ಕರ್ನಾಟಕ

karnataka

ETV Bharat / bharat

ಜೈಪುರ - ಅಜ್ಮೀರ್​ ಹೈವೇಯಲ್ಲಿ ಗ್ಯಾಸ್​ ಟ್ಯಾಂಕರ್​​ ​ಸ್ಫೋಟ : ಐದು ಮಂದಿ ಸಜೀವ ದಹನ, 37 ಜನರಿಗೆ ಗಾಯ - TRUCK CARRYING CHEMICAL COLLIDES

ರಾಜಸ್ಥಾನದಲ್ಲಿ ಗ್ಯಾಸ್​ ಟ್ಯಾಂಕರ್​ ಸ್ಫೋಟಗೊಂಡು ಸುಮಾರು 30 ಟ್ರಕ್​ ಮತ್ತು ಇತರ ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ಪೊಲೀಸ್​ ಆಯುಕ್ತ ಬಿಜು ಜಾರ್ಜ್​ ಜೋಸೆಫ್​ ತಿಳಿಸಿದ್ದಾರೆ.

5-dead-37-injured-in-fire-after-truck-carrying-chemical-collides-with-other-vehicles-in-jaipur
ಅಪಘಾತದ ಸ್ಥಳದಲ್ಲಿ ಅಗ್ನಿಶಾಮಕದಳ (ಈಟಿವಿ ಭಾರತ್​)

By PTI

Published : 12 hours ago

ಜೈಪುರ (ರಾಜಸ್ಥಾನ): ಇಲ್ಲಿನ ಜೈಪುರ- ಅಜ್ಮೀರ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಸಾಯನಿಕ ಟ್ರಕ್​ವೊಂದು ಸ್ಫೋಟಗೊಂಡ ಪರಿಣಾಮ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, 5 ಮಂದಿ ಜೀವಂತ ಸಮಾಧಿಯಾಗಿದ್ದು, 37 ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ರಾಜಸ್ಥಾನ ಸಿಎಂ:ಘಟನೆಯಲ್ಲಿ ಸುಮಾರು 30 ಟ್ರಕ್​ ಮತ್ತು ಇತರ ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ಪೊಲೀಸ್​ ಆಯುಕ್ತ ಬಿಜು ಜಾರ್ಜ್​ ಜೋಸೆಫ್​ ತಿಳಿಸಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ವಿಷಯ ತಿಳಿಯುತ್ತಿದ್ದಂತೆ ರಾಜಸ್ಥಾನ ಮುಖ್ಯಮಂತ್ರಿ ಭಜನ್​ಲಾಲ್​ ಶರ್ಮಾ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ವೈದ್ಯರೊಂದಿಗೆ ಈ ಬಗ್ಗೆ ಸಮಾಲೋಚಿಸಿದ ಸಿಎಂ, ಉತ್ತಮ ಚಿಕಿತ್ಸೆ ಭರವಸೆ ನೀಡುವಂತೆ ಸೂಚನೆ ನೀಡಿದರು. ಇದಾದ ಬಳಿಕ ಅವರು ಅಪಘಾತ ನಡೆದ ಸ್ಥಳಕ್ಕೂ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಬೆಂಕಿ ನಂದಿಸುವ ಕಾರ್ಯದಲ್ಲಿ ಅಗ್ನಿಶಾಮಕದಳ (ಈಟಿವಿ ಭಾರತ್​)

ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಭಜನ್​ಲಾಲ್​ ಶರ್ಮಾ :ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ಅವರು, ಜೈಪುರ- ಅಜ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್​ ಟ್ಯಾಂಕರ್​ ಅಗ್ನಿ ಅನಾಹುತದ ಸುದ್ದಿ ಕೇಳಿ ದುಃಖವಾಯಿತು. ಈ ಮಾಹಿತಿ ದೊರೆತ ಕೂಡಲೇ ನಾನು ಎಸ್​ಎಂಎಸ್​ ಆಸ್ಪತ್ರೆಗೆ ಭೇಟಿ ನೀಡಿದ್ದು, ಗಾಯಾಳುಗಳಿಗೆ ತಕ್ಷಣಕ್ಕೆ ಅಗತ್ಯ ವೈದ್ಯಕೀಯ ಸೌಲಭ್ಯ ಮತ್ತು ಆರೈಕೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದೇನೆ. ಘಟನಾ ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯ ಸಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ವೆಸ್ಟ್ ಡಿಸಿಪಿ ಅಮಿತ್ ಕುಮಾರ್ ಬುಡಾನಿಯಾ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಈ ಅವಘಡದಲ್ಲಿ 40 ವಾಹನಗಳು ಸುಟ್ಟು ಕರಕಲಾಗಿದ್ದು, 37ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಬೆಂಕಿ ಕೆನ್ನಾಲಿಕೆ (ಈಟಿವಿ ಭಾರತ)

ಸ್ಫೋಟದಿಂದ ಸಿಎನ್‌ಜಿ ಟ್ಯಾಂಕರ್‌ಗೆ ಬೆಂಕಿ: ಡಿಸಿಪಿ ವೆಸ್ಟ್ ಅಮಿತ್ ಕುಮಾರ್ ಬುಡಾನಿಯಾ ಹೇಳುವ ಪ್ರಕಾರ, ಶುಕ್ರವಾರ ಬೆಳಗ್ಗೆ ಬಂಕ್ರೋಟಾ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಮೀರ್ ಹೆದ್ದಾರಿಯಲ್ಲಿ ರಾಸಾಯನಿಕ ತುಂಬಿದ ಟ್ರಕ್‌ಗೆ ಡಿಕ್ಕಿಯಾದ ನಂತರ ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಸಿಎನ್‌ಜಿ ಟ್ಯಾಂಕರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಬೆಂಕಿ ಅಕ್ಕಪಕ್ಕದ ಹತ್ತಾರು ವಾಹನಗಳಿಗೂ ಆವರಿಸಿದೆ. 37ಕ್ಕೂ ಹೆಚ್ಚು ಮಂದಿ ಬೆಂಕಿಗೆ ಆಹುತಿಯಾಗಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಲಾಗಿದೆ.

