ಕರ್ನಾಟಕ

karnataka

ETV Bharat / bharat

ಸರ್ಕಾರದ ನಿರಂತರ ಕಿರುಕುಳ; ಬೆಳಗ್ಗೆ ಅಧಿಕಾರ ವಹಿಸಿಕೊಂಡು ಸಂಜೆ ನಿವೃತ್ತರಾದ ಐಪಿಎಸ್​ ಅಧಿಕಾರಿ! - Government Orders on ABV Posting

AB Venkateswara Rao Retirement: ಹಿರಿಯ ಐಪಿಎಸ್ ಅಧಿಕಾರಿ ಎಬಿ ವೆಂಕಟೇಶ್ವರ ರಾವ್ ಅವರು ನಿವೃತ್ತರಾಗಿದ್ದಾರೆ. ಅವರು ನಿವೃತ್ತರಾಗುವ ದಿನವೇ ಸೇವೆಗೆ ಸೇರಿದ್ದರು, ಇದಕ್ಕೆ ರಾಜ್ಯ ಸರ್ಕಾರ ಅನುವು ಮಾಡಿಕೊಟ್ಟಿತ್ತು. ಅವರು ಬೆಳಗ್ಗೆ ಕರ್ತವ್ಯಕ್ಕೆ ಸೇರಿಕೊಂಡು ಸಂಜೆ ವೇಳೆ ನಿವೃತ್ತರಾದರು.

By ETV Bharat Karnataka Team

Published : Jun 1, 2024, 1:39 PM IST

AFTERNOON JOINED DUTIES  AB VENKATESWARA RAO RETIREMENT  CENTRAL ADMINISTRATIVE TRIBUNAL  YSRCP GOVERNMENT
ಬೆಳಗ್ಗೆ ಅಧಿಕಾರ ವಹಿಸಿಕೊಂಡು ಸಂಜೆ ನಿವೃತ್ತರಾದ ಐಪಿಎಸ್​ ಅಧಿಕಾರಿ (ಕೃಪೆ: ETV Bharat Andhra Pradesh)

ಅಮರಾವತಿ (ಆಂಧ್ರಪ್ರದೇಶ):ಹಿರಿಯ ಐಪಿಎಸ್ ಅಧಿಕಾರಿ ಎ.ಬಿ. ವೆಂಕಟೇಶ್ವರ ರಾವ್ ಶುಕ್ರವಾರ ಸಂಜೆ ನಿವೃತ್ತರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಅವರನ್ನು ಸೇವೆಗೆ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿತು. ಬಳಿಕ ಅವರು ಕರ್ತವ್ಯಕ್ಕೆ ಸೇರಿಕೊಂಡರು. ಸಂಜೆ ವೇಳೆಗೆ ನಿವೃತ್ತರಾದರು. ಎಬಿವಿಗೆ ಮುದ್ರಣ, ಸ್ಟೇಷನರಿ ಮತ್ತು ಸ್ಟೋರ್ಸ್ ಖರೀದಿ ಆಯುಕ್ತರಾಗಿ ಪೋಸ್ಟಿಂಗ್ ನೀಡಿ ಸರ್ಕಾರ ಶುಕ್ರವಾರ ಬೆಳಗ್ಗೆ ಆದೇಶ ಹೊರಡಿಸಿತ್ತು.

ಎಬಿವಿಯನ್ನು ಸೇವೆಗೆ ಸೇರಿಸಲು ಅನುವು ಮಾಡಿಕೊಡಲು ಮುಖ್ಯ ಕಾರ್ಯದರ್ಶಿ ಜವಾಹರ್ ರೆಡ್ಡಿ ಅವರು ಅಮಾನತು ರದ್ದುಗೊಳಿಸಿ ಆದೇಶ ಹೊರಡಿಸಿದ್ದರು. ಎವಿಬಿ ಮೇಲೆ ರಾಜ್ಯ ಸರ್ಕಾರ ವಿಧಿಸಿದ್ದ ಅಮಾನತ್ತನ್ನು ಇತ್ತೀಚೆಗೆ ಕೇಂದ್ರೀಯ ಆಡಳಿತ ನ್ಯಾಯಮಂಡಳಿ (ಸಿಎಟಿ) ಹಿಂಪಡೆದಿತ್ತು. ನಿವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಪೋಸ್ಟಿಂಗ್ ನೀಡಬೇಕು ಎಂದು ಸೂಚನೆ ನೀಡಿತ್ತು.

