ಕರ್ನಾಟಕ

karnataka

ETV Bharat / bharat

ನಂದ್ಯಾಲ ಏಷ್ಯಾದ ನಾಲ್ಕನೇ ಅತ್ಯಂತ ಬಿಸಿಯಾದ ನಗರ: ಭುವನೇಶ್ವರ, ಕಲಬುರಗಿಯಲ್ಲೂ ನಿಗಿ ನಿಗಿ ಕೆಂಡ - heat wave sweeps - HEAT WAVE SWEEPS

ಭುವನೇಶ್ವರದ ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿ ಉಮಾಶಂಕರ್ ದಾಸ್​​​​​​ ತಮ್ಮ ಟ್ವಿಟರ್​ ಹ್ಯಾಂಡಲ್​​​ನಲ್ಲಿ ಏಷ್ಯಾದ 10 ಪ್ರಮುಖ ಸ್ಥಳಗಳ ತಾಪಮಾನದ ವರದಿಯನ್ನು ಹಾಕಿಕೊಂಡಿದ್ದಾರೆ.

ನಂದ್ಯಾಲ ಏಷ್ಯಾದ ನಾಲ್ಕನೇ ಅತ್ಯಂತ ಬಿಸಿಯಾದ ನಗರ: ಭುವನೇಶ್ವರ, ಕಲಬುರಗಿಯಲ್ಲೂ ನಿಗಿ ನಿಗಿ ಕೆಂಡ
ನಂದ್ಯಾಲ ಏಷ್ಯಾದ ನಾಲ್ಕನೇ ಅತ್ಯಂತ ಬಿಸಿಯಾದ ನಗರ: ಭುವನೇಶ್ವರ, ಕಲಬುರಗಿಯಲ್ಲೂ ನಿಗಿ ನಿಗಿ ಕೆಂಡ

By ETV Bharat Karnataka Team

Published : Apr 6, 2024, 6:43 AM IST

Updated : Apr 6, 2024, 7:00 AM IST

ಭುವನೇಶ್ವರ್, ಒಡಿಶಾ:ರಾಜಧಾನಿ ಭುವನೇಶ್ವರದಲ್ಲಿ ನಿನ್ನೆ 43.5 ರಷ್ಟು ತಾಪಮಾನ ದಾಖಲಾಗಿದೆ. ಇನ್ನು ಕರ್ನಾಟಕದ ಕಲಬುರಗಿಯಲ್ಲೂ ಸಹ 43.3 ರಷ್ಟು ತಾಪಮಾನ ಇತ್ತು. ಭುವನೇಶ್ವರ್​ ಇದೀಗ ಏಷ್ಯಾ ಖಂಡದ ಅತ್ಯಂತ ಹೆಚ್ಚು ತಾಪಮಾನ ದಾಖಲಾದ 6ನೇ ನಗರ ಎಂಬ ಖ್ಯಾತಿಗೆ ಒಳಗಾಗಿದೆ.

ನಂದ್ಯಾಲ ಏಷ್ಯಾದ ನಾಲ್ಕನೇ ಅತ್ಯಂತ ಬಿಸಿಯಾದ ನಗರ: ಭುವನೇಶ್ವರ, ಕಲಬುರಗಿಯಲ್ಲೂ ನಿಗಿ ನಿಗಿ ಕೆಂಡ

ಇನ್ನು ಮ್ಯಾನ್ಮಾರ್​ನ ಚೌಕ್​ ಎಂಬಲ್ಲಿ ಬರೋಬ್ಬರಿ 45.7 ಡಿಗ್ರಿ ಸೆಲ್ಸಿಯಸ್​​ನಷ್ಟು ತಾಪಮಾನ ದಾಖಲಾಗುವ ಮೂಲಕ ಅತ್ಯಂತ ಹೆಚ್ಚು ತಾಪಮಾನ ದಾಖಲಾದ ಸ್ಥಳವಾಗಿ ಗುರುತಿಸಿಕೊಂಡಿದೆ. ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಉಮಾಶಂಕರ್​ ದಾಸ್​​​​​​​​ ತಮ್ಮ ಟ್ವಿಟರ್​​​​ ಹ್ಯಾಂಡಲ್​​ನಲ್ಲಿ ಏಷ್ಯಾದ 10 ದೇಶಗಳ ಅತ್ಯಂತ ಬಿಸಿಯಾದ ಸ್ಥಳಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಮ್ಯಾನ್ಮಾರ್​ನ ನಾಲ್ಕು ಸ್ಥಳಗಳು ಟಾಪ್​ 5ರಲ್ಲಿ ಗುರುತಿಸಿಕೊಂಡಿವೆ.

