ಅಗರ್ - ಮಾಲ್ವಾ (ಮಧ್ಯಪ್ರದೇಶ):ಪ್ರೀತಿಗೆ ವಯಸ್ಸಿಲ್ಲ, ಪ್ರೀತಿಗೆ ಮಿತಿಯಿಲ್ಲ, ಪ್ರೀತಿಗೆ ಧರ್ಮವಿಲ್ಲ ಮತ್ತು ಜಾತಿಯಿಲ್ಲ ಎಂದು ಹೇಳಲಾಗುತ್ತದೆ. ಪರಸ್ಪರರ ಭಾವನೆಗಳನ್ನು ಅರ್ಥ ಮಾಡಿಕೊಂಡವರು ಸಂಗಾತಿಗಳಾಗುತ್ತಾರೆ. ಜಗತ್ತು ಏನೇ ಹೇಳಿದರೂ ಅದರ ಬಗ್ಗೆ ಪ್ರೇಮಿಗಳು ಮಾತ್ರ ತಲೆಕೆಡಿಸಿಕೊಳ್ಳುವುದಿಲ್ಲ. ಇಂತಹದೊಂದು ಇನ್‌ಸ್ಟಾಗ್ರಾಮ್ ಲವ್ ಸ್ಟೋರಿಯೊಂದು ಭಾರಿ ಸದ್ದು ಮಾಡುತ್ತಿದೆ.
ಇನ್‌ಸ್ಟಾಗ್ರಾಮ್ ಪ್ರೇಮಕಥೆ: ಮಧ್ಯಪ್ರದೇಶದ ಅಗರ್ - ಮಾಲ್ವಾ ಜಿಲ್ಲೆಯ ಸುಸ್ನರ್ ಪ್ರದೇಶದ ನಿವಾಸಿ, 80 ವರ್ಷ ಪೂರೈಸಿರುವ ಬಲುರಾಮ್ ಅವರು 34 ವರ್ಷದ ವಧುವನ್ನು ವರಿಸಿದ್ದಾರೆ. ಸಾಮಾಜಿಕ ಜಾಲತಾಣವಾದ ಇನಸ್ಟಾಗ್ರಾಮ್ನಲ್ಲಿ ಇವರಿಬ್ಬರ ಪರಿಚಯವಾಗಿತ್ತು. ಆ ಪರಿಚಯ ಸ್ನೇಹವು ಪ್ರೀತಿಯಾಗಿ ಬದಲಾಗಿದೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇನ್‌ಸ್ಟಾಗ್ರಾಮ್ ಪ್ರೇಮಿಗಳು: ಪ್ರೀತಿ ವಿಷಯವು ಹೆಚ್ಚು ಕಾಲ ಮರೆ ಮಾಚಲು ಆಗುವುದಿಲ್ಲ ಎಂದು ಹೇಳಲಾಗುತ್ತದೆ. ಅದರಂತೆಯೇ ಬಲುರಾಮ್ ಅವರ ಪ್ರೇಮಕಥೆ ಕ್ರಮೇಣ ನಗರ ಮತ್ತು ರಾಜ್ಯದಲ್ಲಿ ಹರಡಿತು. ನಂತರ ಇಬ್ಬರೂ ಮದುವೆಯಾದರು. ಮಹಾರಾಷ್ಟ್ರದ ದರ್ಯಾಪುರ್ ಅಮರಾವತಿ ನಿವಾಸಿ 34 ವರ್ಷದ ಶೀಲಾ ಇಂಗ್ಲೆ ಹಾಗೂ ಮಧ್ಯಪ್ರದೇಶದ ಅಗರ್ ಮಾಲ್ವಾ ಜಿಲ್ಲೆಯ ಸುಸ್ನರ್ ಪ್ರದೇಶದ ಮಗರಿಯಾ ಗ್ರಾಮದ ನಿವಾಸಿ 80 ವರ್ಷದ ಬಲುರಾಮ್ ಅವರು Instagram ನಲ್ಲಿ ಸುಮಾರು ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದೀಗ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನ್ಯಾಯಾಲಯದ ಆವರಣದಲ್ಲಿರುವ ಹನುಮಾನ್ ದೇಗುಲದಲ್ಲಿ ಈ ಜೋಡಿ ವಿವಾಹ ಮಾಡಿಕೊಂಡಿದೆ.