ಇನ್ನು ಐಪಿಎಸ್​ ಅಧಿಕಾರಿ ವೆಂಕಟೇಶ್ವರ ರಾವ್ ಅವರಿಗೆ ಪೋಸ್ಟಿಂಗ್ ನೀಡಿ ಸರ್ಕಾರ ಆದೇಶ ಹೊರಡಿಸಿತ್ತು. ನಂತರ ರಾವ್​ ಅವರು ವಿಜಯವಾಡದಲ್ಲಿ ಅಧಿಕಾರ ವಹಿಸಿಕೊಂಡರು. ಹಿರಿಯ ಐಪಿಎಸ್ ಅಧಿಕಾರಿ ಎ.ಬಿ. ವೆಂಕಟೇಶ್ವರ ರಾವ್ ಅವರು ಜವಾಬ್ದಾರಿ ವಹಿಸಿಕೊಂಡ ದಿನವೇ ನಿವೃತ್ತಿಯಾಗಬೇಕಿತ್ತು. ಸರ್ಕಾರಿ ನೌಕರನಾಗಿ ವಿವಾದಾತ್ಮಕ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ, ಪ್ರಸ್ತುತ ನಾನು ಇಲ್ಲಿಯವರೆಗೆ ಮಾತ್ರ ಮಾತನಾಡಬಹುದು ಎಂದು ಹೇಳಿದರು. ಇಷ್ಟು ವರ್ಷ ಬೆಂಬಲಿಸಿದ ಹಿತೈಷಿಗಳಿಗೆ ಋಣಿ ಎಂದು ಎಬಿವಿ ಹೇಳಿದರು.

ರಾವ್ ಅವರು ಎರಡು ಬಾರಿ ಅಮಾನತು:ರಕ್ಷಣಾ ಸಾಮಗ್ರಿ ಖರೀದಿಯಲ್ಲಿ ಅವ್ಯವಹಾರ ಆರೋಪದ ಹಿನ್ನೆಲೆ ವೈಎಸ್​​ಆರ್​ಸಿಪಿ ಸರ್ಕಾರ ಎ.ಬಿ.ವೆಂಕಟೇಶ್ವರರಾವ್ ಅವರನ್ನು ಅಮಾನತುಗೊಳಿಸಿತ್ತು. ಐದು ವರ್ಷಗಳ ಕಾಲ ಮಹಾನಿರ್ದೇಶಕ ಹುದ್ದೆಯಲ್ಲಿರುವ ಅವರಿಗೆ ಪೋಸ್ಟಿಂಗ್ ನೀಡದೆ ಅಮಾನತುಗಳ ಮೇಲೆ ಅಮಾನತು ವಿಧಿಸಿತ್ತು. ಜಗನ್ ಅವರ ಸರ್ಕಾರ ಮತ್ತು ವೈಎಸ್‌ಆರ್‌ಸಿಪಿ ಅಕ್ರಮ ಪ್ರಕರಣಗಳ ಮೂಲಕ ದಿಟ್ಟ ಅಧಿಕಾರಿಗಳಿಗೆ ಕಿರುಕುಳ ನೀಡಿದೆ. ಅದರ ನಂತರ ರಾವ್​ ಅವರು CAT ಅನ್ನು ಸಂಪರ್ಕಿಸಿದ್ದರು ಮತ್ತು ಅಮಾನತುಗೊಳಿಸುವಿಕೆಯನ್ನು ಎತ್ತಿಹಿಡಿಯಿತು. ನಂತರ ರಾವ್​ ಅವರು ಹೈಕೋರ್ಟ್ ಮೊರೆ ಹೋಗಿದ್ದು, ಹೈಕೋರ್ಟ್ ಅಮಾನತು ಆದೇಶವನ್ನು ವಜಾಗೊಳಿಸಿತು. ಹೈಕೋರ್ಟ್ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಎಬಿ ವೆಂಕಟೇಶ್ವರ ರಾವ್ ಅವರ ಅಮಾನತು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಸೇವೆಯಲ್ಲಿರುವ ಅಧಿಕಾರಿಯನ್ನು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಅಮಾನತುಗೊಳಿಸಬಾರದು ಎಂದು ನಿರ್ದೇಶಿಸಿತು.

ಕೊನೆಯ ದಿನ ಎಬಿವಿಗೆ ಪೋಸ್ಟಿಂಗ್:ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಎ.ಬಿ. ವೆಂಕಟೇಶ್ವರ ರಾವ್ ಅವರಿಗೆ ಪೋಸ್ಟಿಂಗ್ ನೀಡಿತು. ಅದಾದ ಕೆಲ ದಿನಗಳ ನಂತರ ಈ ಹಿಂದೆ ಅಮಾನತು ಮಾಡಿದ್ದ ಕಾರಣಕ್ಕೆ ಮತ್ತೊಮ್ಮೆ ಸರ್ಕಾರ ಅವರನ್ನು ಅಮಾನತು ಮಾಡಿತ್ತು. ಕೆಲವು ದಿನಗಳ ಹಿಂದೆ, ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ - ಸಿಎಟಿ ಎಬಿವಿ ಮೇಲೆ ಎರಡನೇ ಬಾರಿಗೆ ಸರ್ಕಾರ ವಿಧಿಸಿದ್ದ ಅಮಾನತು ಹಿಂತೆಗೆದುಕೊಳ್ಳುವಂತೆ ಆದೇಶಿಸಿತು. ಆದರೆ, ಸಿಎಟಿ ಆದೇಶಕ್ಕೆ ತಡೆ ಕೋರಿ ರಾಜ್ಯ ಸರ್ಕಾರ ಹೈಕೋರ್ಟ್‌ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ಸಿಎಟಿ ಆದೇಶಕ್ಕೆ ತಡೆಯಾಜ್ಞೆ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಿತು.