ಆಂಧ್ರಪ್ರದೇಶದ ನಂದ್ಯಾಲ್​​ದಲ್ಲಿ 43.7 ರಷ್ಟು ತಾಪಮಾನ ದಾಖಲಾಗಿದೆ, ಏಪ್ರಿಲ್​ 5 ರಂದು ದೇಶದಲ್ಲೇ ಅತ್ಯಂತ ಹೆಚ್ಚು ತಾಪಮಾನ ದಾಖಲಾದ ಸ್ಥಳವಾಗಿದೆ. ಏಷ್ಯಾದಲ್ಲೇ 4 ನೇ ಅತ್ಯಂತ ಬಿಸಿಯಾದ ಸ್ಥಳ ಎಂದು ಪಟ್ಟಿ ಮಾಡಲಾಗಿದೆ. IMD ಒದಗಿಸಿದ ದಿನದ ಅಂತ್ಯದ ಮಾಹಿತಿಯ ಪ್ರಕಾರ, ಭುವನೇಶ್ವರದಲ್ಲಿ ಇಂದು 43.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮಧ್ಯಾಹ್ನ 2:30 ರ ಹೊತ್ತಿಗೆ ಒಡಿಶಾದ ರಾಜಧಾನಿಯಲ್ಲಿ 43.3 ಸೆಲ್ಸಿಯಸ್​ ತಾಪಮಾನವನ್ನು ಮುಟ್ಟಿತ್ತು.

ನಂದ್ಯಾಲ ಏಷ್ಯಾದ ನಾಲ್ಕನೇ ಅತ್ಯಂತ ಬಿಸಿಯಾದ ನಗರ: ಭುವನೇಶ್ವರ, ಕಲಬುರಗಿಯಲ್ಲೂ ನಿಗಿ ನಿಗಿ ಕೆಂಡ

IMD ಮುಂದಿನ 24 ಗಂಟೆಗಳಲ್ಲಿ ಒಡಿಶಾದ 14 ಜಿಲ್ಲೆಗಳಲ್ಲಿ ಉಷ್ಣ ಅಲೆಯ ಬಗ್ಗೆ ಹಳದಿ ಎಚ್ಚರಿಕೆಯನ್ನು ನೀಡಿದೆ. ಭುವನೇಶ್ವರ್​ದಲ್ಲಿ ಶುಕ್ರವಾರ ಏಷ್ಯಾದ ಆರನೇ ಅತ್ಯಂತ ಬಿಸಿಯಾದ ಸ್ಥಳವಾಗಿದೆ ಎಂದು IMD ಭುವನೇಶ್ವರ್ ವಿಜ್ಞಾನಿ ಉಮಾಶಂಕರ್ ದಾಸ್ ಮಾಹಿತಿ ನೀಡಿದ್ದಾರೆ.

ದಾಸ್ ತಮ್ಮ X ಹ್ಯಾಂಡಲ್‌ನಲ್ಲಿ ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ. ಅವರ ಎಕ್ಸ್​ ಹ್ಯಾಂಡಲ್​​​​​ನಲ್ಲಿ ಏಷ್ಯಾದ 10 ಅತ್ಯಂತ ಬಿಸಿಯಾದ ಸ್ಥಳಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ.

ಇನ್ನು ಕರ್ನಾಟಕದ ಕಲಬುರಗಿಯಲ್ಲಿ ಸುಮಾರು 43.3 ರಷ್ಟು ತಾಪಮಾನ ದಾಖಲಾಗುವ ಮೂಲಕ 9ನೇ ಸ್ಥಾನ ಪಡೆದುಕೊಂಡಿದೆ. ಈಗಾಗಲೇ ಕರ್ನಾಟಕದ ಬಹುತೇಕ ಕಡೆ ತಾಪಮಾನ 40 ಡಿಗ್ರಿ ಸೆಲ್ಸಿಯಸ್​ ತಲುಪಿದೆ. ಬರಗಾಲದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಕಡೆ ಬಿಸಿಗಾಳಿ ಬೀಸುತ್ತಿದೆ. ರಾಜ್ಯದ ಜನರು ನೀರಿಗಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಜನರು ಮನೆಯಿಂದ ಹೊರಗೆ ಬರುವುದನ್ನು ತಪ್ಪಿಸಿ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ಹಾಗೂ ಮನವಿಯನ್ನೂ ಕೂಡಾ ಮಾಡಿಕೊಂಡಿದೆ.

ಇದನ್ನು ಓದಿ:ಕರ್ನಾಟಕ, ಒಡಿಶಾ, ಆಂಧ್ರದಲ್ಲಿ ಶಾಖದ ಅಲೆ, ಈಶಾನ್ಯದಲ್ಲಿ ಮಳೆ: ಐಎಂಡಿ ಮುನ್ಸೂಚನೆ - IMD Wednesday morning bulletin

Last Updated : Apr 6, 2024, 7:00 AM IST

ABOUT THE AUTHOR

...view details