ಜಮ್ಮು ಕಾಶ್ಮೀರ: ಇಲ್ಲಿನ ಕಿಶ್ತ್ವಾರ್ ಮತ್ತು ದೋಡಾ ಜಿಲ್ಲೆಯನ್ನು ಸಂಪರ್ಕಿಸುವ ಭಾರತ್ ರಿಡ್ಜ್ ಪ್ರದೇಶದಲ್ಲಿ ಸೇನೆ ಬೃಹತ್ ಕಾರ್ಯಾಚರಣೆ ಮುಂದುವರೆಸಿದೆ. ಭಾನುವಾರಪೂರ್ತಿ ನಡೆದ ಕಾರ್ಯಾಚರಣೆಯನ್ನು ರಾತ್ರಿ ಸ್ಥಗಿತಗೊಳಿಸಿದ್ದು, ಇಂದು ಬೆಳಗ್ಗೆಯಿಂದ ಪುನಾರಂಭಿಸಲಾಗಿದೆ.
ಭಾನುವಾರ ಬೆಳಗ್ಗೆ 11 ಗಂಟೆಗೆ ಕೇಶ್ವಾನ್ ಅರಣ್ಯ ಪ್ರದೇಶದಲ್ಲಿ ಸೇನೆ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ನಾಲ್ಕು ಗಂಟೆಗಳ ಕಾಲ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಸೇನೆಯ ಜ್ಯೂನಿಯರ್ ಕಮಿಷನ್ಡ್ ಆಫೀಸರ್ ನಯಬ್ ಸುಬೇದರ್ ರಾಕೇಶ್ ಕುಮಾರ್ ಹುತಾತ್ಮರಾಗಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ.