ಕರ್ನಾಟಕ

karnataka

ETV Bharat / bharat

ವಿಯೆಟ್ನಾಂನ ಎರಡು ವಿಮಾನ ನಿಲ್ದಾಣಗಳಲ್ಲಿಯೂ ಭಾರತದ ಅದಾನಿ ಗ್ರೂಪ್ ಹೂಡಿಕೆ! - Adani Group Invest - ADANI GROUP INVEST

ಗೌತಮ್ ಅದಾನಿ ಸಮೂಹ ಸಂಸ್ಥೆ ವಿಯೆಟ್ನಾಂನ ಕೆಲವು ಯೋಜನೆಯ ಅಭಿವೃದ್ಧಿಗಾಗಿ​ ಹೂಡಿಕೆ ಮಾಡಲು ಯೋಜಿಸಿದೆ. ಪ್ರಧಾನಿ ಫಾಮ್ ಮಿನ್ ಚಿನ್ಹ್ ಅವರ ಭಾರತಕ್ಕೆ ಭೇಟಿ ಬಳಿಕ ವಿಯೆಟ್ನಾಂ ಸರ್ಕಾರ ತನ್ನ ಈ ಹೇಳಿಕೆ ಬಿಡುಗಡೆ ಮಾಡಿದೆ.

India's Adani Group Considers Investing US$ 2 Billion In Vietnam's Two Airports
ಭಾರತದ ಉದ್ಯಮಿ ಗೌತಮ್ ಅದಾನಿ (ETV Bharat)

By ETV Bharat Karnataka Team

Published : Aug 1, 2024, 11:17 AM IST

ಹೊಸದಿಲ್ಲಿ: ಭಾರತದ ಉದ್ಯಮಿ ಗೌತಮ್ ಅದಾನಿ ಗ್ರೂಪ್ ಒಡೆತನಕ್ಕೆ ವಿಯೆಟ್ನಾಂನಲ್ಲಿ ಎರಡು ವಿಮಾನ ನಿಲ್ದಾಣಗಳಲ್ಲಿ ಹೂಡಿಕೆ ಮಾಡಲು ಒಪ್ಪಿಗೆ ಸೂಚಿಸಲಾಗಿದೆ ಎಂದು ವಿಯೆಟ್ನಾಂ ಸರ್ಕಾರ ಬುಧವಾರ ತಿಳಿಸಿದೆ. ವಿಯೆಟ್ನಾಂ ಪ್ರಧಾನಿ ಫಾಮ್ ಮಿನ್ ಚಿನ್ಹ್ ಅವರು ಮಂಗಳವಾರ ತಮ್ಮ ಮೂರು ದಿನಗಳ ರಾಜ್ಯ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ್ದು, ಇದರ ಬೆನ್ನಲ್ಲೇ ವಿಯೆಟ್ನಾಂ ಸರ್ಕಾರ ತನ್ನ ಈ ಹೇಳಿಕೆ ಬಿಡುಗಡೆ ಮಾಡಿದೆ.

ವಿಯೆಟ್ನಾಂನ ಮಧ್ಯ ಕರಾವಳಿ ನಗರವಾದ ಡಾ ನಾಂಗ್‌ನಲ್ಲಿ 'ಲಿಯಾನ್ ಚಿಯು' ಎಂಬ ಬಂದರು ಯೋಜನೆ ಅಭಿವೃದ್ಧಿಪಡಿಸಲು ಗೌತಮ್ ಅದಾನಿ ಅಧ್ಯಕ್ಷತನ ಅದಾನಿ ಗ್ರೂಪ್‌, 2 ಬಿಲಿಯನ್ ಅಮೆರಿಕನ್​ ಡಾಲರ್‌ಗಳನ್ನು ಹೂಡಿಕೆ ಮಾಡಲು ಯೋಜಿಸಿದೆ. ದೇಶದಲ್ಲಿ ಬಂದರು ನಿರ್ಮಿಸಲು ಅನುಮತಿ ನೀಡಲಾಗಿದೆ ಎಂದು ಕಂಪನಿ ಬಹಿರಂಗಪಡಿಸಿದ ವಾರಗಳ ನಂತರ ವಿಯೆಟ್ನಾಂ ಪ್ರಧಾನ ಮಂತ್ರಿಗಳ ಕಚೇರಿ ಹೇಳಿದೆ.

