ಇಂಫಾಲ, ಮಣಿಪುರ:ಇಂಫಾಲ್ ಪೂರ್ವ ಮತ್ತು ತೌಬಲ್ ಜಿಲ್ಲೆಗಳಲ್ಲಿ ನಿಷೇಧಿತ ವಿವಿಧ ಸಂಘಟನೆಗಳಿಗೆ ಸೇರಿದ 9 ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಅಪಹರಣ ಮತ್ತು ಸುಲಿಗೆ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ನಿಷೇಧಿತ ಸಂಘಟನೆ ಕಂಗ್ಲೇಪಕ್ ಕಮ್ಯುನಿಸ್ಟ್ ಪಕ್ಷದ (ನೊಯಾನ್) ನಾಲ್ವರು ಸದಸ್ಯರನ್ನು ತೌಬಲ್ ಜಿಲ್ಲೆಯ ಚಿಂಗ್‌ಡೊಂಪಾಕ್ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಮತ್ತೊಂದು ಕಾರ್ಯಾಚರಣೆಯಲ್ಲಿ, ಇಂಫಾಲ್ ಪೂರ್ವ ಜಿಲ್ಲೆಯ ಖಬೀಸೊಯ್ ಪ್ರದೇಶದಲ್ಲಿ ಸುಲಿಗೆ ಚಟುವಟಿಕೆಯಲ್ಲಿ ತೊಡಗಿದ್ದ ಕೆಸಿಪಿ (ಪಿಡಬ್ಲ್ಯೂಜಿ)ಯ ನಾಲ್ವರು ಸಕ್ರಿಯ ಸದಸ್ಯರನ್ನು ಬಂಧಿಸಲಾಗಿದೆ. ಇಂಫಾಲ್ ಪೂರ್ವ ಜಿಲ್ಲೆಯ ನುಂಗೋಯ್ ಅವಾಂಗ್ ಲೈಕೈ ಪ್ರದೇಶದಿಂದ ಯುಎನ್‌ಎಲ್‌ಎಫ್ (ಪಂಬೈ)ನ ಒಬ್ಬ ಸದಸ್ಯನನ್ನು ಅರೆಸ್ಟ್ ಮಾಡಲಾಗಿದೆ. ಈತನ ಬಳಿಯಿದ್ದ ಒನ್ 32 ಪಿಸ್ತೂಲ್ ವಶಕ್ಕೆ ಪಡೆಯಲಾಗಿದೆ. ಈತ ಇಂಫಾಲ್ ನಗರ ಮತ್ತು ಸುತ್ತಮುತ್ತ ಸುಲಿಗೆ ಚಟುವಟಿಕೆಗಳು ಮತ್ತು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಾಗಣೆಯಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.