ಹೈದರಾಬಾದ್: ಇತ್ತೀಚಿಗೆ ವಿದೇಶಿ ಉದ್ಯೋಗ ಅರಸಿ ತಮ್ಮ ಬಳಿಗೆ ಬರುವ ಯುವಜನರನ್ನು ಕೆಲ ಏಜೆನ್ಸಿಗಳು ವಂಚಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿಂದೆ ದಲ್ಲಾಳಿಗಳು ಉದ್ಯೋಗ ಕೊಡಿಸುವ ನೆಪದಲ್ಲಿ ಗಲ್ಫ್ ದೇಶಗಳಿಗೆ ಮಾನವ ಕಳ್ಳಸಾಗಣೆ ಮಾಡುತ್ತಿದ್ದರು. ಪ್ರಸ್ತುತ ಸೈಬರ್ ವಂಚಕರು, ಸಾಫ್ಟ್‌ವೇರ್ ಉದ್ಯೋಗ ಕೊಡಿಸುವ ಮತ್ತು ರಷ್ಯಾ ಸೇನೆಯಲ್ಲಿ ಭದ್ರತಾ ಸಿಬ್ಬಂದಿ ಹುದ್ದೆ ಕೊಡಿಸುವ ಭರವಸೆ ನೀಡುತ್ತಾ ತಮ್ಮ ವಂಚನೆಯ ಜಾಲವನ್ನು ವಿಸ್ತರಿಸಿಕೊಂಡಿದ್ದಾರೆ.
ಇತ್ತೀಚಿನ ಪ್ರಕರಣಗಳು:ನಾರಾಯಣಪೇಟೆಯ ಸೈಯದ್ ಮೊಹಮ್ಮದ್ ಸೂಫಿಯಾನ್ ಕೆಲಸಕ್ಕೆಂದು ರಷ್ಯಾಕ್ಕೆ ಹೋಗಿ ವಂಚನೆಗೊಳಗಾಗಿದ್ದರು. ಅವರು ಇತ್ತೀಚೆಗೆ ರಷ್ಯಾ ಸೇನೆಯಿಂದ ಬಿಡುಗಡೆಯಾಗಿದ್ದರು. ವಂಶಿಕೃಷ್ಣ ಮತ್ತು ಸಾಯಿಪ್ರಸಾದ್ ಎಂಬುವವರು ಕಾಂಬೋಡಿಯಾದಲ್ಲಿ ಡಾಟಾ ಎಂಟ್ರಿ ಆಪರೇಟರ್ ಕೆಲಸಕ್ಕೆಂದು ಹೋಗಿ ಶೋಷಣೆ ಎದುರಿಸಿದ್ದರು. ಇಂತಹ ವಂಚನೆಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಪೊಲೀಸರು ಯುವಜನತೆಯನ್ನು ಒತ್ತಾಯಿಸುತ್ತಿದ್ದಾರೆ.
ಸಾಮಾನ್ಯ ವಂಚನೆ ತಂತ್ರಗಳು: ಕೆಲ ವಂಚಕ ಏಜೆನ್ಸಿಗಳು, ಇಟ್ಟಿಗೆ ತಯಾರಿ, ಪ್ಲಂಬಿಂಗ್ ಮತ್ತು ಕಡಿಮೆ ವಿದ್ಯಾರ್ಹತೆ ಅಗತ್ಯವಿರುವ ಕೃಷಿ ಕೆಲಸಕ್ಕಾಗಿ ಮೊದಲು ವ್ಯಕ್ತಿಗಳನ್ನು ಗುರಿಯಾಗಿಸಿಕೊಳ್ಳುತ್ತವೆ. ಅವರು ಆಗಾಗ್ಗೆ ಪಾಸ್‌ಪೋರ್ಟ್‌ಗಳ ಮೇಲೆ "ಇಮಿಗ್ರೇಷನ್ ಚೆಕ್ ರಿಕ್ವೈರ್ಡ್" (ECR) ಸ್ಟ್ಯಾಂಪ್ ಹಾಕುತ್ತಾರೆ. ಇದು ವ್ಯಕ್ತಿಯ ಕಡಿಮೆ ವಿದ್ಯಾರ್ಹತೆ ಮತ್ತು ವಿದೇಶಿ ಉದ್ಯೋಗದ ಬಗ್ಗೆ ಅರಿವಿನ ಕೊರತೆ ಸೂಚಿಸುತ್ತದೆ. ಈ ಸ್ಟಾಂಪ್ ಅನ್ನು ಸಾಮಾನ್ಯವಾಗಿ ಪಿಯುಸಿ ಮಟ್ಟಕ್ಕಿಂತ ಕಡಿಮೆ ಶಿಕ್ಷಣ ಹೊಂದಿರುವವರಿಗೆ ಹಾಕಲಾಗುತ್ತದೆ.
ಇತ್ತೀಚಿಗೆ ಸೈಬರ್ ಕ್ರೈಮ್ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಉತ್ತರ ಭಾರತದ ಮೂಲದ ಸೈಬರ್ ವಂಚಕರು ಈ ಹಿಂದೆ ವಂಚನೆ ಕೃತ್ಯಗಳಲ್ಲಿ ಪ್ರಾಬಲ್ಯ ಹೊಂದಿದ್ದರು. ಸದ್ಯ ಕಾಂಬೋಡಿಯಾ ಮತ್ತು ಮ್ಯಾನ್ಮಾರ್‌ನಂತಹ ದೇಶಗಳಲ್ಲಿ ವಂಚನೆಗಾಗಿ ತೆಲುಗು ಭಾಷೆ ಮಾತನಾಡುವವರನ್ನು ಸೈಬರ್ ಖದೀಮರು ನೇಮಿಸಿಕೊಳ್ಳುತ್ತಿದ್ದಾರೆ.ಈ ವಂಚಕರು ತೆಲುಗು ಮಾತನಾಡುವ ಸಂತ್ರಸ್ತರನ್ನು ಬಳಸಿಕೊಂಡು ಇತರರಿಗೆ ಆಮಿಷವೊಡ್ಡಲು ಕಾಲ್ ಸೆಂಟರ್‌ಗಳಲ್ಲಿ ಕೆಲಸಕ್ಕೆ ಇಟ್ಟುಕೊಳ್ಳುತ್ತಾರೆ, ಅವರನ್ನು ಶೋಷಿಸುತ್ತಾರೆ.
ಮುನ್ನೆಚ್ಚರಿಕೆ ಕ್ರಮಗಳು: