ಕರ್ನಾಟಕ

karnataka

ETV Bharat / bharat

ಮಹಾ ಕುಂಭಮೇಳದಲ್ಲಿ ಮತ್ತೊಂದು ಬೆಂಕಿ ಅವಘಡ: 15 ಟೆಂಟ್‌ಗಳು ಭಸ್ಮ - MAHAKUMBH FIRE

ಮಹಾ ಕುಂಭಮೇಳದಲ್ಲಿ ಇಂದು ಸಂಭವಿಸಿದ ಬೆಂಕಿ ಅವಘಡದಲ್ಲಿ 15 ಟೆಂಟ್‌ಗಳು ಭಸ್ಮವಾಗಿವೆ. ಯಾವುದೇ ಜೀವಹಾನಿ ಸಂಭವಿಸಿಲ್ಲ.

ಬೆಂಕಿ ಅವಘಡ ಸುಟ್ಟು ಹೋದ ಟೆಂಟ್​ಗಳು
ಬೆಂಕಿ ಅವಘಡ ಸುಟ್ಟು ಹೋದ ಟೆಂಟ್​ಗಳು (X handle)

By ETV Bharat Karnataka Team

Published : Jan 30, 2025, 9:08 PM IST

Updated : Jan 30, 2025, 9:25 PM IST

ಮಹಾಕುಂಭ ನಗರ (ಉತ್ತರಪ್ರದೇಶ) :ಇಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಸೆಕ್ಟರ್ 22 ರ ಚಾಮನ್‌ಗಂಜ್ ಚೌಕಿ ಬಳಿ ಗುರುವಾರ ಬೆಂಕಿ ಕಾಣಿಸಿಕೊಂಡು ಕನಿಷ್ಠ 15 ಟೆಂಟ್‌ಗಳು ಸುಟ್ಟು ಭಸ್ಮವಾಗಿವೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟೆಂಟ್​ಗಳಿಗೆ ಇಂದು ಮಧ್ಯಾಹ್ನ ಬೆಂಕಿ ಹೊತ್ತಿಕೊಂಡ ಬಗ್ಗೆ ಮಾಹಿತಿ ಬಂದಿತು. ತಕ್ಷಣವೇ ಸ್ಥಳಕ್ಕೆ ಆಗಮಿಸಿ, ಅಗ್ನಿ ನಂದಿಸಲಾಗಿದೆ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ (ಕುಂಭ) ಪ್ರಮೋದ್ ಶರ್ಮಾ ತಿಳಿಸಿದ್ದಾರೆ.

ಕೋಟ್ಯಂತರ ಭಕ್ತರು ಇಲ್ಲಿಗೆ ಆಗಮಿಸಿರುವ ಹಿನ್ನೆಲೆಯಲ್ಲಿ ಬೆಂಕಿ ಹೊತ್ತಿಕೊಂಡ ಸ್ಥಳಕ್ಕೆ ಅಗ್ನಿಶಾಮಕ ದಳ ವಾಹನಗಳನ್ನು ಸ್ಥಳಕ್ಕೆ ತರಲು ಕಷ್ಟವಾಯಿತು. ರಸ್ತೆ ತುಂಬಾ ಜನರು ತುಂಬಿಕೊಂಡಿದ್ದರಿಂದ ವಾಹನ ಸಂಚಾರ ಬಂದ್ ಮಾಡಲಾಗಿದೆ. ಹೀಗಾಗಿ 15 ಟೆಂಟ್​ಗಳಿಗೆ ಬೆಂಕಿ ವ್ಯಾಪಿಸಿದೆ ಎಂದು ಅವರು ಹೇಳಿದರು.

ಬೆಂಕಿ ಅವಘಡದಲ್ಲಿ ಡೇರೆಗಳು ಸುಟ್ಟು ಹೋಗಿವೆ. ಸದ್ಯ ಪರಿಸ್ಥಿತಿ ತಿಳಿಯಾಗಿದೆ. ಆದರೆ, ಯಾವುದೇ ಜೀವಹಾನಿ ಅಥವಾ ಯಾರಿಗೂ ಗಾಯ ಕೂಡ ಆಗಿಲ್ಲ. ಮೇಲಾಗಿ ಇಲ್ಲಿ ನಿರ್ಮಿಸಲಾಗಿರುವ ಟೆಂಟ್​ಗಳು ಅನಧಿಕೃತವಾಗಿವೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದರು. ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಇದೇ ವೇಳೆ ಅವರು ಹೇಳಿದರು.

ಓದಿ:ಮಹಾಕುಂಭ ಮೇಳದಲ್ಲಿ ಮತ್ತೊಂದು ಬೆಂಕಿ ಅವಘಡ : ಕಿನ್ನರ್ ಅಖಾಡ ಶಿಬಿರಕ್ಕೆ ಹೊತ್ತಿಕೊಂಡ ಅಗ್ನಿ

ಮಹಾ ಕುಂಭಮೇಳ ಸಂಗಮದ ಡೇರೆಯಲ್ಲಿ ಭಾರಿ ಬೆಂಕಿ: 20 ರಿಂದ 25 ಡೇರೆ ಬೆಂಕಿಗಾಹುತಿ

ಕಾಲ್ತುಳಿತದ ನಂತರ ಮಹಾಕುಂಭದಲ್ಲಿ ಜನದಟ್ಟಣೆ ನಿರ್ವಹಣೆಗೆ ಹಲವು ಬದಲಾವಣೆ; ವಿವಿಐಪಿ ಪಾಸ್​ ರದ್ದು

Last Updated : Jan 30, 2025, 9:25 PM IST

ABOUT THE AUTHOR

...view details