ಕರ್ನಾಟಕ

karnataka

ETV Bharat / bharat

11 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದು ರೆಕಾರ್ಡ್​​ ಬ್ರೇಕ್​​​​ ಮಾಡಿದ ಬಿಜೆಪಿ ಅಭ್ಯರ್ಥಿ; ಅತಿ ಕಡಿಮೆ ಅಂತರದಿಂದ ಗೆದ್ದವರು ಇವರೇ ನೋಡಿ! - Lok Sabha election result

2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಶಂಕರ್ ಲಲ್ವಾನಿ, ಶಿವರಾಜ್​ ಸಿಂಗ್​ ಚೌಹಾಣ್​ ಜ್ಯೋತಿರಾದಿತ್ಯ ಸಿಂಧಿಯಾ, ಸಿ.ಟಿ. ಪಾಟೀಲ ಹಾಗೂ ಅಮಿತ್​ ಶಾ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

BJP candidate Shankar Lalwani  Lok Sabha election result 2024  Amit Shah  Jyotiraditya Scindia
ಸಂಗ್ರಹ ಚಿತ್ರ (Getty Images)

By ETV Bharat Karnataka Team

Published : Jun 5, 2024, 8:57 AM IST

Updated : Jun 5, 2024, 10:47 AM IST

ಇಂದೋರ್ (ಮಧ್ಯಪ್ರದೇಶ): ಲೋಕಸಭೆ ಚುನಾವಣೆ ಫಲಿತಾಂಶ ಸ್ಪಷ್ಟವಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಲು ಸಿದ್ಧವಾಗಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಇಂದೋರ್​ನ ಬಿಜೆಪಿ ಅಭ್ಯರ್ಥಿ ಶಂಕರ್ ಲಲ್ವಾನಿ 11,75,092 ಮತಗಳ ಅಂತರದಿಂದ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿದ್ದಾರೆ.

ಇನ್ನು ಉತ್ತರಪ್ರದೇಶದ ಹಮೀರ್​​​ಪುರ ಲೋಕಸಬಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಜೇಂದ್ರ ಸಿಂಗ್​ ಲೋನಿ ಕೇವಲ 2629 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇವರ ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಕುನ್ವರ್​​ ಪುಷ್ಪೇಂದ್ರ ಸಿಂಗ್​​​​ ಚಾಂದೇಲ್​ ಕೇವಲ 2629 ಮತಗಳಿಂದ ಸೋಲು ಅನುಭವಿಸಿದ ಅಭ್ಯರ್ಥಿಯಾಗಿದ್ದಾರೆ.

ಲಲ್ವಾನಿ ವಿರುದ್ಧ ಸ್ಪರ್ಧಿಸಿದ 13 ಅಭ್ಯರ್ಥಿಗಳಿಗೆ ಠೇವಣಿ ನಷ್ಟ:ಶಂಕರ್ ಲಲ್ವಾನಿ ವಿರುದ್ಧ ಸ್ಪರ್ಧಿಸಿದ್ದ ಎಲ್ಲ 13 ಅಭ್ಯರ್ಥಿಗಳು ಇಂದೋರ್​ನಲ್ಲಿ ಠೇವಣಿ ಕಳೆದುಕೊಂಡಿದ್ದಾರೆ. ಸಿಂಧುವಾದ ಒಟ್ಟು ಮತಗಳ ಪೈಕಿ 6ನೇ ಒಂದರಷ್ಟು ವೋಟ್​ಗಳನ್ನು ಅಭ್ಯರ್ಥಿ ಪಡೆಯುವುದಕ್ಕೆ ವಿಫಲವಾದರೆ ಆ ಅಭ್ಯರ್ಥಿ ಠೇವಣಿಯನ್ನು ಕಳೆದುಕೊಳ್ಳುತ್ತಾರೆ.

ಶಿವರಾಜ್​ ಸಿಂಗ್​ ಚೌಹಾಣ್​​ಗೆ 8 ಲಕ್ಷ ಮತಗಳ ಅಂತರದ ಗೆಲುವು:ಮಧ್ಯಪ್ರದೇಶದ ಮಾಜಿ ಸಿಎಂ ಶಿವರಾಜ್ ಸಿಂಗ್​ ಚೌಹಾಣ್​ ಅವರು ವಿದಿಶಾ ಲೋಕಸಭಾ ಕ್ಷೇತ್ರದಲ್ಲಿ 821408 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಇವರು ಕಾಂಗ್ರೆಸ್​ನ ಪ್ರತಾಪ್​ ಭಾನು ಶರ್ಮಾ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.

7.73 ಲಕ್ಷ ಮತಗಳ ಲೀಡ್​ನಿಂದ ಸಿ.ಟಿ. ಪಾಟೀಲ ಜಯಭೇರಿ: ನವಸಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಟಿ. ಪಾಟೀಲ ಅವರು ಒಟ್ಟು 10,31,065 ಮತಗಳನ್ನು ಪಡೆದುಕೊಂಡಿದ್ದು, 7,73,551 ಲಕ್ಷ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. 2,57,514 ಮತಗಳನ್ನು ಗಳಿಸಿರುವ ಕಾಂಗ್ರೆಸ್​ ಅಭ್ಯರ್ಥಿ ನೈಷಧಭಾಯಿ ಭೂಪತಭಾಯ್ ದೇಸಾಯಿ ಅವರನ್ನು ಸಿ.ಟಿ. ಪಾಟೀಲ ಮಣಿಸಿ ಭರ್ಜರಿ ವಿಜಯ ಸಾಧಿಸಿದ್ದಾರೆ.

