ಪಾಟ್ನಾ: ಬಿಹಾರದ ಸರನ್ನಲ್ಲಿ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದ್ದ 50 ಲಕ್ಷ ಮೌಲ್ಯದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ವಾಹನ ತಪಾಸಣೆ ನಡೆಸಿದಾಗ ಭಾರತೀಯ ನಿರ್ಮಿತ ವಿದೇಶಿ ಮದ್ಯ (ಐಎಂಎಫ್ಎಲ್) ವಶಕ್ಕೆ ಪಡೆಯಲಾಗಿದೆ. ಬಿಹಾರದಲ್ಲಿ 2016 ರಿಂದಲೇ ಮದ್ಯ ನಿಷೇಧ ಹೇರಲಾಗಿದೆ. ಆದರೂ ರಾಜ್ಯದಲ್ಲಿ ಅಕ್ರಮ ಮದ್ಯ ಸಾಗಾಟ ನಡೆಯುತ್ತಿದ್ದು, ಇದರ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ
ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಉಮ್ಧಾ ಗ್ರಾಮದಲ್ಲಿ ವಾಹನ ತಪಾಸಣೆ ವೇಳೆ ನಾಗಾಲ್ಯಾಂಡ್ ನೋಂದಣಿ ಇರುವ ವಾಹನದಲ್ಲಿ ಅಕ್ರಮವಾಗಿ ಬಿಹಾರಕ್ಕೆ ಮದ್ಯ ಸಾಗಿಸುತ್ತಿರುವುದು ಕಂಡು ಬಂದಿದೆ. ವಾಹನ ತಪಾಸಣೆ ವೇಳೆ ಪೊಲೀಸರನ್ನು ಗಮನಿಸಿದ ಕಂಟೈನರ್ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ. ವಾಹನದಲ್ಲಿ 50 ಲಕ್ಷ ಮೌಲ್ಯದ ವಿದೇಶಿ ಬ್ರಾಂಡ್ನ ಮದ್ಯ ಕಂಡು ಬಂದಿದೆ.
ಈ ಕುರಿತು ಮಾತನಾಡಿರುವ ಮುಫಾಸಿಲ್ ಪೊಲೀಸ್ ಠಾಣಾ ಅಧಿಕಾರಿಗಳು ನಾಗಾಲ್ಯಾಂಡ್ ನೋಂದಣಿಯ ಕಂಟೈನರ್ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವ ಕುರಿತು ರಹಸ್ಯ ಮಾಹಿತಿಯನ್ನು ನಾವು ಸ್ವೀಕರಿಸಿದ್ದೆವು. ಈ ಹಿನ್ನೆಲೆಯಲ್ಲಿ ನಾವು ಉಮ್ದಾ ಗ್ರಾಮದಲ್ಲಿ ಬ್ಯಾರಿಕೇಡ್ ಹಾಕಿ ಬೃಹತ್ ತಪಾಸಣೆಗೆ ಮುಂದಾಗಿದ್ದು, ಯಶಸ್ವಿಯಾಗಿ ಅಕ್ರಮ ಮದ್ಯ ಸಾಗಾಟ ತಡೆಯಲಾಗಿದೆ ಎಂದರು.