ಕರ್ನಾಟಕ

karnataka

ಉಪಚುನಾವಣೆ ಫಲಿತಾಂಶ: ಇಂಡಿಯಾ ಕೂಟಕ್ಕೆ ಭರ್ಜರಿ ಗೆಲುವು, ಬಿಜೆಪಿಗೆ ಮುಖಭಂಗ - Assembly By Election Results

By PTI

Published : Jul 13, 2024, 6:17 PM IST

ವಿಧಾನಸಭೆಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್​ ನೇತೃತ್ವದ ಇಂಡಿಯಾ ಕೂಟ ಭರ್ಜರಿ ಗೆಲುವಿನ ನಗೆ ಬೀರಿದೆ. ಬಿಜೆಪಿಗೆ ಫಲಿತಾಂಶ ಭಾರೀ ನಿರಾಸೆ ತಂದಿದೆ. ಪೂರ್ಣ ವಿವರ ಮುಂದಿದೆ.

ಉಪಚುನಾವಣೆ ಫಲಿತಾಂಶ
ಉಪಚುನಾವಣೆ ಫಲಿತಾಂಶ (ANI)

ನವದೆಹಲಿ:ಏಳು ರಾಜ್ಯಗಳ ವಿಧಾನಸಭೆಯ 13 ಸ್ಥಾನಗಳಿಗೆ ಬುಧವಾರ (ಜುಲೈ 10) ನಡೆದಿದ್ದ ಉಪಚುನಾವಣಾ ಫಲಿತಾಂಶ ಇಂದು (ಶನಿವಾರ) ಪ್ರಕಟವಾಗಿದ್ದು, I.N.D.I.A ಮೈತ್ರಿಕೂಟ 10 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ ನೇತೃತ್ವದ ಎನ್​ಡಿಎಗೆ ಭಾರೀ ಹಿನ್ನಡೆ ಉಂಟಾಗಿದ್ದು, ಕೇವಲ 2 ಸ್ಥಾನಗಳಲ್ಲಿ ಮಾತ್ರ ಗೆಲುವು ಕಂಡಿದೆ. ಓರ್ವ ಸ್ವತಂತ್ರ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗದ ವೆಬ್​ಸೈಟ್​ನಲ್ಲಿ 13 ಸ್ಥಾನಗಳ ಫಲಿತಾಂಶ ಪ್ರಕಟಿಸಲಾಗಿದ್ದು, ಅದರಲ್ಲಿ ಕಾಂಗ್ರೆಸ್​ ಮತ್ತು ತೃಣಮೂಲ ಕಾಂಗ್ರೆಸ್​ (ಟಿಎಂಸಿ) ತಲಾ 4, ಆಮ್​ ಆದ್ಮಿ ಪಕ್ಷ (ಆಪ್​) ಮತ್ತು ದ್ರಾವಿಡ ಮುನ್ನೇತ್ರ ಕಜಗಂ (ಡಿಎಂಕೆ) ತಲಾ 1 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 2, ಓರ್ವ ಸ್ವತಂತ್ರ ಅಭ್ಯರ್ಥಿ ಜಯದ ಸಿಹಿ ಅನುಭವಿಸಿದ್ದಾರೆ.

ಜುಲೈ 10 ರಂದು ಪಂಜಾಬ್ (1), ಹಿಮಾಚಲ ಪ್ರದೇಶ (3), ಉತ್ತರಾಖಂಡ (2), ಪಶ್ಚಿಮ ಬಂಗಾಳ (4), ಮಧ್ಯಪ್ರದೇಶ (1), ಬಿಹಾರ (1) ಮತ್ತು ತಮಿಳುನಾಡು (1) ಸ್ಥಾನ ಸೇರಿ 13 ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಎಲೆಕ್ಷನ್​ನಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಇಂಡಿಯಾ ಕೂಟದ ಪಕ್ಷಗಳಾದ ಕಾಂಗ್ರೆಸ್, ಟಿಎಂಸಿ, ಎಎಪಿ ಮತ್ತು ಡಿಎಂಕೆ ಭರ್ಜರಿ ಸಾಧನೆ ಮಾಡಿವೆ.

