ನವದೆಹಲಿ: ಭಾರತೀಯ ವಾಯುಪಡೆ ವಿಮಾನ ಎಎನ್-12 ಪತನಗೊಂಡು 56 ವರ್ಷಗಳ ಬಳಿಕ ವಿಮಾನದ ಅವಶೇಷಗಳಲ್ಲಿ ನಾಲ್ವರು ಯೋಧರ ಮೃತದೇಹಗಳು ಪತ್ತೆಯಾಗಿವೆ. ಭಾರತೀಯ ಸೇನೆಯು ಹಿಮಾಚಲ ಪ್ರದೇಶದ ಲಾಹೌಲ್- ಸ್ಪಿಟಿ ಜಿಲ್ಲೆಯ ಬೆಟ್ಟಗಳಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ 1968 ಫೆಬ್ರವರಿ 7 ರಂದು ಪತನಗೊಂಡ ಎಎನ್- 12 ವಿಮಾನದ ಅವಶೇಷಗಳಿಂದ ನಾಲ್ಕು ಸೈನಿಕರ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಭಾರತೀಯ ವಾಯಪಡೆಗೆ ಸೇರಿದ್ದ ಈ ವಿಮಾನ ಇದಾಗಿದ್ದು, ಚಂಡೀಗಢದಿಂದ ಲೇಹ್ಗೆ ತೆರಳುತ್ತಿದ್ದ ವೇಳೆ ರೋಹ್ಟಾಂಗ್ ಪಾಸ್ ಬಳಿಕ ವಿಮಾನ ಅಪಘಾತಕ್ಕೀಡಾಗಿತ್ತು. ಪತನಗೊಂಡಂತಹ ಸಂದರ್ಭದಲಲ್ಲಿ ಇದರಲ್ಲಿ 102 ಸೇನಾ ಸಿಬ್ಬಂದಿ ಇದ್ದರು.
ಲಹೌಲ್- ಸ್ಪಿಟಿ ಪೊಲೀಸ್ ವರಿಷ್ಠಾಧಿಕಾರಿ ಮಯಾಂಕ್ ಚೌಧರಿ ಈ ಬಗ್ಗೆ ಮಾಹಿತಿ ನೀಡಿದ್ದು, "ತಂಡ ಲಾಹೌಲ್- ಸ್ಪಿಟಿಯ ಚಂದ್ರಭಾಗ 13 ಶಿಖರದ ಬಳಿಯ ಬಟಾಲ್ನಲ್ಲಿ ಪರ್ವತಾರೋಹಣ ನಡೆಸುತ್ತಿತ್ತು. ಉಪಗ್ರಹ ಸಂವಹನ ಮೂಲಕ ಪಡೆದ ಮಾಹಿತಿ ಆಧರಿಸಿ, ಈ ಮೃತದೇಹಗಳನ್ನು ಪತ್ತೆ ಹಚ್ಚಲಾಯಿತು. ಪ್ರಾಥಮಿಕ ತನಿಖೆಯ ಆಧಾರದ ಮೇಲೆ ಈ ದೇಹಗಳು 1968ರ ಭಾರತೀಯ ವಾಯುಪಡೆಯ ಎಎನ್-12 ವಿಮಾನ ಅಪಘಾತಕ್ಕೆ ಸಂಬಂಧಿಸಿರಬಹುದು ಎಂದು ನಂಬಲಾಗಿದೆ" ಎಂದು ತಿಳಿಸಿದರು.
1968ರಲ್ಲಿ ವಿಮಾನ ಅಪಘಾತದಲ್ಲಿ ಮಡಿದ ಸೈನಿಕರ ಮೃತದೇಹಗಳನ್ನು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ. ಈ ಅಪಘಾತ ಭಾರತೀಯ ಸೇನಾ ವಾಯುಪಡೆಯ ಇತಿಹಾಸದಲ್ಲಿ ಅತ್ಯಂತ ದುರಂತ ಘಟನೆಗಳಲ್ಲಿ ಒಂದಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ವಿಮಾನವು ಲಾಹೌಲ್ ಕಣಿವೆಯ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿತ್ತು. ನಂತರದ ವರ್ಷಗಳಲ್ಲಿ ನಡೆದ ಹಲವಾರು ಶೋಧ ಕಾರ್ಯಾಚರಣೆಗಳಲ್ಲಿ ಕೆಲವು ಮೃತದೇಹಗಳು ಮಾತ್ರ ದೊರಕಿವೆ. ಇನ್ನೂ ಅನೇಕ ಮೃತದೇಹಗಳು ಹಾಗೂ ಅವಶೇಷಗಳು ಹಿಮಭರಿತ ಮತ್ತು ಎತ್ತರದ ಭೂಪ್ರದೇಶದಲ್ಲಿ ಕಳೆದುಹೋಗಿವೆ" ಎಂದು ತಿಳಿಸಿದರು.
2018ರಲ್ಲಿ ಯೋಧನ ಮೃತದೇಹ ಪತ್ತೆ:"2018ರ ಈ ವಿಮಾನದ ಅವಶೇಷಗಳು ಹಾಗೂ ಯೋಧನೋರ್ವನ ಮೃತದೇಹ 6,200 ಮೀಟರ್ ಎತ್ತರದಲ್ಲಿರುವ ಢಾಕಾ ಗ್ಲೇಸಿಯರ್ ಬೇಸ್ ಕ್ಯಾಂಪ್ನಲ್ಲಿ ಪತ್ತೆಯಾಗಿತ್ತು. ಚಂದ್ರಭಾಗ -13 ಶಿಖರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಪರ್ವತಾರೋಹಿಗಳ ತಂಡ ಮೃತದೇಹವನ್ನು ಪತ್ತೆ ಹಚ್ಚಿತ್ತು. ಇದೀಗ ನಾಲ್ವರ ಮೃತದೇಹಗಳು ಪತ್ತೆಯಾಗಿದ್ದು, ಹುತಾತ್ಮರ ಕುಟುಂಬಗಳಿಗೆ ಸಾಂತ್ವನ ಹೇಳುವ ಕೆಲಸವಾಗುತ್ತಿದೆ" ಎಂದರು.
"ಸೇನಾ ಕಾರ್ಯಾಚರಣೆ ತಂಡವು ಮೃತದೇಹಗಳನ್ನು ಗುರುತಿಸಲು ಹಾಗೂ ಇತರ ವಿಧಿವಿಧಾನಗಳಿಗಾಗಿ ಲೊಸಾರ್ ನೆಲೆಗೆ ತರುತ್ತಿದೆ. ಮೃತದೇಹಗಳು ಪತ್ತೆಯಾದ ಪ್ರದೇಶ ಅತ್ಯಂತ ಕಷ್ಟಕರವಾಗಿದೆ. ಅಲ್ಲಿಗೆ ತಲುಪುವುದು, ಹುಡಕಾಟ ನಡೆಸುವುದು ತುಂಬಾ ಸವಾಲಿನ ಕೆಲಸವಾಗಿತ್ತು.
ಇದನ್ನೂ ಓದಿ:ಯುದ್ಧಭೂಮಿಯಲ್ಲಿ ಎಫ್16 ಫೈಟರ್ ಜೆಟ್ ಪತನ: ವಿಶ್ವದ ಅತ್ಯಾಧುನಿಕ ಯುದ್ಧ ವಿಮಾನದ ವಿಶೇಷತೆ ಏನು? - F16 fighter Plane Specialization