ಚೆನ್ನೈ:ಗ್ರೀನ್ಫೀಲ್ಡ್ ವಿಮಾನ ನಿಲ್ದಾಣದ ಪ್ರಸ್ತಾವನೆಯೊಂದಿಗೆ ಕಾಂಚೀಪುರ್ ಜಿಲ್ಲೆಯ ಎಗನಪುರಂ ಗ್ರಾಮದಲ್ಲಿ ಚೆನ್ನೈನ ಎರಡನೇ ವಿಮಾನ ನಿಲ್ದಾಣ ವಿರೋಧಿಸಿ ತಮಿಳು ನಟ ಹಾಗೂ ಟಿವಿಕೆ ಅಧ್ಯಕ್ಷ ವಿಜಯ್ ಪ್ರತಿಭಟನಾ ಮೆರವಣಿಗೆಗೆ ಸಜ್ಜಾಗಿದ್ದಾರೆ.
ಜನವರಿ 20ರಂದು ಅವರು ಪ್ರತಿಭಟನೆ ನಡೆಸಲಿದ್ದು, ಈ ಸಂಬಂಧ ಕಾಂಚೀಪುರಂಜಿಲ್ಲೆ ಎಂಗನಪುರಂ ಭೇಟಿಗೆ ಅನುಮತಿಯನ್ನು ಕೇಳಿದ್ದಾರೆ. 2022ರಿಂದ ಈ ಯೋಜನೆಗೆ 20 ಗ್ರಾಮವಾಸಿಗಳು ವಿರೋಧಿಸುತ್ತಿದ್ದು, ಈ ಪ್ರತಿಭಟನೆ ಮೂಲಕ ವಿಜಯ್ ಅವರನ್ನು ಬೆಂಬಲಿಸುವ ಉದ್ದೇಶ ಹೊಂದಿದ್ದಾರೆ.
ಈ ಕುರಿತು ಸಭೆ ನಡೆಸಲು ಜನ 19 ಅಥವಾ 20ರಂದು ಅನುಮತಿ ನೀಡುವಂತೆ ವಿಜಯ್ ಕಾಂಚೀಪುರಂ ಪೊಲೀಸರಿಗೆ ಅನುಮತಿ ಕೋರಿದ್ದರು. ಜನವರಿ 20ರಂದು ಪ್ರತಿಭಟನಾ ಸಭೆಗೆ ಅವಕಾಶ ನೀಡಲಾಗಿದೆ. ಈ ಹಿನ್ನಲೆ ಟಿವಿಕೆ ಕಚೇರಿ ಪ್ರತಿಭಟನಾ ಸಮಿತಿ ನಾಯಕರ ಜೊತೆಗೆ ಸಿದ್ಧತೆ ಆರಂಭಿಸಿದೆ. ಪ್ರತಿಭಟನೆ ನಡೆಸಲು ಐದು ಎಕರೆ ಜಾಗವನ್ನು ಟಿವಿಕೆ ರಾಜ್ಯ ಅಧಿಕಾರಿಗಳು ಗುರುತಿಸಿದ್ದು, ಸಿದ್ಧತಾ ಕಾರ್ಯ ನಡೆಸಿದ್ದಾರೆ.
ಎಂಗನಪುರಂ ಗ್ರಾಮದಲ್ಲಿ ಅಂಬೇಡ್ಕರ್ ಪ್ರತಿಮೆ ಬಳಿ ಇರುವ ಖಾಲಿ ಮೈದಾನದಲ್ಲಿ ವಿಜಯ್, ಇಲ್ಲಿನ ಉದ್ದೇಶಿಸಿ ಮಾತನಾಡಲಿದ್ದು, ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್ ಆನಂದ್ ತಿಳಿಸಿದ್ದು, ಈ ಕುರಿತು ಶುಕ್ರವಾರ ಸ್ಥಳಪರಿಶೀಲನೆ ನಡೆಸಿದರು