ಕರ್ನಾಟಕ

karnataka

ETV Bharat / bharat

ಕರೀಂಗಂಜ್‌ನಲ್ಲಿ ಆಟೋ ರಿಕ್ಷಾ , ಕಾರಿನ ನಡುವೆ ಮುಖಾಮುಖಿ ಡಿಕ್ಕಿ ; 6 ​​ಮಂದಿ ಸಾವು - Auto Rickshaw and Car accident

ಅಸ್ಸಾಂನ ಕರೀಂಗಂಜ್​ನಲ್ಲಿ ಆಟೋ ರಿಕ್ಷಾ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 6 ಮಂದಿ ಸಾವನ್ನಪ್ಪಿದ್ದಾರೆ.

Accident
ಅಪಘಾತ (ETV Bharat)

By ETV Bharat Karnataka Team

Published : Jul 23, 2024, 9:21 PM IST

ಕರೀಂಗಂಜ್ (ಅಸ್ಸಾಂ) :ಕರೀಂಗಂಜ್‌ನ ನಿಲಂ ಬಜಾರ್ ಪ್ರದೇಶದ ಬೆರಜಾಲೋದಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಕ್ಕಳು ಸೇರಿದಂತೆ ಆರು ಜನರು ಸಾವನ್ನಪ್ಪಿದ್ದಾರೆ. ಆಟೋ ರಿಕ್ಷಾ ಮತ್ತು ಕಾರಿನ ನಡುವೆ ಡಿಕ್ಕಿಯಾಗಿ ಜನರು ಸಾವನ್ನಪ್ಪಿದ್ದಾರೆ. ಅಸ್ಸಾಂನಿಂದ ತ್ರಿಪುರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 8ರಲ್ಲಿ ಈ ದುರ್ಘಟನೆ ನಡೆದಿದೆ.

ಅಪಘಾತ ನಡೆದಿದ್ದು ಹೇಗೆ ? :ಸ್ಥಳೀಯರ ಪ್ರಕಾರ, ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪ್ರಯಾಣಿಕರ ಆಟೋ ರಿಕ್ಷಾ ಮತ್ತು ಹುಂಡೈ ವೆನ್ಯೂ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಹ್ಯುಂಡೈ ವೆನ್ಯೂ ಬೇರಿಂಗ್ ರಿಜಿಸ್ಟ್ರೇಶನ್ ನಂ. AS-11-S-8323 ಮತ್ತು ನೋಂದಣಿ ಸಂಖ್ಯೆ AS-10-BC-2061ರ ಆಟೋ ರಿಕ್ಷಾದ ನಡುವೆ ಡಿಕ್ಕಿ ಸಂಭವಿಸಿದೆ.

ಅಪಘಾತದಲ್ಲಿ ಮಗು ಸೇರಿದಂತೆ ಆರು ಮಂದಿ ಸಾವು:ಆಟೋ ರಿಕ್ಷಾ ಮತ್ತು ಹ್ಯುಂಡೈ ವೆನ್ಯೂ ವಾಹನದ ನಡುವೆ ಮುಖಾಮುಖಿ ಡಿಕ್ಕಿಯಾಗಿ ಎರಡು ವಾಹನಗಳ ಆರು ಜನರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮಗು ಸೇರಿದಂತೆ ಆಟೋ ಚಾಲಕ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಕರೀಂಗಂಜ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾರೆ. ಸದ್ಯ ಓರ್ವ ಪ್ರಯಾಣಿಕ ಚಿಕಿತ್ಸೆ ಪಡೆಯುತ್ತಿದ್ದು, ಅವನ ಸ್ಥಿತಿ ಚಿಂತಾಜನಕವಾಗಿದೆ.

ಸಂತ್ರಸ್ತರ ಗುರುತು :ಅಪಘಾತದಲ್ಲಿ ಮೃತಪಟ್ಟ 6 ಜನರನ್ನು ಗುಲ್ಜಾರ್ ಹುಸೇನ್ (32), ಜಾಹೀದಾ ಬೇಗಂ (26), ಸಾಜಿದುಲ್ ಹುಸೇನ್ (18 ತಿಂಗಳು), ಬೇಡನಾ ಬೇಗಂ (50), ರುಹುಲ್ ಅಲೋಮ್ (30), ಹಸ್ನಾ ಬೇಗಂ ಎಂದು ಗುರುತಿಸಲಾಗಿದೆ. (46) ಅಪಘಾತಕ್ಕೀಡಾದ ಆಟೋ ರಿಕ್ಷಾದ ಚಾಲಕ ರೂಹುಲ್ ಆಲಂ ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ಹೆದ್ದಾರಿ ತಡೆದ ಸಾರ್ವಜನಿಕರು : ದುರಂತ ಸಂಭವಿಸಿದ ಕೂಡಲೇ ಪೊಲೀಸರು ಅಪಘಾತದ ನಂತರ ತಡವಾಗಿ ಸ್ಥಳಕ್ಕೆ ತಲುಪಿದಾಗ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಉದ್ರಿಕ್ತ ಜನರು ಅಸ್ಸಾಂ ತ್ರಿಪುರಾ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 8 ಅನ್ನು ತಡೆದರು. ಇದರಿಂದ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹಲವು ವಾಹನಗಳು ನಿಂತಿದ್ದವು. ಅಂತಿಮವಾಗಿ ಕರೀಂಗಂಜ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಾರ್ಥ ಪ್ರತಿಮ್ ದಾಸ್ ಮತ್ತು ಜಿಲ್ಲಾಧಿಕಾರಿ ಮೃದುಲ್ ಕುಮಾರ್ ಯಾದವ್ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಹತೋಟಿಗೆ ತಂದರು.

ಇದನ್ನೂ ಓದಿ :ಹಿಟ್ ಆ್ಯಂಡ್ ರನ್​ಗೆ ದ್ವಿಚಕ್ರ ವಾಹನ ಸವಾರ ಬಲಿ: ಆರೋಪಿಗಾಗಿ ಹುಡುಕಾಟ - Hit and run

ABOUT THE AUTHOR

...view details