ಕರ್ನಾಟಕ

karnataka

ETV Bharat / bharat

ಅಗ್ನಿಪಥ್ ಯೋಜನೆಯಿಂದ ಸೇನೆಗೆ ಯಾವುದೇ ಪ್ರಯೋಜನವಿಲ್ಲ: ಪ್ರಧಾನಿಗೆ ಕಾಂಗ್ರೆಸ್ ತಿರುಗೇಟು - Agnipath Scheme - AGNIPATH SCHEME

ಅಗ್ನಿಪಥ್ ಯೋಜನೆಯಿಂದ ಸೇನೆಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಕಾಂಗ್ರೆಸ್​ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.

ಭಾರತೀಯ ಯೋಧರು
ಭಾರತೀಯ ಯೋಧರು (IANS)

By ETV Bharat Karnataka Team

Published : Jul 26, 2024, 4:15 PM IST

ನವದೆಹಲಿ: ಅಗ್ನಿಪಥ್ ಯೋಜನೆ ವಿಚಾರದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ ಬಳಿಕ, ಅಗ್ನಿಪಥ್ ಯೋಜನೆಯಿಂದ ಸೇನೆಗೆ ಯಾವುದೇ ಪ್ರಯೋಜನವಿಲ್ಲ ಅನೇಕ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದಾರೆ.

ನಾಲ್ಕು ವರ್ಷಗಳ ಸೇವೆಯ ನಂತರ ನಿವೃತ್ತರಾದ ಬಳಿಕ ಅಗ್ನಿವೀರರ ಭವಿಷ್ಯವೇನು ಎಂಬುದನ್ನು ಸರ್ಕಾರ ತಿಳಿಸಬೇಕಿದೆ ಎಂದು ಕಾಂಗ್ರೆಸ್ ಮುಖಂಡ ಸುಖ್ಜಿಂದರ್ ಸಿಂಗ್ ರಾಂಧವ ಹೇಳಿದರು. "ನಾವು ಗೊಂದಲ ಮೂಡಿಸುತ್ತಿದ್ದೇವೆ ಎಂದು ಪ್ರಧಾನಿ ಹೇಳುತ್ತಿದ್ದಾರೆ. 30 ವರ್ಷಗಳ ನಂತರ ಏನಾಗಬಹುದು ಎಂಬುದರ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಆದರೆ, ನಾಲ್ಕು ವರ್ಷಗಳ ನಂತರ ಅಗ್ನಿವೀರರ ಭವಿಷ್ಯ ಏನಾಗುತ್ತದೆ ಎಂಬುದರ ಬಗ್ಗೆ ಅವರು ಮೊದಲು ಮಾತನಾಡಲಿ" ಎಂದು ರಾಂಧವ ಹೇಳಿದರು.

ಕಾರ್ಗಿಲ್ ಯುದ್ಧದ ಸೈನಿಕರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಅಗ್ನಿಪಥ್ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಕಾರ್ತಿ ಚಿದಂಬರಂ ಪ್ರಧಾನಿಯನ್ನು ಟೀಕಿಸಿದರು.

ಆಧುನಿಕ ಯುದ್ಧಕ್ಕೆ ಸಂಪೂರ್ಣ ತರಬೇತಿ ಪಡೆದ ಸೈನಿಕರು ಬೇಕಾಗುತ್ತೆ:"ಅಗ್ನಿವೀರ್ ಯೋಜನೆಯನ್ನು ರದ್ದುಗೊಳಿಸಬೇಕು. ಆಧುನಿಕ ಯುದ್ಧಕ್ಕೆ ಸಂಪೂರ್ಣ ತರಬೇತಿ ಪಡೆದ ಸೈನಿಕರು ಬೇಕಾಗುತ್ತಾರೆ ಮತ್ತು ಈ ಯೋಜನೆಯು ಪೂರ್ಣ ತರಬೇತಿ ಪಡೆದ ಸೈನಿಕರನ್ನು ನೀಡುವುದಿಲ್ಲ. ಅಗ್ನಿವೀರ್ ಯೋಜನೆಯು ಸೇನೆಯ ಅಗತ್ಯಗಳನ್ನು ಪರಿಹರಿಸುವುದಿಲ್ಲ. ಭಾರತೀಯ ಸೇನೆಗೆ ಭವ್ಯವಾದ ಇತಿಹಾಸವಿದೆ ಮತ್ತು ಅದನ್ನು ರಾಜಕೀಯಗೊಳಿಸಬಾರದು." ಎಂದು ಪಿ.ಚಿದಂಬರಂ ಹೇಳಿದರು.