ಭಾರತದಲ್ಲಿ ವಿಯೆಟ್ನಾಂ ಪ್ರಧಾನಿ:ನವದೆಹಲಿಯಲ್ಲಿ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ & ಇಂಡಸ್ಟ್ರಿ (FICCI) ಆಯೋಜಿಸಿರುವ ಎರಡು ದಿನಗಳ ವಿಯೆಟ್ನಾಂ - ಇಂಡಿಯಾ ಬ್ಯುಸಿನೆಸ್ ಫೋರಮ್‌ನಲ್ಲಿ ಭಾಗವಹಿಸಲು ವಿಯೆಟ್ನಾಂ ಪ್ರಧಾನಿ ಫಾಮ್ ಮಿನ್ ಚಿನ್ಹ್ ಭಾರತಕ್ಕೆ ಆಗಮಿಸಿದ್ದು, ಅಲ್ಲಿ ಉದ್ಯಮಿ ಗೌತಮ್ ಅದಾನಿ ಬುಧವಾರ ಅವರನ್ನು ಭೇಟಿಯಾದರು.

ಬ್ಯುಸಿನೆಸ್ ಫೋರಮ್‌ನಲ್ಲಿ ''ತಮ್ಮ ದೇಶವು ವಿದೇಶಿ ಹೂಡಿಕೆದಾರರಿಗೆ ಹೆದ್ದಾರಿಗಳಿಂದ ಹಿಡಿದು, ವಿಮಾನ ನಿಲ್ದಾಣ, ಬಂದರು, ಮೆಟ್ರೋ, ಲಾಜಿಸ್ಟಿಕ್ ಕೇಂದ್ರ ಮತ್ತು ಹೈಸ್ಪೀಡ್ ರೈಲು ಮಾರ್ಗಗಳಂತಹ ಅಗತ್ಯ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅನುಕೂಲಕರ ವ್ಯವಸ್ಥೆ ಕಲ್ಪಿಸಿದೆ. ನಮ್ಮ ಆರ್ಥಿಕ ಮತ್ತು ತಾಂತ್ರಿಕ ಸಂಪನ್ಮೂಲಗಳೊಂದಿಗೆ ವಿವಿಧ ಯೋಜನೆಗಳಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸಲು ನಾವು ಬದ್ಧರಾಗಿದ್ದೇವೆ'' ಎಂದು ವಿಯೆಟ್ನಾಂ ಪ್ರಧಾನಿಗಳು ತಿಳಿಸಿದರು.

"ಅದಾನಿ ಸಮೂಹವು ಸುಧಾರಿತ, ಹೊಸ ಮತ್ತು ಶುದ್ಧ ತಂತ್ರಜ್ಞಾನಗಳೊಂದಿಗೆ ವಿಯೆಟ್ನಾಂಗೆ ಕಾಲಿಡುವಂತೆ ಸಲಹೆ ನೀಡಿದ ಪ್ರಧಾನಿ, ಲಾಂಗ್ ಥಾನ್ ವಿಮಾನ ನಿಲ್ದಾಣ ಮತ್ತು ಚು ಲೈ ವಿಮಾನ ನಿಲ್ದಾಣದ ನಿರ್ಮಾಣದ ಮೂಲಕ ವಾಯುಯಾನ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ವಿಯೆಟ್ನಾಂ ಪಾಲುದಾರರೊಂದಿಗೆ ಸಹಕಾರ ಬಲಪಡಿಸಲು ಅದಾನಿ ಸಮೂಹ ಯೋಜಿಸುತ್ತಿದೆ" ಎಂದು ತಿಳಿಸಿದರು.

