ನವಾಡ(ಬಿಹಾರ): "ಬಿಹಾರದ ನಾವಡಾ ಜಿಲ್ಲೆಯಲ್ಲಿ 21 ಮನೆಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯ ಒಂದು ದಿನದ ಬಳಿಕ ಪೊಲೀಸರು 15 ಜನರನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಲಾಗಿದೆ. ಮತ್ತು ಉಳಿದ ಶಂಕಿತರನ್ನು ಬಂಧಿಸಲು ಹುಡುಕಾಟ ನಡೆಯುತ್ತಿದೆ" ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಶುತೋಷ್ ಕುಮಾರ್ ವರ್ಮಾ ಗುರುವಾರ ತಿಳಿಸಿದ್ದಾರೆ.
ಸುಮಾರು 21 ಮನೆಗಳನ್ನು ಒಂದು ಸುಟ್ಟು ಹಾಕಿದ್ದು, ಹಿರಿಯ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಇದ್ದು, ಹಾನಿಗೊಳಗಾದ ಮನೆಗಳ ನಿಖರವಾದ ಸಂಖ್ಯೆಯ ವರದಿಯನ್ನು ನೀಡಲಿದ್ದಾರೆ. ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದವರಿಗೆ ಆಹಾರ ಪ್ಯಾಕೆಟ್ಗಳು ಮತ್ತು ಕುಡಿಯುವ ನೀರುವ ಸೇರಿದಂತೆ ಪರಿಹಾರ ಸಾಮಗ್ರಿಗಳನ್ನು ಒದಗಿಸುತ್ತಿದ್ದೇವೆ. ಸಂತ್ರಸ್ತರಿಗೆ ತಾತ್ಕಾಲಿಕ ಟೆಂಟ್‌ಗಳನ್ನು ಸ್ಥಾಪಿಸಲಾಗಿದೆ" ಎಂದು ವಿವರಿಸಿದರು.
ನಾವಡಾ 21 ಮನೆಗಳಿಗೆ ಬೆಂಕಿ (ETV Bharat) ಜಾನುವಾರುಗಳು ಸುಟ್ಟು ಕರಕಲಾಗಿವೆ ಎಂಬ ಹೇಳಿಕೆಯನ್ನು ನಿರಾಕರಿಸಿದ ಡಿಎಂ, "ಅಂತಹ ಯಾವುದೇ ಪುರಾವೆಗಳು ಇದುವರೆಗೆ ಕಂಡುಬಂದಿಲ್ಲ" ಎಂದು ಸ್ಪಷ್ಟಪಡಿಸಿದರು.
ಮುಫಸ್ಸಿಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮಾಂಝಿ ತೋಲಾದಲ್ಲಿ ಬುಧವಾರ ಸಂಜೆ ದುಷ್ಕರ್ಮಿಗಳು ಸುಮಾರು 21 ಮನೆಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಘಟನೆಯಲ್ಲಿ ಮನೆಗಳು ಸುಟ್ಟು ಕರಕಲಾಗಿದ್ದು, ಗಾಯ ಅಥವಾ ಪ್ರಾಣಹಾನಿಯಾಗಿರುವ ಬಗ್ಗೆ ಯಾವುದೇ ವರದಿಯಾಗಿಲ್ಲ.
ಘಟನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಾವಡಾ ಎಸ್ಪಿ ಅಭಿನವ್ ಧಿಮಾನ್, "ಮಾಂಝಿ ತೋಲಾದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಸಂಜೆ 7 ಗಂಟೆಯ ಸುಮಾರಿಗೆ ಕರೆ ಬಂತು. ಪೊಲೀಸರು ಅಗ್ನಿಶಾಮಕ ವಾಹನಗಳೊಂದಿಗೆ ತಕ್ಷಣವೇ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕೆಲಸ ಮಾಡಿದರು. ಪ್ರಾಥಮಿಕ ತನಿಖೆ ಪ್ರಕಾರ, ಈ ಬೆಂಕಿ ಅವಘಡಕ್ಕೆ ಜಮೀನು ವಿವಾದ ಕಾರಣ ಎನ್ನುತ್ತಿವೆ. ತನಿಖೆ ನಡೆಸಲಾಗುತ್ತಿದೆ" ಎಂದು ತಿಳಿಸಿದರು.
ದಲಿತರ ಬಗ್ಗೆ ನಿರ್ಲಕ್ಷ್ಯ ಎಂದ ಖರ್ಗೆ:"ಬಿಹಾರದ ನವಾಡ ಜಿಲ್ಲೆಯಲ್ಲಿ ನಡೆದ ಹಿಂಸಾತ್ಮಕ ಘಟನೆಯನ್ನು ತಡೆಯುವಲ್ಲಿ ಎನ್‌ಡಿಎ ಡಬಲ್ ಇಂಜಿನ್ ಸರ್ಕಾರ ವಿಫಲವಾಗಿದೆ. ಮಾತ್ರವಲ್ಲದೆ ಇದು ಸರ್ಕಾರಕ್ಕಿರುವ ದಲಿತರ ಬಗೆಗಿನ ಅಸಡ್ಡೆಯನ್ನು ತೋರಿಸುತ್ತದೆ" ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಂಡಿಸಿದ್ದಾರೆ.
"ಬಿಹಾರದ ನವಾಡದಲ್ಲಿರುವ ಮಹಾದಲಿತ ಕಾಲೊನಿಯ ಮೇಲೆ ಬೆಂಕಿ ಘಟನೆ ಎನ್‌ಡಿಎ ಡಬಲ್ ಇಂಜಿನ್ ಸರ್ಕಾರದ ಜಂಗಲ್ ರಾಜ್‌ಗೆ ