ಹೈದರಾಬಾದ್: ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ ಮೇಲೆ ಆಕೆಯ ಸ್ನೇಹಿತನೇ ಅತ್ಯಾಚಾರವೆಸಗಿದ ಘಟನೆ ನಗರದ ಗಚ್ಚಿಬೌಲಿಯಲ್ಲಿ ನಡೆದಿದೆ. ಕಿರುಚಿತ್ರ ನಿರ್ದೇಶಕ ಸಿದ್ಧಾರ್ಥ್ ವರ್ಮಾ ಅತ್ಯಾಚಾರವೆಸಗಿರುವ ಆರೋಪಿ. ಸಂತ್ರಸ್ತೆ ಯುವತಿ ಆತನ ಸ್ನೇಹಿತೆಯಾಗಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಯುವತಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಿದ್ಧಾರ್ಥ್ ವರ್ಮಾಗೆ ಇತ್ತೀಚೆಗೆ ಯುವತಿ ಪರಿಚಯವಾಗಿದ್ದಳು ಎಂದು ತಿಳಿದುಬಂದಿದೆ.