ಅಕ್ಕಪಕ್ಕದ ಜನರಿಗೆ ಹೊರಗೆ ಬರದಂತೆ ಸೂಚನೆ:ಬೆಂಕಿಯ ತೀವ್ರತೆ ಹೆಚ್ಚಾಗಿದ್ದು, ಅಕ್ಕಪಕ್ಕದ ಜನರಿಗೆ ಹೊರಗೆ ಬರದಂತೆ ಸೂಚನೆ ನೀಡಲಾಗಿದೆ. ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದು ಹತ್ತಕ್ಕೂ ಹೆಚ್ಚು ವಾಹನಗಳು ಸುಟ್ಟು ಕರಕಲಾಗಿವೆ. ಪೆಟ್ರೋಲ್ ಪಂಪ್‌ನ ಒಂದು ಭಾಗಕ್ಕೂ ಬೆಂಕಿ ಆವರಿಸಿದೆ. ಭಂಕ್ರೋಟಾ, ಬಿಂದಾಯಕ, ಬಗ್ರು, ಚಿತ್ರಕೂಟ, ವೈಶಾಲಿ ನಗರ, ಕರ್ಣಿ ವಿಹಾರ್, ಕರ್ಧಾನಿ ಮತ್ತಿತರ ಸ್ಥಳಗಳ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಸುಮಾರು ಎರಡು ಡಜನ್ ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿವೆ.

ಘಟನೆ ದೃಶ್ಯ (ಈಟಿವಿ ಭಾರತ್​)

ಪ್ರತ್ಯೇಕ ಐಸಿಯು ವಾರ್ಡ್ ಸ್ಥಾಪನೆ: ಅಪಘಾತದಲ್ಲಿ ಗಾಯಗೊಂಡವರ ಚಿಕಿತ್ಸೆಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ವೈದ್ಯಕೀಯ ಸಚಿವ ಗಜೇಂದ್ರ ಸಿಂಗ್ ಖಿನ್ವಸರ್ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲ ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆಗೆ ಅನುಕೂಲವಾಗುವಂತೆ ಐಸಿಯು ಮತ್ತು ಪ್ರತ್ಯೇಕ ವಾರ್ಡ್ ರಚಿಸುವಂತೆ ಅವರು ಆಸ್ಪತ್ರೆ ಆಡಳಿತಕ್ಕೆ ಸೂಚನೆ ಕೊಟ್ಟಿದ್ದಾರೆ. ಎಸ್‌ಎಂಎಸ್ ಆಸ್ಪತ್ರೆ ಆಡಳಿತದಿಂದ ಬಂದ ಮಾಹಿತಿಯ ಪ್ರಕಾರ, ಆಸ್ಪತ್ರೆಗೆ ತಲುಪಿದ ಎಲ್ಲ ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ.

40 ವಾಹನಗಳಿಗೆ ತೊಂದರೆ:ಅಜ್ಮೀರ್‌ನಿಂದ ಜೈಪುರ ಕಡೆಗೆ ಟ್ಯಾಂಕರ್ ಬರುತ್ತಿತ್ತು ಎಂದು ಹೇಳಲಾಗುತ್ತಿದೆ. ಅವರು ದೆಹಲಿ ಪಬ್ಲಿಕ್ ಸ್ಕೂಲ್ ಮುಂಭಾಗದಿಂದ ಅಜ್ಮೀರ್ ಕಡೆಗೆ ಯು-ಟರ್ನ್ ತೆಗೆದುಕೊಳ್ಳಲಾಗುತ್ತಿದೆ. ಇದೇ ವೇಳೆ ಜೈಪುರದಿಂದ ಬರುತ್ತಿದ್ದ ಟ್ರಕ್ ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸದಿಂದಾಗಿ ಗ್ಯಾಸ್​​ ಟ್ಯಾಂಕರ್​ ಗೆ ​ ತಕ್ಷಣ ಬೆಂಕಿ ಹೊತ್ತಿಕೊಂಡಿದೆ. ಈ ಅಪಘಾತದ ನಂತರ, 40 ಕ್ಕೂ ಹೆಚ್ಚು ವಾಹನಗಳು ಬೆಂಕಿಗೆ ಆಹುತಿಯಾಗಿವೆ, ಅವುಗಳಲ್ಲಿ 29 ಟ್ರಕ್‌ಗಳು ಮತ್ತು ಟ್ಯಾಂಕರ್‌ಗಳು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: 'ಪಟಾಕಿ ನಿಷೇಧಿಸಿ'; ಯುಪಿ, ಹರಿಯಾಣ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

ABOUT THE AUTHOR

...view details