ಚೆನ್ನೈ (ತಮಿಳುನಾಡು): ಜೈಲಿನಲ್ಲಿದ್ದ 20 ಭಾರತೀಯ ಮೀನುಗಾರರನ್ನು ಶ್ರೀಲಂಕಾ ಸರ್ಕಾರ ಬಿಡುಗಡೆ ಮಾಡಿದ್ದು, ಅವರು ಹೊಸ ವರ್ಷದಂದೇ ವಿಮಾನದ ಮೂಲಕ ಚೆನ್ನೈಗೆ ಬಂದಿಳಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರ್ಷದ ಹಿಂದೆ ಸಾಗರ ಗಡಿ ದಾಟಿದ ಈ ಮೀನುಗಾರರನ್ನು ಶ್ರೀಲಂಕಾ ನೌಕಾ ಸೇನೆ ಬಂಧಿಸಿತ್ತು. ಇವರೆಲ್ಲ ತಮಿಳುನಾಡಿನ ಪುದುಕೊಟ್ಟೈ, ರಾಮನಾಥಪುರಂ ಮತ್ತು ಟ್ಯುಟಿಕೋರಿನ್ ಮೂಲದವರಾಗಿದ್ದು, ಶ್ರೀಲಂಕಾದಲ್ಲಿ ನ್ಯಾಯಾಲಯ ಬಂಧನದಲ್ಲಿದ್ದರು.
ಭಾರತ ಮತ್ತು ಶ್ರೀಲಂಕಾ ಸರ್ಕಾರದ ಮಾತುಕತೆ ಬಳಿಕ 20 ಮೀನುಗಾರರನ್ನು ಬಿಡುಗಡೆ ಮಾಡಲು ದ್ವೀಪ ರಾಷ್ಟ್ರ ಒಪ್ಪಿತು. ಅವರನ್ನೆಲ್ಲಾ ಶ್ರೀಲಂಕಾದಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಒಪ್ಪಿಸಲಾಯಿತು. ಬಳಿಕ ಅವರಿಗೆ ತಾತ್ಕಾಲಿಕ ನಾಗರಿಕ ಪ್ರಮಾಣಪತ್ರವನ್ನು ನೀಡಲಾಯಿತು. ಬಳಿಕ ಬುಧವಾರ ಅವರು ಕೊಲೊಂಬೊದಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿರು.
ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಇವರನ್ನೆಲ್ಲಾ ನಾಗರಿಕ ಪ್ರಮಾಣಪತ್ರ ಪರಿಶೀಲನೆ, ಕಸ್ಟಮ್ಸ್ ಪರೀಕ್ಷೆ ಮತ್ತು ಇತರೆ ಔಪಚಾರಿಕ ಪರೀಕ್ಷೆಗೆ ಒಳಪಡಿಸಿ ಬಿಡುಗಡೆ ಮಾಡಲಾಯಿತು.
ಚೆನ್ನೈಗೆ ಬಂದಿಳಿದ ಅವರಿಗೆ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಶುಭಾಶಯ ಕೋರಿದರು. ಬಳಿಕ ಅವರನ್ನು ಪ್ರತ್ಯೇಕ ವಾಹನಗಳಲ್ಲಿ ಅವರವರ ಮನೆಗೆ ತಲುಪುವ ವ್ಯವಸ್ಥೆ ಮಾಡಿದರು.