ಕರ್ನಾಟಕ

karnataka

ETV Bharat / bharat

ಲಿವ್​ ಇನ್​ ಸಂಗಾತಿಯನ್ನು ಕೊಂದು 8 ಗಂಟೆ ಕಾಲ ಶವದ ಪಕ್ಕದಲ್ಲೇ ಕುಳಿತ ಮಹಿಳೆ! - WOMAN STABBED HER LIVE IN PARTNER

ಲಿವ್​ ಇನ್​ ಸಂಗಾತಿಯನ್ನು ಹತ್ಯೆ ಮಾಡಿ ಶವದ ಪಕ್ಕದಲ್ಲಿಯೇ 8ಗಂಟೆಗಳ ಕಾಲ ಸಮಯ ಕಳೆದ ಮಹಿಳೆ ಬಳಿಕ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ.

A woman stabbed her live in partner to death in delhi
ಸಾಂದರ್ಭಿಕ ಚಿತ್ರ (IANS)

By ETV Bharat Karnataka Team

Published : Oct 24, 2024, 1:44 PM IST

ನವದೆಹಲಿ:ಲಿವ್​ ಇನ್​ ಸಂಗಾತಿಯನ್ನು ಮಹಿಳೆಯೊಬ್ಬರು ಸ್ಕ್ರೂ ಡ್ರೈವರ್​, ಸುತ್ತಿಗೆ ಮತ್ತು ಕೋಲಿನಿಂದ ಹೊಡೆದು ದಾರುಣವಾಗಿ ಕೊಲೆ ಮಾಡಿರುವ ಘಟನೆ ನವದೆಹಲಿಯ ಭಲ್ಸವ್​ ಡೈರಿ ಪೊಲೀಸ್​ ಠಾಣೆ ವ್ಯಾಪ್ತಿಯ ಮುಕುಂದಪುರ್​ನಲ್ಲಿ ನಡೆದಿದೆ. ಸಂಗಾತಿಯನ್ನು ಹತ್ಯೆ ಮಾಡಿ ಶವದ ಪಕ್ಕದಲ್ಲಿಯೇ 8ಗಂಟೆಗಳ ಕಾಲ ಸಮಯ ಕಳೆದ ಮಹಿಳೆ ಬಳಿಕ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ.

ಏನಿದು ಘಟನೆ: 30 ವರ್ಷದ ಕಳೆದ ಹಲವು ವರ್ಷಗಳಿಂದ ಪ್ಲಂಬರ್​ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಂದಿಗೆ ಸಂಬಂಧವನ್ನು ಹೊಂದಿದ್ದರು. 2018ರಲ್ಲಿ ಗಂಡನಿಂದ ದೂರವಾದ ಮಹಿಳೆ ಈತನ ಜೊತೆಗೆ ಸಹ ಜೀವನಕ್ಕೆ ಮಂದಾದರು. ಇದಾಗಿ ನಾಲ್ಕು ಮಕ್ಕಳನ್ನು ಅತ್ತೆ ಮನೆಗೆ ಬಿಟ್ಟಿದ್ದರು.

ಕಳೆದ ಕೆಲವು ವರ್ಷಗಳ ಹಿಂದೆ ಈತನನ್ನು ತೊರೆದ ಮಹಿಳೆ ಮತ್ತೊಬ್ಬನ ಜೊತೆಗೆ ಸಹ ಜೀವನಕ್ಕೆ ಮುಂದಾದರು. ಇದು ಇಬ್ಬರ ನಡುವಿನ ಗಲಾಟೆಗೆ ಕಾರಣವಾಯಿತು. ಮಹಿಳೆಯ ಈ ನಡೆಯನ್ನು ಪ್ರಶ್ನಿಸಿದ ಕಾರಣಕ್ಕೆ ಆತನನ್ನು ಆಕೆ ಸ್ಕ್ರೂ ಡ್ರೈವರ್​ನಿಂದ ಹೊಡೆದಿದ್ದಾರೆ. ಜ್ಞಾನತಪ್ಪಿದ ಆತನ ಮೇಲೆ ಕೋಲು​ ಮತ್ತು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾರೆ.

ಪ್ರಕರಣ ಕುರಿತು ಮಾತನಾಡಿದ ಪೊಲೀಸರು, ಮಹಿಳೆಯು ವ್ಯಕ್ತಿಗೆ ದೇಹವನ್ನು ಸ್ಕ್ರೂಡ್ರೈವರ್​ನಿಂದ ಇರಿದು ಕೊಂದಿದ್ದಾರೆ. ಆತನ ಸಾವಿನ ಬಳಿಕವೂ 8 ಗಂಟೆಗಳ ಕಾಲ ಶವದ ಪಕ್ಕವೇ ಕುಳಿತ ಕಾಲ ಕಳೆದಿದ್ದಾರೆ. ಬಳಿಕ ರಾತ್ರಿ ಸಮಯದಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣಕ್ಕೆ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ವಾಟರ್​ಟ್ಯಾಂಕ್​ ಕುಸಿದು ಐವರ ಸಾವು: ಹಲವರಿಗೆ ಗಾಯ, ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ABOUT THE AUTHOR

...view details