ಪುರಿ (ಒಡಿಶಾ):ಪುರಿಯ ಜಗನ್ನಾಥ ದೇವಸ್ಥಾನದ ರತ್ನ ಭಂಡಾರದ ಎರಡನೇ ಸುತ್ತಿನ ಸಮೀಕ್ಷೆಯನ್ನು ಎಎಸ್‌ಐ ಶನಿವಾರ ಆರಂಭಿಸಿದೆ. ಹೀಗಾಗಿ, ಜಗನ್ನಾಥ ದೇವಸ್ಥಾನದ ಆಡಳಿತವು (ಎಸ್‌ಜೆಟಿಎ) ಭಕ್ತಾದಿಗಳಿಗೆ ಮಧ್ಯಾಹ್ನ 1 ರಿಂದ ಸಂಜೆ 6 ರವರೆಗೆ ದರ್ಶನವನ್ನು ನಿರ್ಬಂಧಿಸಿತು.
ದೇವಸ್ಥಾನದಲ್ಲಿನ ಭಂಡಾರದ ಕೋಣೆಗಳ ಜಿಪಿಆರ್ ಸಮೀಕ್ಷೆಯನ್ನು ಆರಂಭಿಸಲಾಗಿದೆ. ಇಂದಿನಿಂದ ಸೆಪ್ಟೆಂಬರ್ 23ರವರೆಗೆ ಮೂರು ದಿನಗಳ ಕಾಲ ಈ ಸಮೀಕ್ಷೆ ನಡೆಯಲಿದೆ. ಮೊದಲ ದಿನವಾದ ಶನಿವಾರ ಜಿಪಿಆರ್ ಸಮೀಕ್ಷೆ ಪೂರ್ಣಗೊಂಡಿದ್ದು, ಪಡೆದ ದತ್ತಾಂಶವನ್ನು ಮುಂದಿನ ಮೂರು ದಿನಗಳವರೆಗೆ ವಿಶ್ಲೇಷಿಸಲಾಗುತ್ತದೆ ಎಂದು ಮುಖ್ಯ ಆಡಳಿತಾಧಿಕಾರಿ ತಿಳಿಸಿದರು.
ಸಮೀಕ್ಷೆಯ ನಂತರ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಜಿಪಿಆರ್ ಸಮೀಕ್ಷೆ ಪೂರ್ಣಗೊಳ್ಳದ ಕಾರಣ ಭಂಡಾರದ ಒಳಗಿನ ಗುಪ್ತ ಮತ್ತು ರಹಸ್ಯ ಕೊಠಡಿಗಳ ಬಗ್ಗೆ ಏನನ್ನೂ ಹೇಳಲಾಗುವುದಿಲ್ಲ ಎಂದು ದೇವಸ್ಥಾನದ ಮುಖ್ಯ ಆಡಳಿತಾಧಿಕಾರಿ ಹೇಳಿದ್ದಾರೆ.
ಮೊದಲ ದಿನ ರತ್ನ ಭಂಡಾರದ ಮಣ್ಣಿನಡಿ ಏನಿದೆ ಎಂದು ಜಿಪಿಆರ್ ಸಮೀಕ್ಷೆ ನಡೆಸಲಾಯಿತು. ಮೂರು ಯಂತ್ರಗಳ ನೆರವಿನಿಂದ 10 ಮೀಟರ್ ಆಳದವರೆಗೆ ಸರ್ವೆ ಮಾಡಲಾಗಿದೆ. ಇನ್ನೂ ಎರಡು ದಿನ ಈ ಸಮೀಕ್ಷೆ ನಡೆಯಲಿದೆ. ಬಳಿಕ ಪಡೆದ ಡೇಟಾವನ್ನು ವಿಶ್ಲೇಷಿಸಲಾಗುವುದು. ರತ್ನದ ಅಡಿಯಲ್ಲಿ ರಹಸ್ಯ ಕೋಣೆಗಳು, ಕೊಠಡಿಗಳು ಅಥವಾ ರತ್ನದ ಆಭರಣಗಳು ಇವೆಯೇ ಎಂಬುದು ಸ್ಪಷ್ಟವಾಗುತ್ತದೆ. ಇನ್ನೆರಡು ದಿನಗಳಲ್ಲಿ ಎಲ್ಲ ಜಿಪಿಆರ್ ಸರ್ವೆ ಕಾರ್ಯ ಪೂರ್ಣಗೊಳಿಸಲು ಗುರಿ ನಿಗದಿಪಡಿಸಲಾಗಿದೆ. ಜಿಪಿಆರ್ ಸಮೀಕ್ಷೆ ಮುಗಿದ ನಂತರ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗುವುದು ಎಂದರು.