5.40 ಲಕ್ಷಕ್ಕೂ ಹೆಚ್ಚು ಮತಗಳಿಂದ ಜ್ಯೋತಿರಾದಿತ್ಯ ಸಿಂಧಿಯಾ ಗೆಲುವು:ಮಧ್ಯಪ್ರದೇಶದ ಗುಣಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್‌ನ ರಾವ್ ಯದ್ವೇಂದ್ರ ಸಿಂಗ್ ವಿರುದ್ಧ 5.40 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲುವು ದಾಖಲಿಸಿದ್ದಾರೆ. ರಾಜಮನೆತನಕ್ಕೆ ಸಂಬಂಧಿಸಿದ ಈ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ತಮ್ಮ ಪ್ರತಿಸ್ಪರ್ಧಿಗಳನ್ನು ಭಾರಿ ಅಂತರದಿಂದ ಸೋಲಿಸಿದ್ದಾರೆ.

ಗ್ವಾಲಿಯರ್‌ನ ರಾಜಮನೆತನದ ಜ್ಯೋತಿರಾದಿತ್ಯ ಸಿಂಧಿಯಾ ಅವರು ಹೆಚ್ಚು ಮತಗಳಿಂದ ಗೆದ್ದಿರುವುದು ಇದೇ ಮೊದಲ ಬಾರಿಗೆ. ಈ ಹಿಂದೆ, ಸಿಂಧಿಯಾ ಕಾಂಗ್ರೆಸ್ ಪಕ್ಷದೊಂದಿಗಿನ 18 ವರ್ಷಗಳ ಒಡನಾಟವನ್ನು ಕೊನೆಗೊಳಿಸಿದ್ದರು, 2020ರಲ್ಲಿ ಬಿಜೆಪಿ ಸೇರಿದ್ದರು. ಇದೀಗ ಸಿಂಧಿಯಾ ಅವರ ರಾಜಕೀಯ ಜೀವನದಲ್ಲಿ ಇದು ಮೊದಲ ದೊಡ್ಡ ಜಯ ಲಭಿಸಿದೆ. ಇನ್ನು ಮಧ್ಯಪ್ರದೇಶದ ಎಲ್ಲಾ 29 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ.

7,44,716ಲಕ್ಷ ಮತಗಳ ಅಂತರದಿಂದ ಬಿಜೆಪಿ ಚಾಣಕ್ಯ ಗೆಲುವು:ಗಾಂಧಿನಗರ ಬಿಜೆಪಿ ಅಭ್ಯರ್ಥಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾರಿ ಮತಗಳ ಅಂತರದಿಂದ ವಿಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸೋನಲ್ ರಮನ್​ಭಾಯ್ ಪಟೇಲ್ ವಿರುದ್ಧ 7,44,716 ಮತಗಳಿಂದ ಬಿಜೆಪಿ ಚಾಣಕ್ಯ ಗೆಲವು ಸಾಧಿಸಿದ್ದಾರೆ. ಅಮಿತ್ ಶಾ 10,10,972 ಮತ ಪಡೆದಿದ್ದು, ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋನಲ್ ರಮನ್​ಭಾಯ್ ಪಟೇಲ್ 2,66,256 ಮತ ಪಡೆದಿದ್ದಾರೆ. ಗಾಂಧಿನಗರ ಕ್ಷೇತ್ರದಿಂದ ಸತತವಾಗಿ ಎರಡನೇ ಬಾರಿ ಸ್ಪರ್ಧಿಸಿದ್ದ ಅಮಿತ್ ಶಾ ಅನಾಯಾಸವಾಗಿ ಜಯ ಗಳಿಸಿದ್ದಾರೆ.

1989ರಿಂದ ಗಾಂಧಿನಗರ ಬಿಜೆಪಿ ಭದ್ರ ಕೋಟೆಯಾಗಿದೆ. ಈ ಮೊದಲು ಅಟಲ್ ಬಿಹಾರಿ ವಾಜಪೇಯಿ, ಎಲ್.​ ಕೆ. ಅಡ್ವಾಣಿ ಅವರು ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅಡ್ವಾಣಿ ಅವರು ಈ ಕ್ಷೇತ್ರದಿಂದ 6 ಬಾರಿ ಜಯ ಸಾಧಿಸಿದ್ದರು. 2014ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೃತಿಭಾಯ್ ಪಟೇಲ್ ಅವರನ್ನು ಅಡ್ವಾಣಿ ಅವರು 4.83 ಮತಗಳ ಅಂತರದಿಂದ ಮಣಿಸಿದ್ದರು. 2019ರಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದ ಬಳಿಕ ಮೊದಲ ಬಾರಿಗೆ ಗಾಂಧಿನಗರದಿಂದ ಅಮಿತ್ ಶಾ ಅಖಾಡಕ್ಕೆ ಇಳಿದಿದ್ದರು. 2019ರಲ್ಲಿ ಅಮಿತ್ ಶಾ ದಾಖಲೆಯ 5.57 ಲಕ್ಷ ಮತಗಳಿಂದ ಗೆಲುವಿನ ನಗೆ ಬೀರಿದ್ದರು.

ಇದನ್ನೂ ಓದಿ:ಸಂಪೂರ್ಣವಾಗಿ ಮುಗಿದ ಮತ ಎಣಿಕೆ: ದೆಹಲಿಯಲ್ಲಿ 3ನೇ ಬಾರಿಗೆ ಕ್ಲೀನ್​ ಸ್ವೀಪ್ ಮಾಡಿ ಇತಿಹಾಸ ಬರೆದ ಬಿಜೆಪಿ ​ - lok sabaha elections 2024

Last Updated : Jun 5, 2024, 10:47 AM IST

ABOUT THE AUTHOR

...view details