ಕರ್ನಾಟಕ

karnataka

ETV Bharat / bharat

ಅರುಣಾಚಲ, ನಾಗಾಲ್ಯಾಂಡ್​ನಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಮತ್ತೆ 6 ತಿಂಗಳು ವಿಸ್ತರಣೆ - Centre Extends AFSPA - CENTRE EXTENDS AFSPA

ಅರುಣಾಚಲ ಮತ್ತು ನಾಗಾಲ್ಯಾಂಡ್​ನ ಕೆಲ ಜಿಲ್ಲೆಗಳಲ್ಲಿ ಎಎಫ್ಎಸ್​ ಪಿಎ ಕಾಯ್ದೆಯನ್ನು ಮತ್ತೆ 6 ತಿಂಗಳಿಗೆ ವಿಸ್ತರಿಸಲಾಗಿದೆ.

ಈಶಾನ್ಯ ರಾಜ್ಯಗಳಲ್ಲಿ ಭದ್ರತಾ ಪಡೆಗಳಿಂದ ಗಸ್ತು
ಈಶಾನ್ಯ ರಾಜ್ಯಗಳಲ್ಲಿ ಭದ್ರತಾ ಪಡೆಗಳಿಂದ ಗಸ್ತು (IANS)

By ETV Bharat Karnataka Team

Published : Sep 26, 2024, 1:23 PM IST

ನವದೆಹಲಿ: ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್​ನ ಕೆಲ ಜಿಲ್ಲೆಗಳಲ್ಲಿ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆಯನ್ನು (ಎಎಫ್ಎಸ್​ ಪಿಎ) ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಮತ್ತೆ ಆರು ತಿಂಗಳವರೆಗೆ ಗೃಹ ಸಚಿವಾಲಯ (ಎಂಎಚ್ಎ) ವಿಸ್ತರಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಅರುಣಾಚಲ ಪ್ರದೇಶದ ತಿರಾಪ್, ಚಾಂಗ್ಲಾಂಗ್ ಮತ್ತು ಲಾಂಗ್ಡಿಂಗ್ ಜಿಲ್ಲೆಗಳಲ್ಲಿ ಮತ್ತು ಅಸ್ಸಾಂ ಗಡಿಯಲ್ಲಿರುವ ನಾಮ್ಸಾಯಿ, ಮಹಾದೇವ ಪುರ ಮತ್ತು ಚೌಖಾಮ್ ಜಿಲ್ಲೆಗಳ ಪೊಲೀಸ್ ಠಾಣೆಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಎಎಫ್ಎಸ್​ಪಿಎಯನ್ನು ಮತ್ತೆ ಆರು ತಿಂಗಳವರೆಗೆ ವಿಸ್ತರಿಸಲಾಗಿದೆ ಎಂದು ಎಂಎಚ್ಎ ಅಧಿಸೂಚನೆ ತಿಳಿಸಿದೆ.

ದಿಮಾಪುರ್, ನಿಯುಲ್ಯಾಂಡ್, ಚುಮೌಕೆಡಿಮಾ, ಮೋನ್, ಕಿಫೈರ್, ನೊಕ್ಲಾಕ್, ಫೆಕ್ ಮತ್ತು ಪೆರೆನ್ ಈ ಎಂಟು ಜಿಲ್ಲೆಗಳಲ್ಲಿ ಮತ್ತು ನಾಗಾಲ್ಯಾಂಡ್​ನ ಇತರ ಐದು ಜಿಲ್ಲೆಗಳ 21 ಪೊಲೀಸ್ ಠಾಣೆ ಪ್ರದೇಶಗಳಲ್ಲಿ ಎಎಫ್ಎಸ್​ಪಿಎಯನ್ನು ವಿಸ್ತರಿಸಲಾಗಿದೆ ಎಂದು ಗೃಹ ಸಚಿವಾಲಯದ ಪ್ರತ್ಯೇಕ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್​ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಕೇಂದ್ರವು ಈ ಕ್ರಮ ಕೈಗೊಂಡಿದೆ ಎಂದು ಇಟಾನಗರ್ ಮತ್ತು ಕೊಹಿಮಾದ ಅಧಿಕಾರಿಗಳು ತಿಳಿಸಿದ್ದಾರೆ. ನಾಗಾಲ್ಯಾಂಡ್ ಮ್ಯಾನ್ಮಾರ್​ನೊಂದಿಗೆ 215 ಕಿ.ಮೀ ಉದ್ದದ ರಕ್ಷಣೆಯಿಲ್ಲದ ಗಡಿಗಳನ್ನು ಹೊಂದಿದ್ದರೆ, ಅರುಣಾಚಲ ಪ್ರದೇಶವು ಚೀನಾ, ಮ್ಯಾನ್ಮಾರ್ ಮತ್ತು ಭೂತಾನ್​ನೊಂದಿಗೆ 1,817 ಕಿ.ಮೀ ಉದ್ದದ ಗಡಿಗಳನ್ನು ಹೊಂದಿದೆ.

