದಿರುವ ಆರೋಪ ಪ್ರಕರಣ ಚೆನ್ನೈನಲ್ಲಿ ನಡೆದಿದೆ. ಈ ಸಂಬಂಧ 6 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Chennai Couple's Torture Kills 16-Year-Old Housemaid
ಬಾಲಕಿಗೆ ಚಿತ್ರಹಿಂಸೆ ನೀಡಿದ ಆರೋಪಿಗಳು (ETV Bharat)

By ETV Bharat Karnataka Team

Published : Nov 3, 2024, 5:16 PM IST

Updated : Nov 3, 2024, 5:32 PM IST

ಚೆನ್ನೈ(ತಮಿಳುನಾಡು): 16ರ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮನೆಗೆಲಸಕ್ಕೆ ಇಟ್ಟುಕೊಂಡಿದ್ದಲ್ಲದೆ ಆಕೆಗೆ ಮನೆ ಮಾಲೀಕರು ಚಿತ್ರಹಿಂಸೆ ನೀಡಿ ಕೊಂದಿರುವ ಆರೋಪ ಪ್ರಕರಣ ಚೆನ್ನೈ ನಗರದಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ತಮಿಳುನಾಡು ರಾಜ್ಯವನ್ನು ಬೆಚ್ಚಿಬೀಳಿಸಿದೆ. ಬಡತನದಿಂದ ಮನೆಗೆಲಸಕ್ಕಿದ್ದ ಬಾಲಕಿ ದುಷ್ಕೃತ್ಯಕ್ಕೆ ಬಲಿಯಾಗಿದ್ದು, ಕೆಲಸ ಮಾಡಲು ಬಲವಂತವಾಗಿ ಅಪ್ರಾಪ್ತ ವಯಸ್ಕರನ್ನು ಬಳಸಿಕೊಳ್ಳುತ್ತಿರುವುದನ್ನು ಈ ಘಟನೆ ಎತ್ತಿ ತೋರಿಸುತ್ತದೆ.

ಚೆನ್ನೈನ ಅಮಿಂಜಿಕರೈ ಪ್ರದೇಶದ ಮೆಹ್ತಾ ನಗರದ ಫ್ಲಾಟ್‌ನಲ್ಲಿ ದೀಪಾವಳಿ ದಿನದಂದು ಈ ಘಟನೆಯು ಬೆಳಕಿಗೆ ಬಂದಿದೆ. ಬಾಲಕಿಯು ಮೊಹಮ್ಮದ್ ನವಾಜ್ ಮತ್ತು ನಾಜಿಯಾ ಎಂಬ ದಂಪತಿಗೆ ಮನೆಕೆಲಸಗಾರ್ತಿಯಾಗಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಇವರಿಬ್ಬರು ತಂಜಾವೂರು ಜಿಲ್ಲೆಯವಳಾದ ಬಾಲಕಿಯನ್ನು ತಮ್ಮ ಮನೆಗೆ ಬರುತ್ತಿದ್ದ ಸ್ನೇಹಿತರ ಎದುರೇ ನಿತ್ಯ ನಿಂದಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಗುರುವಾರ, ಆರೋಪಿಗಳು ಸಂತ್ರಸ್ತೆಯ ಮೇಲೆ ಸಿಗರೇಟ್ ಮತ್ತು ಕಾದ ಕಬ್ಬಿಣದಿಂದ ದೇಹವನ್ನು ಸುಟ್ಟಿದ್ದರಿಂದ ಬಾಲಕಿ ಸಾವನ್ನಪ್ಪಿದ್ದಾಳೆ. ನಂತರ, ಈ ದುಷ್ಕೃತ್ಯವನ್ನು ಮುಚ್ಚಿಡುವ ಪ್ರಯತ್ನದಲ್ಲಿ, ಆರೋಪಿಗಳು ಬಾಲಕಿಯ ದೇಹವನ್ನು ಶೌಚಾಲಯದಲ್ಲಿ ಬೀಗ ಹಾಕಿ, ಆ ಪ್ರದೇಶವನ್ನು ಅಗರಬತ್ತಿಗಳಿಂದ ಬೆಳಗಿಸಿ ಪರಾರಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ನವಾಜ್, ನಾಜಿಯಾ ಹಾಗೂ ಅವರ ಸಹಚರರಾದ ಲೋಕೇಶ್, ಜಯಶಕ್ತಿ, ಸೀಮಾ, ಮಹೇಶ್ವರಿ ಸೇರಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.