ಫಲಿತಾಂಶ ಹೀಗಿದೆ:

  • ಬಿಹಾರನ ರುಪೌಲಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾದ ಶಂಕರ್​ ಸಿಂಗ್​ ಭರ್ಜರಿ ಜಯ ಸಾಧಿಸಿದ್ದಾರೆ. ಎದುರಾಳಿಯಾದ ಬಿಜೆಪಿ ಮತ್ತು ಜೆಡಿಯು ಮೈತ್ರಿ ಅಭ್ಯರ್ಥಿ ಕಲಾಧರ್​ ಪ್ರಸಾದ್​ ಮಂಡಲ್​ 8,246 ಮತಗಳಿಂದ ಪರಾಭವ ಹೊಂದಿದ್ದಾರೆ.
  • ಪಂಜಾಬ್‌ನ ಜಲಂಧರ್​ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ರಾಜ್ಯದ ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ) ಮೊಹಿಂದರ್ ಭಗತ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಶೀತಲ್ ಅಂಗುರಾಲ್ ಅವರನ್ನು 37,325 ಮತಗಳ ಅಂತರದಿಂದ ಸೋಲಿಸಿದ್ದಾರೆ.
  • ತಮಿಳುನಾಡಿನ ವಿಕ್ರವಾಂಡಿ ವಿಧಾನಸಭಾ ಕ್ಷೇತ್ರದಲ್ಲಿ ದ್ರಾವಿಡ ಮುನ್ನೇತ್ರ ಕಜಗಂ (ಡಿಎಂಕೆ) ಪಕ್ಷದ ಅಣ್ಣಿಯುರ್ ಶಿವ ಅವರು ಪಿಎಂಕೆಯ ಅನ್ಬುಮಣಿ ಅವರನ್ನು 67,757 ಮತಗಳಿಂದ ಗೆಲುವು ಸಾಧಿಸಿದ್ದಾರೆ.
  • ಮಧ್ಯಪ್ರದೇಶದಅಮರ್ವಾರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ. ಅಭ್ಯರ್ಥಿ ಕಮಲೇಶ್ ಪ್ರತಾಪ್ ಶಾ ಅವರು ಕಾಂಗ್ರೆಸ್‌ನ ಧೀರನ್ ಶಾ ಇನ್ವಾಟಿ ವಿರುದ್ಧ 3,027 ಮತಗಳ ಅಂತರದಿಂದ ಸೋಲಿಸಿದ್ದಾರೆ.
  • ಹಿಮಾಚಲಪ್ರದೇಶದಮೂರು ಸ್ಥಾನಗಳ ಪೈಕಿ 1 ರಲ್ಲಿ ಬಿಜೆಪಿ, 2 ಸ್ಥಾನಗಳಲ್ಲಿ ಕಾಂಗ್ರೆಸ್​ ಜಯ ಸಾಧಿಸಿವೆ. ಹಮೀರ್​ಪುರ್​ ಕ್ಷೇತ್ರದಲ್ಲಿ ಬಿಜೆಪಿಯ ಆಶಿಶ್​ ಶರ್ಮಾ, ದೇಹ್ರಾ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಕಮಲೇಶ್​ ಠಾಕೂರ್​, ನಲಘರ್​ನಲ್ಲಿ ಕಾಂಗ್ರೆಸ್​​ನ ಹರ್​ದೀಪ್​ ಸಿಂಗ್​ ಬಾವಾ ಅವರು ಗೆಲುವು ಕಂಡಿದ್ದಾರೆ.
  • ಉತ್ತರಾಖಂಡದಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಕ್ಲೀನ್​ಸ್ವೀಪ್​ ಮಾಡಿದೆ. ಮಂಗಲೌರ್​ ಕ್ಷೇತ್ರದಲ್ಲಿ ಬಿಜೆಪಿ ಟಕ್ಕರ್​ ನೀಡಿದರೂ, 422 ಅಲ್ಪ ಮತಗಳಿಂದ ಸೋತಿದೆ.
  • ಪಶ್ಚಿಮಬಂಗಾಳದನಾಲ್ಕೂ ಕ್ಷೇತ್ರಗಳನ್ನು ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್​ ಬಾಚಿಕೊಂಡಿದೆ. ರಾಯಗಂಜ್, ರಾಣಾಘಾಟ್​ ದಕ್ಷಿಣ, ಬಗ್ಡ, ಮಾಣಿಕ್​ತಾಲಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಕನಿಷ್ಠ 30 ಸಾವಿರಕ್ಕೂ ಅಧಿಕ ಮತಗಳಿಂದ ಪರಾಜಯ ಹೊಂದಿದ್ದಾರೆ.

ಇದನ್ನೂ ಓದಿ:ಟ್ರೈನಿಂಗ್ ಅವಧಿಯಲ್ಲೇ ಐಎಎಸ್ ಅಧಿಕಾರಿ ಪೂಜಾ ವಿವಾದ; ರೈತರಿಗೆ ಪಿಸ್ತೂಲ್ ಹಿಡಿದು ಬೆದರಿಸಿದ್ದ ತಾಯಿ! - Pooja Khedkar

ABOUT THE AUTHOR

...view details