ಕರ್ನಾಟಕ

karnataka

ETV Bharat / bharat

ಇವರಿಗೆ ಇರುವುದೇ 10 ಸಾವಿರ ಸಂಬಳ: ಈ ವ್ಯಕ್ತಿಗೀಗ 2 ಕೋಟಿ ರೂ. ಆದಾಯ ತೆರಿಗೆ ನೋಟಿಸ್ - Income Tax Notice

10 ಸಾವಿರ ರೂಪಾಯಿ ಸಂಬಳ ಪಡೆಯುವ ವ್ಯಕ್ತಿಗೆ 2 ಕೋಟಿ ರೂ. ಆದಾಯ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲಾಗಿದೆ.

ಆದಾಯ ತೆರಿಗೆ ನೋಟಿಸ್ ಪಡೆದ ವ್ಯಕ್ತಿ
ಆದಾಯ ತೆರಿಗೆ ನೋಟಿಸ್ ಪಡೆದ ವ್ಯಕ್ತಿ (IANS)

By ETV Bharat Karnataka Team

Published : Sep 26, 2024, 5:05 PM IST

ಗಯಾ: ಬಿಹಾರದ ಗಯಾದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಖಾಸಗಿ ಉದ್ಯೋಗದಲ್ಲಿದ್ದು 10,000 ರೂ. ಸಂಬಳ ಪಡೆಯುವ ವ್ಯಕ್ತಿಗೆ 2 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸುವಂತೆ ನೋಟಿಸ್ ಬಂದಿರುವುದು ಅಚ್ಚರಿ ಹಾಗೂ ಆಘಾತ ಮೂಡಿಸಿದೆ.

ಎರಡು ದಿನಗಳಲ್ಲಿ ನೀವು 67 ಲಕ್ಷ ಪಾವತಿಸಿ ಎಂದು ನೋಟಿಸ್​:ಎರಡು ದಿನಗಳಲ್ಲಿಯೇ 67 ಲಕ್ಷ ರೂ. ಪಾವತಿಸುವಂತೆ ಮಾಡುವಂತೆ ಅವರಿಗೆ ಸೂಚಿಸಲಾಗಿದೆ. ನೋಟಿಸ್ ಸ್ವೀಕರಿಸಿದ ವ್ಯಕ್ತಿಯು ಭಯದಿಂದ ಕೆಲಸಕ್ಕೆ ಹೋಗುವುದನ್ನೇ ನಿಲ್ಲಿಸಿದ್ದಾರೆ. ನಂತರ ಆಪ್ತರ ಸಲಹೆಯ ಮೇರೆಗೆ ಅವರು ಆದಾಯ ತೆರಿಗೆ ಇಲಾಖೆ ಕಚೇರಿಯನ್ನು ಸಂಪರ್ಕಿಸಿದ್ದಾರೆ. ಆಗ ನೋಟಿಸ್​ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವಂತೆ ಅಧಿಕಾರಿಗಳು ಅವರಿಗೆ ಹೇಳಿದ್ದಾರೆ.

ಅಷ್ಟಕ್ಕೂ ಆಗಿರುವುದು ಏನು ?:ಮಾಹಿತಿಯ ಪ್ರಕಾರ, ಗಯಾದ ಕೋತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ಗೋಡೌನ್ ಮೊಹಲ್ಲಾದ ನಿವಾಸಿ ರಾಜೀವ್ ಕುಮಾರ್ ವರ್ಮಾ ಹಳೆಯ ಗೋದಾಮಿನಲ್ಲಿ ಕೆಲಸ ಮಾಡುತ್ತಾರೆ. ಅವರು ಹಳೆಯ ಗೋದಾಮು ಪ್ರದೇಶದಲ್ಲಿನ ತೈಲ ಮತ್ತು ಸಂಸ್ಕರಿಸಿದ ಎಣ್ಣೆಯ ಸಗಟು ವ್ಯಾಪಾರಿಯ ಬಳಿ ಕೆಲಸ ಮಾಡುತ್ತಾರೆ.

"ವ್ಯಕ್ತಿಯ ಹೇಳಿಕೆ ಸರಿಯಾಗಿದ್ದರೆ, ಅವರಿಗೆ ನೋಟಿಸ್ ಬಂದಿರುವುದು ತಾಂತ್ರಿಕ ದೋಷವಾಗಿರಬಹುದು. ಆದಾಯ ತೆರಿಗೆ ನೋಟಿಸ್ ಆಗಿದ್ದರೆ ಅವರು ಮೇಲ್ಮನವಿ ಸಲ್ಲಿಸಿ ವಾಸ್ತವವನ್ನು ತಿಳಿಸಬೇಕು." ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

ನೋಟಿಸ್​​ನಲ್ಲಿ ಹೇಳಿರುವುದೇನು?2015-16ರಲ್ಲಿ 2 ಕೋಟಿ ರೂ.ಗಳ ಫಿಕ್ಸೆಡ್​ ಡಿಪಾಸಿಟ್ ಇಟ್ಟಿದ್ದೇನೆ ಎಂದು ಆದಾಯ ತೆರಿಗೆ ಇಲಾಖೆ ಕಳುಹಿಸಿದ ತೆರಿಗೆ ನೋಟಿಸ್​ನಲ್ಲಿ ತಿಳಿಸಲಾಗಿದೆ ಎಂದು ರಾಜೀವ್ ಕುಮಾರ್ ಹೇಳಿದ್ದಾರೆ. ಆದಾಯ ತೆರಿಗೆ ರಿಟರ್ನ್ ಫೈಲ್ ಎಂಬ ಪದವನ್ನು ತಾನು ಇದೇ ಮೊದಲ ಬಾರಿಗೆ ಕೇಳಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ವರ್ಮಾ ಅವರ ಪ್ರಕಾರ, 2015 ರಲ್ಲಿ ಅವರು 2 ಲಕ್ಷ ರೂ.ಗಳ ಎಫ್​ ಡಿ ಮಾಡಿದ್ದರು. ಆದರೆ ಅವಧಿಯ ಮುನ್ನವೇ ಅದನ್ನು ಹಿಂಪಡೆಯಲಾಗಿತ್ತು. 2016ರಲ್ಲೇ ಅದನ್ನು ಹಿಂಪಡೆಯಲಾಗಿತ್ತು. ರಾಜೀವ್ ಕುಮಾರ್ ವರ್ಮಾ ಅವರ ಪ್ರಕಾರ, 10 ಸಾವಿರ ರೂಪಾಯಿ ಸಂಬಳ ಪಡೆಯುವ ತಾನು ಯಾವತ್ತೂ ಐಟಿ ರಿಟರ್ನ್ ಫೈಲ್ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : ಅರುಣಾಚಲ, ನಾಗಾಲ್ಯಾಂಡ್​ನಲ್ಲಿ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ ಮತ್ತೆ 6 ತಿಂಗಳು ವಿಸ್ತರಣೆ - Centre Extends AFSPA

ABOUT THE AUTHOR

...view details