ಕರ್ನಾಟಕ

karnataka

ETV Bharat / bharat

ಜಾರ್ಖಂಡ್​ ವಿಧಾನಸಭಾ ಚುನಾವಣೆ ಫಲಿತಾಂಶ: ಇಂಡಿಯಾ ಮೈತ್ರಿಕೂಟಕ್ಕೆ ಭಾರೀ ಮುನ್ನಡೆ, ಬಿಜೆಪಿಗೆ ಹಿನ್ನಡೆ - JHARKHAND ASSEMBLY ELECTION RESULTS

ಆರಂಭದಲ್ಲಿ ಮುನ್ನಡೆಯಲ್ಲಿದ್ದ ಎನ್​ಡಿಎ ಮೈತ್ರಿಕೂಟವನ್ನು ಹಿಂದಿಕ್ಕಿ ಜೆಎಂಎಂ ನೇತೃತ್ವದ ಇಂಡಿಯಾ ಒಕ್ಕೂಟ ಮುನ್ನಡೆ ಸಾಧಿಸಿದೆ.

Hemant Soren and Champai Soren
ಹೇಮಂತ್ ಸೊರೆನ್ ಮತ್ತು ಚಂಪೈ ಸೊರೆನ್ (ANI)

By ETV Bharat Karnataka Team

Published : Nov 23, 2024, 11:57 AM IST

Updated : Nov 23, 2024, 2:30 PM IST

ರಾಂಚಿ (ಜಾರ್ಖಂಡ್)​:ಜಾರ್ಖಂಡ್​ನಲ್ಲಿ ಬಿಜೆಪಿ ನೇತೃತ್ವದ ಎನ್​ಡಿ ಹಾಗೂ ಜೆಎಂಎಂ ನೇತೃತ್ವದ ಇಂಡಿಯಾ ಮೈತ್ರಿಕೂಟದ ನಡುವಿನ ತೀವ್ರ ಪೈಪೋಟಿ ಮುಂದುವರಿದಿದೆ. ರಾಜ್ಯದ ಜನರು ಪ್ರಸ್ತುತವಿರುವ ಹೇಮಂತ್​ ಸೊರೆನ್​ ಸರ್ಕಾರದ ಮೇಲೆ ಮತ್ತೆ ನಂಬಿಕೆ ಇಟ್ಟಿರುವಂತೆ ತೋರುತ್ತಿದೆ. ಇಲ್ಲಿಯವರೆಗೆ ನಡೆದ ಮತ ಎಣಿಕೆ ಬಳಿಕ ಜೆಎಂಎಂ ನೇತೃತ್ವದ ಇಂಡಿ ಒಕ್ಕೂಟ 8 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದರೆ, ಎನ್​ಡಿಎ ಮೈತ್ರಿಕೂಟವನ್ನು 3 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದೆ.

ಉಳಿದಂತೆ 81 ವಿಧಾನಸಭಾ ಕ್ಷೇತ್ರಗಳ ಪೈಕಿ, ಜೆಎಂಎಂ- ಕಾಂಗ್ರೆಸ್​- ಆರ್​ಜೆಡಿ ಮೈತ್ರಿ 47 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ಎನ್​ಡಿಎ ಮೈತ್ರಿಕೂಟ 23 ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ.

ಮತ ಎಣಿಕೆ ಆರಂಭಗೊಂಡಾಗ ಎನ್​ಡಿಎ ಮೈತ್ರಿಕೂಟ, ಇಂಡಿ ಒಕ್ಕೂಟಕ್ಕಿಂತ ಮುನ್ನಡೆಯಲ್ಲಿತ್ತು. ಆದರೆ ಕೆಲವೇ ಸುತ್ತಿನ ಮತ ಎಣಿಕೆಯಲ್ಲಿ ಇಂಡಿಯಾ ಮೈತ್ರಿಕೂಟ ಮುನ್ನಡೆ ಸಾಧಿಸಿತು. ಜಾರ್ಖಂಡ್​ನಲ್ಲಿ 81 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 67.74 ಶೇ. ಮತದಾನ ನಡೆದಿತ್ತು. ಜಾರ್ಖಂಡ್​ ರಾಜ್ಯ ರಚನೆಯಾದ 24 ವರ್ಷಗಳಲ್ಲಿ ದಾಖಲಾದ ಅತ್ಯಂತ ಅಧಿಕ ಮತದಾನ ಇದಾಗಿದೆ.

ಇದನ್ನೂ ಓದಿ:ವಯನಾಡು ಲೋಕಸಭಾ ಉಪಚುನಾವಣೆ: ಪ್ರಿಯಾಂಕಾ ಗಾಂಧಿ ವಾದ್ರಾ ಭಾರಿ ಮುನ್ನಡೆ

Last Updated : Nov 23, 2024, 2:30 PM IST

ABOUT THE AUTHOR

...view details