ಎಬಿವಿ ಶುಕ್ರವಾರ ನಿವೃತ್ತರಾಗಲಿದ್ದಾರೆ ಎಂದು ವಿಶೇಷವಾಗಿ ಉಲ್ಲೇಖಿಸಿದ ಹೈಕೋರ್ಟ್, ಸರ್ಕಾರ ಅವರನ್ನು ಐದು ವರ್ಷಗಳ ಕಾಲ ಅಮಾನತುಗೊಳಿಸಿದೆ ಎಂದು ನೆನಪಿಸಿತು. ಅಮಾನತು ಹಿಂತೆಗೆದುಕೊಳ್ಳುವಂತೆ ಸಿಎಟಿ ನೀಡಿರುವ ಆದೇಶವನ್ನು ಈ ಹಂತದಲ್ಲಿ ನಿಲ್ಲಿಸಿದರೆ ಎ.ಬಿ. ವೆಂಕಟೇಶ್ವರರಾವ್ ಅವರಿಗೆ ತೀವ್ರ ನಷ್ಟವಾಗಲಿದೆ ಎಂದು ರಜಾಕಾಲದ ಪೀಠ ಸ್ಪಷ್ಟಪಡಿಸಿತು. ಸುದೀರ್ಘ ಸೇವೆಯೊಂದಿಗೆ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿರುವ ಎ.ಬಿ. ವೆಂಕಟೇಶ್ವರ ರಾವ್ ಅವರ ಕುರಿತಾದ ಸಿಎಟಿ ಆದೇಶವನ್ನು ಜಾರಿಗೊಳಿಸಿದೆ. ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ತಪ್ಪು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಹೈಕೋರ್ಟ್ ಆದೇಶದಂತೆ ಎಬಿವಿಗೆ ಪೊಸ್ಟಿಂಗ್​ ನೀಡಲು ಅವರ ಮೇಲಿನ ಅಮಾನತು ಹಿಂತೆಗೆದುಕೊಳ್ಳಲು ಸಿಎಸ್ ಆದೇಶ ನೀಡಿದರು. ಶುಕ್ರವಾರ ಬೆಳಗ್ಗೆ ಅಧಿಕಾರ ಸ್ವೀಕರಿಸಿದ ಎ.ಬಿ.ವೆಂಕಟೇಶ್ವರ ರಾವ್ ಸಂಜೆ ನಿವೃತ್ತರಾದರು.

ಸಂತೃಪ್ತಿಯಿಂದ ನಿವೃತ್ತಿ: ಸಂತೃಪ್ತಿಯಿಂದ ನಿವೃತ್ತಿಯಾಗುತ್ತಿದ್ದೇನೆ. ನಾನು ಸೇವೆಯಲ್ಲಿ ಎಲ್ಲಾ ದಿನವೂ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ನನ್ನ ಕಷ್ಟಗಳನ್ನು ಕಂಡು ಹಲವರು ಕಣ್ಣೀರು ಸುರಿಸಿದ್ದಾರೆ. ನಾನು ವೃತ್ತಿಪರವಾಗಿ ಅನೇಕ ಜನರನ್ನು ನೋಡಿದ್ದೇನೆ. ಸಮಾಜದಲ್ಲಿ ಒಳ್ಳೆಯವರನ್ನು, ಕೆಟ್ಟವರನ್ನು ಕಂಡಿದ್ದೇನೆ. ನಾನು ಇಂದು ಕೇವಲ ವೃತ್ತಿಪರವಾಗಿ ನಿವೃತ್ತಿಯಾಗುತ್ತಿದ್ದೇನೆ. ಅನ್ಯಾಯದ ವಿರುದ್ಧದ ಹೋರಾಟದಿಂದ ನಾನು ನಿವೃತ್ತಿಯಾಗುವುದಿಲ್ಲ. ನಾನು ಬದುಕಿರುವವರೆಗೂ ಸಂತ್ರಸ್ತರ ಪರ ಹೋರಾಟ ಮಾಡುತ್ತಲೇ ಇರುತ್ತೇನೆ. ನಿವೃತ್ತಿಯ ನಂತರವೂ ಬಡವರಿಗೆ ತರಬೇತಿ ನೀಡಿ ರಕ್ಷಣೆ ಮಾಡುತ್ತೇನೆ ಎಂದು ಎ.ಬಿ.ವೆಂಕಟೇಶ್ವರ ರಾವ್ ಹೇಳಿದರು.

ಓದಿ:ವಾಲ್ಮೀಕಿ‌ ನಿಗಮದ ಅಕ್ರಮ ತನಿಖೆಗೆ ಎಸ್ಐಟಿ ರಚನೆ: ಒಂದೇ ವರ್ಷದಲ್ಲಿ ಮೂರನೇ ತನಿಖಾ ತಂಡ ಅಸ್ತಿತ್ವಕ್ಕೆ! - Valmiki tribal corporation scam

ABOUT THE AUTHOR

...view details