ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ದು ಅವರ ಕಿರಿಯ ಸಹೋದರ ಎನ್ ರಾಮಮೂರ್ತಿ ನಾಯ್ಡು ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
72 ವರ್ಷದ ರಾಮಮೂರ್ತಿ ನವೆಂಬರ್ 14ರಂದು ಹೃದಯಾಘಾತಕ್ಕೆ ತುತ್ತಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದರು. ಆವರು ಇಂದು ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
ರಾಮಮೂರ್ತಿ ನಾಯ್ಡು ಅವರು ಉಸಿರಾಟದ ತೊಂದರೆಗೆ ಒಳಗಾಗಿದ್ದು, ಈ ಹಿಂದೆ ವೆಂಟಿಲೇಟರಿ ಬೆಂಬಲದ ಚಿಕಿತ್ಸೆ ಪಡೆದಿದ್ದರು.
ಆಸ್ಪತ್ರೆಗೆ ದಾಖಲಾದ ಬಳಿಕ ಅವರು ಹೃದಯಾಘಾತಕ್ಕೆ ಒಳಗಾಗಿದ್ದು, ಆರೋಗ್ಯ ಸಮಸ್ಯೆ ಬಿಗಡಾಯಿಸಿತು. ಎಲ್ಲ ವೈದ್ಯಕೀಯ ಪ್ರಯತ್ನಗಳ ನಡುವೆ ಅವರ ಆರೋಗ್ಯದಲ್ಲಿ ಯಾವುದೇ ಆರೋಗ್ಯ ಸುಧಾರಣೆ ಕಂಡಿರಲಿಲ್ಲ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ರಾಮಮೂರ್ತಿ ನಾಯ್ಡು 1994 - 99ರವರೆಗೆ ಆಂಧ್ರಪ್ರದೇಶದ ಚಂದ್ರಗಿರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅವರ ಮಗ ನಾರಾ ರೋಹಿತ್ ಟಾಲಿವುಡ್ ನಟರಾಗಿದ್ದಾರೆ.
ರಾಮ ಮೂರ್ತಿ ನಾಯ್ಡು ಅವರ ಸಾವಿಗೆ ತೆಲಂಗಾಣ ಸಿಎಂ ಎ ರೇವಂತ್ ರೆಡ್ಡಿ ಕೂಡ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಗಂಗಾ ಆರತಿಯಲ್ಲಿ ಪಾಲ್ಗೊಂಡ ತೆಂಡೂಲ್ಕರ್ ಕುಟುಂಬ