ಕರ್ನಾಟಕ

karnataka

ETV Bharat / bharat

ಸಿಬಿಐ ಆಪರೇಷನ್ ಚಕ್ರ - 3: 4 ರಾಜ್ಯಗಳಲ್ಲಿ ದಾಳಿ, 26 ಸೈಬರ್​ ಕ್ರಿಮಿನಲ್​ಗಳ ಬಂಧನ - CBI arrests cybercriminals - CBI ARRESTS CYBERCRIMINALS

4 ರಾಜ್ಯಗಳ ವಿವಿಧ ನಗರಗಳ ಮೇಲೆ ದಾಳಿ ಮಾಡಿರುವ ಸಿಬಿಐ 26 ಸೈಬರ್ ಕ್ರಿಮಿನಲ್​ಗಳನ್ನು ಬಂಧಿಸಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

By PTI

Published : Sep 30, 2024, 5:17 PM IST

ನವದೆಹಲಿ:ಭಾರತದಲ್ಲಿಯೇ ಕುಳಿತುಜಗತ್ತಿನ ವಿವಿಧ ರಾಷ್ಟ್ರಗಳ ಜನರನ್ನು ವಂಚಿಸುತ್ತಿದ್ದ 26 ಸೈಬರ್ ಕ್ರಿಮಿನಲ್​ಗಳನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ದಾಳಿ ನಡೆಸಿ ಇವರನ್ನು ಬಂಧಿಸಲಾಗಿದೆ.

ಕಳೆದ ಗುರುವಾರ ತಡರಾತ್ರಿ ಪುಣೆ, ಹೈದರಾಬಾದ್, ಅಹಮದಾಬಾದ್ ಮತ್ತು ವಿಶಾಖಪಟ್ಟಣಂನ 32 ವಿವಿಧ ಸ್ಥಳಗಳಲ್ಲಿ ದಾಳಿ ನಡೆಸುವ ಮೂಲಕ ಆಪರೇಷನ್ ಚಕ್ರ -3 ರ ಅಡಿ ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ಈ ಸ್ಥಳಗಳಿಂದ 58.45 ಲಕ್ಷ ನಗದು, ಲಾಕರ್ ಕೀಗಳು ಮತ್ತು ಮೂರು ಐಷಾರಾಮಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪುಣೆಯ ರೀಜೆಂಟ್ ಪ್ಲಾಜಾದಲ್ಲಿರುವ ವಿ.ಸಿ. ಇನ್​ಕಾನ್​ಫಾರ್ಮಿಟೀಸ್ ಪ್ರೈವೇಟ್​ ಲಿಮಿಟೆಡ್; ವಿ.ಸಿ. ಇನ್ಫ್ರೋಮೆಟ್ರಿಕ್ಸ್ ಪ್ರೈವೇಟ್ ಲಿಮಿಟೆಡ್, ಮುರಳಿ ನಗರ, ವಿಶಾಖಪಟ್ಟಣಂ; ವಯಾಜೆಕ್ಸ್ ಸೊಲ್ಯೂಷನ್ಸ್, ಹೈದರಾಬಾದ್; ಮತ್ತು ವಿಶಾಖಪಟ್ಟಣಂನ ಅತ್ರಿಯಾ ಗ್ಲೋಬಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಹೆಸರಿನ ನಾಲ್ಕು ಕಾಲ್​ ಸೆಂಟರ್​ಗಳ ಮೇಲೆ ದಾಳಿ ನಡೆಸಲಾಗಿದೆ.

ಈ ನಾಲ್ಕು ಕಾಲ್ ಸೆಂಟರ್​ಗಳಲ್ಲಿ 170 ಜನ ಲೈವ್ ಆನ್ ಲೈನ್ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಕೇಂದ್ರ ತನಿಖಾ ದಳ (ಸಿಬಿಐ) ಅಧಿಕಾರಿಗಳು ತಿಳಿಸಿದ್ದಾರೆ.

"ಈ ಕಾಲ್​ ಸೆಂಟರ್​ಗಳು ವ್ಯಕ್ತಿಯೊಬ್ಬರ ಗುರುತು ನಕಲು ಮಾಡುವುದು, ಅಮಾಯಕರನ್ನು ಮೋಸದ ಜಾಲಕ್ಕೆ ಕೆಡವಲು ತಾಂತ್ರಿಕ ಸಹಾಯ ನೀಡುವುದು, ವಿಶೇಷವಾಗಿ ಅಮೆರಿಕದಲ್ಲಿರುವ ವ್ಯಕ್ತಿಗಳಿಗೆ ಕರೆ ಮಾಡಿ ಅವರ ಕಂಪ್ಯೂಟರ್ ಹ್ಯಾಕ್ ಆಗಿದೆ ಎಂದು ಹೇಳಿ ವಂಚಿಸುವುದು ಹೀಗೆ ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿವೆ" ಎಂದು ಸಿಬಿಐ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವ್ಯಕ್ತಿಗಳಿಗೆ ಕರೆ ಮಾಡಿ ಅವರ ವೈಯಕ್ತಿಕ ಮಾಹಿತಿಗಳು ಕಳುವಾಗಿದ್ದು, ಅವರ ಬ್ಯಾಂಕ್ ಖಾತೆಗಳಿಂದ ಹಲವಾರು ಅನಧಿಕೃತ ವಹಿವಾಟುಗಳು ನಡೆದಿವೆ ಎಂದು ಅಪರಾಧಿಗಳು ನಂಬಿಸುತ್ತಿದ್ದರು. ನಂತರ ಆಯಾ ದೇಶಗಳ ತನಿಖಾ ಸಂಸ್ಥೆಗಳು ನಿಮ್ಮನ್ನು ತನಿಖೆ ಮಾಡಬಹುದು ಎಂದು ಹೆದರಿಸುತ್ತಿದ್ದರು. ನಂತರ ಅವರ ಬ್ಯಾಂಕಿನಲ್ಲಿದ್ದ ಹಣವನ್ನು ತಾವು ಹೇಳಿದ ಮತ್ತೊಂದು ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದರು ಎಂದು ಅವರು ಹೇಳಿದರು. ಈವರೆಗೆ ಪುಣೆಯಲ್ಲಿ 10, ಹೈದರಾಬಾದಿನಲ್ಲಿ 5 ಮತ್ತು ವಿಶಾಖಪಟ್ಟಣಂನಲ್ಲಿ 11 ಸೈಬರ್ ಅಪರಾಧಿಗಳನ್ನು ಸಿಬಿಐ ಬಂಧಿಸಿದೆ. ಈ ಅಕ್ರಮ ಕಾಲ್ ಸೆಂಟರ್​ಗಳಲ್ಲಿ ಕೆಲಸ ಮಾಡುವ ಇತರರ ಪಾತ್ರದ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ :ಭಾರತೀಯ ಪ್ರಯಾಣಿಕರಿಗೆ 2.50 ಲಕ್ಷ ಹೆಚ್ಚುವರಿ ವೀಸಾ ಅಪಾಯಿಂಟ್ಮೆಂಟ್​​ ನೀಡಿದ ಅಮೆರಿಕ - visa appointments

ABOUT THE AUTHOR

...view details