ಅಸ್ಸಾಂ:ಇಲ್ಲಿನಮಜುಲಿ ಜಿಲ್ಲೆಯ ಸಮೀಪದ ಲಾಸನ್ ಚಾಪ್ರಿ ಎಂಬಲ್ಲಿ ತನ್ನ ತಾಯಿಯಿಂದ ಬೇರ್ಪಟ್ಟ ಮರಿಯಾನೆಯನ್ನು ಅರಣ್ಯ ಸಿಬ್ಬಂದಿ ಆರೈಕೆ ಮಾಡಿದ್ದಾರೆ. ತಮ್ಮ ಮಕ್ಕಳಂತೆ ಕಾಳಜಿ ವಹಿಸಿರುವ ಸಿಬ್ಬಂದಿಯೊಂದಿಗೆ ಆನೆಮರಿ ಆಟವಾಡುತ್ತಾ ತನ್ನ ತಾಯಿಯನ್ನೇ ಮರೆತಿದೆ. ಇವರ ಆಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕಳೆದ ಕೆಲವು ದಿನಗಳಿಂದ ಮಜುಲಿ ಹಾಗು ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡಾನೆಗಳ ಹಿಂಡು ಸುತ್ತಾಡುತ್ತಿದ್ದವು. ಇದನ್ನು ಸ್ಥಳೀಯರು ನೋಡಿದ್ದರು. ಶುಕ್ರವಾರ ಆನೆ ಮರಿ ತನ್ನ ತಾಯಿಯಿಂದ ಬೇರ್ಪಟ್ಟು ಮುಂದೆ ಸಾಗಿದೆ. ತಾಯಿಯ ಹುಡುಕಾಟದಲ್ಲಿ ದಣಿದಿದ್ದ ಆನೆ ಮರಿಯನ್ನು ಗಮನಿಸಿದ ಗ್ರಾಮಸ್ಥರು, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.