ಲೋಕೇಶ್ ಅವರು ಈಗಾಗಲೇ ಪ್ರತ್ಯೇಕ ಕೊಲೆ ಪ್ರಕರಣವನ್ನು ಎದುರಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನವಾಜ್‌ನ ಸಹೋದರಿ ಸೀಮಾ ಸಂತ್ರಸ್ತೆಯ ಉದ್ಯೋಗಕ್ಕೆ ಅನುಕೂಲ ಮಾಡಿಕೊಟ್ಟಿದ್ದಲ್ಲದೆ, ಚಿತ್ರಹಿಂಸೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಗೃಹ ಕಾರ್ಮಿಕರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ; ಈ ಘಟನೆಯು ಸಮಾಜದಲ್ಲಿ ಆಕ್ರೋಶ ಉಂಟುಮಾಡಿದೆ ಮತ್ತು ಗೃಹ ಕಾರ್ಮಿಕರ ಸ್ಥಿತಿಗತಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತೆರೆದಿಟ್ಟಿದೆ. ದೆಹಲಿ, ಮುಂಬೈ, ಕೋಲ್ಕತ್ತಾ, ಹೈದರಾಬಾದ್ ಮತ್ತು ಲಕ್ನೋ ಸೇರಿದಂತೆ ಇತರ ನಗರಗಳಲ್ಲೂ ಇದೇ ರೀತಿಯ ನಿಂದನೆ ಮತ್ತು ಚಿತ್ರಹಿಂಸೆಯ ಘಟನೆಗಳು ವರದಿಯಾಗಿದ್ದವು.

ಜೂನ್‌ನಲ್ಲಿ, ತೆಲಂಗಾಣದ ಲಿಂಗಂಪಲ್ಲಿಯಲ್ಲಿ 28 ವರ್ಷದ ಮನೆಕೆಲಸಗಾರ್ತಿ ತನ್ನ ಬಾಡಿಗೆ ಮನೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಸೆಪ್ಟೆಂಬರ್‌ನಲ್ಲಿ, ಉತ್ತರ ಪ್ರದೇಶ ಪೊಲೀಸರು ಸಮಾಜವಾದಿ ಪಕ್ಷದ (ಎಸ್‌ಪಿ) ಶಾಸಕ ಜಾಹಿದ್ ಜಮಾಲ್ ಬೇಗ್, ಅವರ ಪತ್ನಿ ಮತ್ತು ಅವರ ಮಗನ ವಿರುದ್ಧ ಅಪ್ರಾಪ್ತ ಸೇವಕಿಗೆ ಚಿತ್ರಹಿಂಸೆ ನೀಡಿ ಮತ್ತೊಬ್ಬನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು.

ಜನವರಿಯಲ್ಲಿ, ತಮಿಳುನಾಡಿನ ಡಿಎಂಕೆ ಶಾಸಕನ ಪುತ್ರನ ಮನೆಯಲ್ಲಿ ಮನೆಕೆಲಸಗಾರಳಾಗಿ ಕೆಲಸ ಮಾಡುತ್ತಿದ್ದ 18 ವರ್ಷದ ದಲಿತ ಮಹಿಳೆಯೊಬ್ಬರು ತನಗೆ ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ ಮತ್ತು ಉದ್ಯೋಗದಾತರಿಂದ ವೈದ್ಯಕೀಯ ಸೌಲಭ್ಯವನ್ನು ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದರು. ಆದ್ರೆ ಅದನ್ನು ಶಾಸಕರು ನಿರಾಕರಿಸಿದ್ದರು.

ಇದನ್ನೂ ಓದಿ: ಮಕ್ಕಳಿಂದ ಮನೆಗೆಲಸಗಳನ್ನು ಮಾಡಿಸಬೇಕೇ? ಮಾಡಿಸಬಾರದಾ?: ತಜ್ಞರ ಸಲಹೆಗಳೇನು?

Last Updated : Nov 3, 2024, 5:32 PM IST

ABOUT THE AUTHOR

...view details