ಈಗಾಗಲೇ ಇವೆ 2 ರನ್​​​​​ವೇಗಳಿವೆ:ಹೂಡಿಕೆಯಲ್ಲಿ ವಿಯೆಟ್ನಾಂ ಸಂಸ್ಥೆಗಳೊಂದಿಗೆ ಅದಾನಿ ಸಹಕರಿಸಿದರೆ ಅದು ಪ್ರಯೋಜನಕಾರಿ ಎಂದ ಚಿನ್ಹ್, ಮಾತುಕತೆ ಬಳಿಕ ಲಿಯೆನ್ ಚಿಯು ಬಂದರು ಯೋಜನೆಗೆ ಸಂಬಂಧಿಸಿದಂತೆ, ಕಾರ್ಯವಿಧಾನದ ಅಡಚಣೆಗಳನ್ನು ಪರಿಹರಿಸಲು ಅಧಿಕಾರಿಗಳು ಅದಾನಿ ಗ್ರೂಪ್‌ನೊಂದಿಗೆ ಚರ್ಚೆಯಲ್ಲಿ ತೊಡಗುವಂತೆ ಅವರು ಇದೇ ವೇಳೆ ಸೂಚಿಸಿದರು. ವಿಮಾನ ನಿಲ್ದಾಣವು ಈಗಾಗಲೇ ಎರಡು ರನ್‌ವೇಗಳನ್ನು ಹೊಂದಿದ್ದು, 1,200 ಹೆಕ್ಟೇರ್ ಭೂಮಿಯನ್ನು ಬಳಸಲು ಸಿದ್ಧವಾಗಿದೆ ಎಂದು ಅವರು ಗಮನಕ್ಕೆ ತಂದರು.

ವಿಯೆಟ್ನಾಂನ ಅತಿದೊಡ್ಡ ವಿಮಾನ ನಿಲ್ದಾಣವಾಗಲು ಸಿದ್ಧವಾಗಿರುವ ಲಾಂಗ್ ಥಾನ್‌ನ ಅಭಿವೃದ್ಧಿಗೆ ಹೂಡಿಕೆದಾರರು ಹೇಗೆ ಕೊಡುಗೆ ನೀಡಬಹುದು ಎಂಬುದರ ಕುರಿತು ಅದಾನಿ ಗ್ರೂಪ್‌ಗೆ ಮಾರ್ಗದರ್ಶನ ನೀಡುವಂತೆ ಅವರು ಯೋಜನೆ ಮತ್ತು ಹೂಡಿಕೆ ಸಚಿವಾಲಯಕ್ಕೆ ನಿರ್ದೇಶನ ಕೂಡ ನೀಡಿದರು.

ಲಿಯೆನ್ ಚಿಯು ಪೋರ್ಟ್ ಯೋಜನೆಯು ವಿಯೆಟ್ನಾಂನ ಆಳ ಸಮುದ್ರ ಬಂದರನ್ನು ಅಭಿವೃದ್ಧಿಪಡಿಸುವ ಮಹತ್ವದ ಯೋಜನೆಗಳಲ್ಲಿ ಒಂದು. ಕಡಲ ಮೂಲಸೌಕರ್ಯ ಹೆಚ್ಚಿಸಲು ಮತ್ತು ದೊಡ್ಡ ಹಡಗುಗಳಿಗೆ ಅವಕಾಶ ಕಲ್ಪಿಸುವ ಕಾರ್ಯತಂತ್ರದ ಭಾಗ ಕೂಡ ಇದಾಗಿದೆ. ಇದು ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು ಸಹಕಾರಿಯಾಗಲಿದೆ. ಉಭಯ ರಾಷ್ಟ್ರಗಳಲ್ಲಿ ಉತ್ತಮ ಬಾಂಧವ್ಯ ಇರುವುದರಿಂದ ಭಾರತೀಯ ಕಂಪನಿಗಳು ವಿಯೆಟ್ನಾಂನಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸಿವೆ.

ಇದನ್ನೂ ಓದಿ:ರಾಜ್ಯದಲ್ಲಿ ಸನ್ಸೇರಾದಿಂದ 2,100 ಕೋಟಿ ಹೂಡಿಕೆ, ಸಾವಿರಾರು ಉದ್ಯೋಗ ಸೃಷ್ಟಿಯ ಗುರಿ: ಒಡಂಬಡಿಕೆಗೆ ಸಹಿ - Sansera Investment in Karnataka

ABOUT THE AUTHOR

...view details