ದೇಶದ ರಕ್ಷಣಾ ಮತ್ತು ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯದ ಬಗ್ಗೆ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ ಎಂದು ಪ್ರಧಾನಿ ಮೋದಿ ಇಂದು ಹೇಳಿದ್ದಾರೆ. ದ್ರಾಸ್ (ಲಡಾಖ್) ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ ನಂತರ ಅವರು ವಿಜಯ್ ದಿವಸ್ ನ 25 ನೇ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿ 1999 ರ ಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸಿದರು.

ಪ್ರತಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ;"ದುರದೃಷ್ಟವಶಾತ್, ಕೆಲವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಈ ವಿಷಯದ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ. ರಕ್ಷಣಾ ಸಂಬಂಧಿತ ವಿವಿಧ ಹಗರಣಗಳಲ್ಲಿ ಭಾಗಿಯಾಗಿದ್ದ ಮತ್ತು ನಮ್ಮ ಪಡೆಗಳನ್ನು ದುರ್ಬಲಗೊಳಿಸಿದ ಜನ ಇವರೇ. ವಾಯುಪಡೆಯು ಆಧುನಿಕ ಫೈಟರ್ ಜೆಟ್ ಗಳನ್ನು ಪಡೆಯಬೇಕೆಂದು ಎಂದಿಗೂ ಬಯಸದವರು ಇವರು. ಇವರು ತೇಜಸ್ ಯುದ್ಧ ವಿಮಾನ ಯೋಜನೆಯನ್ನೇ ಸ್ಥಗಿತಗೊಳಿಸುವ ಉದ್ದೇಶ ಹೊಂದಿದ್ದರು" ಎಂದು ಪ್ರಧಾನಿ ಮೋದಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

"ಅಗ್ನಿಪಥ್ ಯೋಜನೆಯ ಬಗ್ಗೆ ಕೆಲವರು ಸುಳ್ಳು ಮಾಹಿತಿಗಳನ್ನು ಹರಡುತ್ತಿದ್ದಾರೆ. ಹಣ ಉಳಿಸಲು ಸರ್ಕಾರ ಈ ಯೋಜನೆ ತಂದಿದೆ ಎಂದು ಅವರು ಹೇಳುತ್ತಿದ್ದಾರೆ. ಆದರೆ ನಾನು ಅವರನ್ನು ಕೇಳಲು ಬಯಸುತ್ತೇನೆ- 30 ವರ್ಷಗಳ ನಂತರ ಪಿಂಚಣಿ ಸಮಸ್ಯೆಯ ಪ್ರಶ್ನೆ ಉದ್ಭವಿಸುತ್ತದೆ. ಅದರ ಬಗ್ಗೆ ಈಗಲೇ ಸರ್ಕಾರ ಏಕೆ ನಿರ್ಧಾರ ತೆಗೆದುಕೊಳ್ಳಬೇಕು? ಅಂದಿನ ಸರ್ಕಾರ ಅದನ್ನು ನಿರ್ಧರಿಸಲಿ. ನಾವು ಸೇನಾಪಡೆಗಳ ನಿರ್ಧಾರವನ್ನು ಗೌರವಿಸಿದ್ದೇವೆ, ಏಕೆಂದರೆ ನಮಗೆ ಇದು ರಾಜಕೀಯವಲ್ಲ ... ನಮಗೆ ದೇಶದ ಭದ್ರತೆಯೇ ಮೊದಲ ಆದ್ಯತೆಯಾಗಿದೆ" ಎಂದು ಪ್ರಧಾನಿ ಹೇಳಿದರು. 2022 ರಲ್ಲಿ ಪ್ರಾರಂಭಿಸಲಾದ ಅಗ್ನಿಪಥ್ ಯೋಜನೆಯನ್ನು ಸಶಸ್ತ್ರ ಪಡೆಗಳಲ್ಲಿ ಅಲ್ಪಾವಧಿಯ ಸೇವೆಗಾಗಿ ಸಿಬ್ಬಂದಿಯನ್ನು ನೇಮಕ ಮಾಡಲು ಜಾರಿಗೊಳಿಸಲಾಗಿದೆ.

ಇದನ್ನೂ ಓದಿ : ಪ್ರತಿಭಟನೆ ದಾಖಲಿಸಲು ನೀತಿ ಆಯೋಗದ ಸಭೆಗೆ ಹಾಜರಾಗುವೆ: ಸಿಎಂ ಮಮತಾ ಬ್ಯಾನರ್ಜಿ - NITI Aayog Meet

For All Latest Updates

ABOUT THE AUTHOR

...view details