ಕರ್ನಾಟಕ

karnataka

ಸನಾತನ ಧರ್ಮದ ಕುರಿತು ವಿವಾದಾತ್ಮ ಹೇಳಿಕೆ ಪ್ರಕರಣ: ಉದಯನಿಧಿ ಸ್ಟಾಲಿನ್​ಗೆ ಅರಾ ಕೋರ್ಟ್​ ಸಮನ್ಸ್ ಜಾರಿ

By ETV Bharat Karnataka Team

Published : Mar 12, 2024, 9:17 PM IST

ಸನಾತನ ಧರ್ಮದ ಕುರಿತು ವಿವಾದಾತ್ಮ ಹೇಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರ ಅರಾ ಕೋರ್ಟ್ ​ಸಮನ್ಸ್ ಜಾರಿ ಮಾಡಿದೆ. ​

ಸನಾತನ ಧರ್ಮದ ಕುರಿತು ವಿವಾದಾತ್ಮ ಹೇಳಿಕೆ ಪ್ರಕರಣ: ಉದಯನಿಧಿ ಸ್ಟಾಲಿನ್​ಗೆ ಅರಾ ಕೋರ್ಟ್​ ಸಮನ್ಸ್ ಜಾರಿ
ಸನಾತನ ಧರ್ಮದ ಕುರಿತು ವಿವಾದಾತ್ಮ ಹೇಳಿಕೆ ಪ್ರಕರಣ: ಉದಯನಿಧಿ ಸ್ಟಾಲಿನ್​ಗೆ ಅರಾ ಕೋರ್ಟ್​ ಸಮನ್ಸ್ ಜಾರಿ

ಬಿಹಾರ: ಸನಾತನ ಧರ್ಮ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್​ಗೆ ಬಿಹಾರದ ಅರಾ​ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಉದಯನಿಧಿ ವಿರುದ್ಧ ವಕೀಲ ಧರಣೀಧರ್ ಪಾಂಡೆ ಎಂಬುವವರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನೀಡಿದ್ದ ದೂರು ಕುರಿತು ಇಂದು ವಿಚಾರಣೆ ನಡೆಸಿದ ಅರಾ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಮನೋರಂಜನ್ ಕುಮಾರ್ ಝಾ ಅವರು ಸ್ಟಾಲಿನ್ ಹೇಳಿಕೆ ಧಾರ್ಮಿಕ ಭಾವನೆಗಳಿಗೆ ಘಾಸಿಗೊಳಿಸಿದೆ ಎಂದು ಹೇಳಿದ್ದಾರೆ. ದೂರುದಾರರು ಮತ್ತು ಇತರ ಸಾಕ್ಷಿಗಳ ಸಾಕ್ಷ್ಯದ ನಂತರ, ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 298ರ ಅಡಿ ಉದಯನಿಧಿ ಸ್ಟಾಲಿನ್​ ವಿರುದ್ದ ಸಮನ್ಸ್ ನೀಡಿ ಮುಂದಿನ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 1 ರಂದು ನಡೆಯಲಿದೆ.

ಪ್ರಕರಣದ ಹಿನ್ನೆಲೆ:ಕಳೆದ ವರ್ಷ ಸೆ.1 ರಂದು ತಮಿಳುನಾಡಿನಲ್ಲಿ ಪ್ರಗತಿಪರ ಲೇಖಕರ ವೇದಿಕೆ ಆಯೋಜಿಸಿದ್ದ ಸನಾತನ ಧರ್ಮ ನಿರ್ಮೂಲನಾ ಸಮಾವೇಶದಲ್ಲಿ ಮಾತನಾಡಿದ್ದ ಉದಯನಿಧಿ, ಸನಾತನ ಧರ್ಮವನ್ನು ಡೆಂಘೀ ಮತ್ತು ಮಲೇರಿಯಾದಂತಹ ಕಾಯಿಲೆಗಳೊಂದಿಗೆ ಹೋಲಿಸಿ, ಇದು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ. ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಅವರ ಈ ಹೇಳಿಕೆ ರಾಷ್ಟ್ರವ್ಯಾಪಿ ತೀವ್ರ ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಲ್ಲೆ ಅವರ ವಿರುದ್ದ ದೇಶದ ವಿವಿಧೆಡೆ ಪ್ರಕರಣಗಳು ದಾಖಲಿಸಲಾಗಿತ್ತು.

ಅರಾ ಸಿವಿಲ್ ನ್ಯಾಯಾಲಯದ ವಕೀಲರಾದ ಧರಣೀಧರ್ ಪಾಂಡೆ ಎಂಬುವವರು ಕೂಡ ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ಕುರಿತು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ಗೆ ದೂರು ಸಲ್ಲಿಸಿದ್ದರು. ಇದರಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 (ಬಿ), 153 (ಎ), 153 (ಬಿ), 295 (ಎ) ಮತ್ತು 298ರ ಅಡಿ ದೂರು ದಾಖಲಿಸಲಾಗಿತ್ತು.

ಇದನ್ನೂ ಓದಿ:5,8 ಮತ್ತು 9ನೇ ತರಗತಿಗಳ ಬೋರ್ಡ್​ ಪರೀಕ್ಷೆಗೆ ಸುಪ್ರೀಂ ತಡೆ

ABOUT THE AUTHOR

...view details