ಕರ್ನಾಟಕ

karnataka

By PTI

Published : Feb 6, 2024, 7:53 PM IST

ETV Bharat / bharat

ಸಂಸತ್ತಿನ ಬಜೆಟ್​ ಅಧಿವೇಶನ ಒಂದು ದಿನ ವಿಸ್ತರಣೆ: ಶ್ವೇತಪತ್ರ ಮಂಡನೆ ಸಾಧ್ಯತೆ

ಸಂಸತ್ತಿನ ಮಧ್ಯಂತರ ಬಜೆಟ್​ ಅಧಿವೇಶನವನ್ನು ಫೆಬ್ರವರಿ 10ರವರೆಗೆ ವಿಸ್ತರಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಷಿ ಮಾಹಿತಿ ನೀಡಿದ್ದಾರೆ.

budget-session-to-be-extended-by-a-day-till-feb-10
ಕೇಂದ್ರದ ಬಜೆಟ್​ ಅಧಿವೇಶನ ಒಂದು ದಿನ ವಿಸ್ತರಣೆ: ಶ್ವೇತಪತ್ರ ಮಂಡನೆ ಸಾಧ್ಯತೆ

ನವದೆಹಲಿ: 17ನೇ ಲೋಕಸಭೆಯ ಕೊನೆಯ ಮಧ್ಯಂತರ ಬಜೆಟ್​ ಅಧಿವೇಶನವನ್ನು ವಿಸ್ತರಿಸಲಾಗಿದೆ. ಶುಕ್ರವಾರ (ಫೆ.9ಕ್ಕೆ) ಅಧಿವೇಶನ ಮುಕ್ತಾಯವಾಗಬೇಕಿತ್ತು. ಆದರೆ, ಒಂದು ದಿನ ಎಂದರೆ, ಶನಿವಾರದವರೆಗೆ ವಿಸ್ತರಿಸಲಾಗುತ್ತಿದೆ. ಈ ವಿಷಯವನ್ನು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ್ ಜೋಷಿ ತಿಳಿಸಿದರು.

ಜನವರಿ 31ರಿಂದ ಮಧ್ಯಂತರ ಬಜೆಟ್​ ಅಧಿವೇಶನ ಆರಂಭವಾಗಿದೆ. ಫೆಬ್ರವರಿ 1ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡಿಸಿದ್ದರು. ಇದೀಗ 2014ಕ್ಕಿಂತ ಮುಂಚಿನ 10 ವರ್ಷಗಳ ಮತ್ತು ನಂತರದ 10 ವರ್ಷಗಳ ಶ್ವೇತಪತ್ರವನ್ನು ಹೊರಡಿಸಲು ಸರ್ಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನವನ್ನು ಒಂದು ದಿನ ವಿಸ್ತರಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಬಜೆಟ್​ ಮಂಡಿಸಿದ ದಿನವೇ ಸಚಿವೆ ನಿರ್ಮಲಾ ಈ ಕುರಿತು ಸುಳಿವು ನೀಡಿದ್ದರು. ಆರ್ಥಿಕ ವ್ಯವಸ್ಥೆ ಕುರಿತು ಸರ್ಕಾರವು ಶ್ವೇತಪತ್ರ ಹೊರತರಲಿದೆ ಎಂದಿದ್ದರು. ''ಆ ವರ್ಷಗಳ ಬಿಕ್ಕಟ್ಟನ್ನು ನಿವಾರಿಸಲಾಗಿದೆ. ಈಗ ಆರ್ಥಿಕತೆಯು ಸರ್ವತೋಮುಖ ಅಭಿವೃದ್ಧಿಯೊಂದಿಗೆ ಹೆಚ್ಚಿನ ಸುಸ್ಥಿರ ಬೆಳವಣಿಗೆಯ ಹಾದಿಯಲ್ಲಿ ದೇಶ ಸದೃಢವಾಗಿದೆ'' ಎಂದು ತಿಳಿಸಿದ್ದರು.

''2014ರವರೆಗೆ ನಾವು ಎಲ್ಲಿದ್ದೆವು?, ಮತ್ತು ಈಗ ಎಲ್ಲಿದ್ದೇವೆ ಎಂಬುದನ್ನು ಅರಿತುಕೊಳ್ಳಲು ಇದು ಸೂಕ್ತ ಸಮಯ. ಆ ವರ್ಷಗಳ ದುರಾಡಳಿತದಿಂದ ಪಾಠ ಕಲಿಯುವ ಉದ್ದೇಶದಿಂದ ಮಾತ್ರ ಸರ್ಕಾರ ಸದನದ ಮುಂದೆ ಶ್ವೇತಪತ್ರ ಇಡಲಿದೆ'' ಎಂದು ವಿತ್ತ ಸಚಿವರು ತಮ್ಮ ಬಜೆಟ್​ ಭಾಷಣದಲ್ಲಿ ತಿಳಿಸಿದ್ದರು. ನಂತರ ಸುದ್ದಿಗೋಷ್ಠಿಯಲ್ಲೂ ವಿಷಯವನ್ನು ಅವರು ಖಚಿತಪಡಿಸಿದ್ದರು.

ಇದನ್ನೂ ಓದಿ:ಹತ್ತು ವರ್ಷಗಳ ಆರ್ಥಿಕ ಸಾಧನೆಯ ಶ್ವೇತಪತ್ರ: ಸಚಿವೆ ನಿರ್ಮಲಾ ಸೀತಾರಾಮನ್

ABOUT THE AUTHOR

...view details