ಕರ್ನಾಟಕ

karnataka

ETV Bharat / bharat

ಸೆ.17ರಂದು ಹೈದರಾಬಾದ್ ವಿಮೋಚನಾ ದಿನಾಚರಣೆ: ಕೇಂದ್ರ ಸರ್ಕಾರ ಘೋಷಣೆ - Hyderabad Liberation Day

Hyderabad Liberation Day On September 17th: ಸೆಪ್ಟೆಂಬರ್ 17ರಂದು ಹೈದರಾಬಾದ್ ವಿಮೋಚನಾ ದಿನವನ್ನು ಆಯೋಜಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

Centre decides  Union Home Ministry  Operation Polo
ಗುಡ್​ ನ್ಯೂಸ್​, ಹೈದರಾಬಾದ್ ವಿಮೋಚನಾ ದಿನವನ್ನು ಆಯೋಜಿಸಲು ಕೇಂದ್ರ ನಿರ್ಧಾರ

By PTI

Published : Mar 13, 2024, 10:32 AM IST

ಹೈದರಾಬಾದ್​, ತೆಲಂಗಾಣ: ಸೆಪ್ಟೆಂಬರ್ 17ಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರತಿ ವರ್ಷ ಸೆ. 17 ರಂದು ಹೈದರಾಬಾದ್ ವಿಮೋಚನಾ ದಿನ ಆಯೋಜಿಸಲು ಕೇಂದ್ರ ಗೃಹ ಸಚಿವಾಲಯವು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಅಂದು ಅಧಿಕೃತ ಕಾರ್ಯಕ್ರಮಗಳು ನಡೆಯಲಿವೆ ಎಂದು ರಾಜ್ಯಪತ್ರದಲ್ಲಿ ತಿಳಿಸಲಾಗಿದೆ.

1947 ರ ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಹೈದರಾಬಾದ್​​ 13 ತಿಂಗಳ ಕಾಲ ಸ್ವಾತಂತ್ರ್ಯ ಸಿಗದೇ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. 'ಆಪರೇಷನ್ ಪೋಲೋ' ಎಂಬ ಪೊಲೀಸ್ ಕ್ರಮದ ನಂತರ, ಈ ಪ್ರದೇಶವನ್ನು ಸೆಪ್ಟೆಂಬರ್ 17, 1948 ರಂದು ನಿಜಾಮರ ಆಳ್ವಿಕೆಯಿಂದ ಮುಕ್ತಗೊಳಿಸಲಾಯಿತು. ಹೈದರಾಬಾದ್ ವಿಮೋಚನಾ ದಿನವನ್ನು ಸೆಪ್ಟೆಂಬರ್ 17 ರಂದು ನಡೆಸಬೇಕೆಂದು ಈ ಭಾಗದ ಜನರು ಒತ್ತಾಯಿಸಿದ್ದರು ಎಂದು ಗೃಹ ಸಚಿವಾಲಯ ಅಧಿಸೂಚನೆಯಲ್ಲಿ ವಿವರಿಸಿದೆ.

1947 ರ ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಬಂದಾಗ, ರಜಾಕರ್‌ಗಳು ಭಾರತೀಯ ಒಕ್ಕೂಟದೊಂದಿಗಿನ ವಿಲೀನವನ್ನು ವಿರೋಧಿಸಿ, ಹೈದರಾಬಾದ್​ನ್ನು ಪಾಕಿಸ್ತಾನಕ್ಕೆ ಸೇರಿಸಲು ಅಥವಾ ಮುಸ್ಲಿಂ ಪ್ರಭುತ್ವ ನೆಲೆಸುವಂತೆ ಕರೆ ನೀಡಿದ್ದರು. ಈ ಪ್ರದೇಶವನ್ನು ಭಾರತದ ಒಕ್ಕೂಟದೊಂದಿಗೆ ವಿಲೀನಗೊಳಿಸಲು ಸ್ಥಳೀಯ ಜನರು ರಜಾಕರ್​​ಗಳ ದೌರ್ಜನ್ಯದ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದರು. ಖಾಸಗಿ ಸೇನಾಪಡೆಯಾದ ರಜಾಕರ್​​ರು ಇಲ್ಲಿನ ಜನರ ಮೇಲೆ ದೌರ್ಜನ್ಯ ಎಸಗಿ, ಹೈದರಾಬಾದ್‌ನಲ್ಲಿ ಆಗಿನ ನಿಜಾಮರ ಆಡಳಿತವನ್ನು ಸಮರ್ಥಿಸಿಕೊಂಡಿದ್ದರು.

ಸೆಪ್ಟೆಂಬರ್ 17, 1948 ರಂದು, ಆಗಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಪ್ರಾರಂಭಿಸಿದ ಮಿಲಿಟರಿ ಕಾರ್ಯಾಚರಣೆಯ ನಂತರ ನಿಜಾಮರ ಆಳ್ವಿಕೆಯಲ್ಲಿದ್ದ ಅಂದಿನ ಹೈದರಾಬಾದ್ ರಾಜ್ಯವನ್ನು ಭಾರತ ಒಕ್ಕೂಟಕ್ಕೆ ಸೇರಿಸಲಾಯಿತು. ಕಳೆದ ಕೆಲವು ವರ್ಷಗಳಲ್ಲಿ, ನರೇಂದ್ರ ಮೋದಿ ಸರ್ಕಾರವು ಪ್ರತಿ ವರ್ಷ ಸೆಪ್ಟೆಂಬರ್ 17 ರಂದು 'ಹೈದರಾಬಾದ್ ವಿಮೋಚನಾ ದಿನ' ಸ್ಮರಣಾರ್ಥ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಹೈದರಾಬಾದ್‌ನ್ನು ವಿಮೋಚನೆಗೊಳಿಸಿದ ಹುತಾತ್ಮರನ್ನು ಸ್ಮರಿಸಲು ಮತ್ತು ಯುವಕರಲ್ಲಿ ದೇಶಪ್ರೇಮವನ್ನು ತುಂಬಲು ಸೆಪ್ಟೆಂಬರ್ 17 ರಂದು ಹೈದರಾಬಾದ್ ವಿಮೋಚನಾ ದಿನವನ್ನು ಆಯೋಜಿಸಲು ಕೇಂದ್ರ ನಿರ್ಧರಿಸಿದೆ.

ಓದಿ:'ಬಿಜೆಪಿ ಅವಧಿಯಲ್ಲೂ ಕೊಲೆಗಳಾಗಿದ್ದವು, ಸಂಸದ ಜಾಧವ್ ಅದನ್ನು ನೆನಪಿಸಿಕೊಳ್ಳಲಿ': ಸಚಿವ ಪ್ರಿಯಾಂಕ್ ಖರ್ಗೆ

ABOUT THE AUTHOR

...view details