ಎಎಫ್ಎಸ್​ಪಿಎ ಯು ಸೇನೆ, ಪ್ಯಾರಾ ಮಿಲಿಟರಿ ಮತ್ತು ಇತರ ಭದ್ರತಾ ಪಡೆಗಳಿಗೆ ವಾರಂಟ್ ಇಲ್ಲದೆ ಯಾವುದೇ ವ್ಯಕ್ತಿಯನ್ನು ಬಂಧಿಸಲು, ವಾರಂಟ್ ಇಲ್ಲದೆ ಆವರಣವನ್ನು ಪ್ರವೇಶಿಸಲು ಅಥವಾ ಶೋಧಿಸಲು ಅಧಿಕಾರ ನೀಡುತ್ತದೆ. ಈಶಾನ್ಯ ರಾಜ್ಯಗಳಲ್ಲಿನ ಭದ್ರತಾ ಪರಿಸ್ಥಿತಿಗಳು ಸುಧಾರಿಸಿದ್ದರಿಂದ ಕೇಂದ್ರವು ಏಪ್ರಿಲ್ 2022 ರಲ್ಲಿ ನಾಗಾಲ್ಯಾಂಡ್, ಅಸ್ಸಾಂ ಮತ್ತು ಮಣಿಪುರದ ಅನೇಕ ಪ್ರದೇಶಗಳಲ್ಲಿ ಎಎಫ್ಎಸ್​ಪಿಎ ಯನ್ನು ತೆಗೆದು ಹಾಕಿತ್ತು. ಅಲ್ಲದೆ ಭದ್ರತಾ ಪರಿಸ್ಥಿತಿಗಳು ಗಮನಾರ್ಹವಾಗಿ ಸುಧಾರಿಸಿದ್ದರಿಂದ 2015 ರಲ್ಲಿ ತ್ರಿಪುರಾ, 2018 ರಲ್ಲಿ ಮೇಘಾಲಯ ಮತ್ತು 1980 ರ ದಶಕದಲ್ಲಿ ಮಿಜೋರಾಂನಿಂದ ಈ ವಿಶೇಷಾಧಿಕಾರ ಕಾಯ್ದೆಯನ್ನು ತೆಗೆದುಹಾಕಲಾಯಿತು.

ಪ್ರಭಾವಿ ಈಶಾನ್ಯ ವಿದ್ಯಾರ್ಥಿ ಸಂಘಟನೆ (ಎನ್ಇಎಸ್ಒ), ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್, ಆಲ್ ನಾಗಾ ಸ್ಟೂಡೆಂಟ್ಸ್ ಅಸೋಸಿಯೇಷನ್ ಮತ್ತು ಈಶಾನ್ಯ ಪ್ರದೇಶದ ಯುನೈಟೆಡ್ ನಾಗಾ ಕೌನ್ಸಿಲ್ ಸೇರಿದಂತೆ ಅನೇಕ ರಾಜಕೀಯ ಪಕ್ಷಗಳು, ಎನ್​ಜಿಒಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳು ಎಎಫ್ಎಸ್​ಪಿಎಯನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಒತ್ತಾಯಿಸುತ್ತಿವೆ.

ಇದನ್ನೂ ಓದಿ: ಡಾ.ಮನಮೋಹನ್​ ಸಿಂಗ್​ ಜನ್ಮದಿನ: ಪ್ರಧಾನಿ ಮೋದಿ, ರಾಹುಲ್​ ಸೇರಿ ಗಣ್ಯರಿಂದ ಶುಭಾಶಯ - Manmohan Singh Birthday

ABOUT THE AUTHOR

...view details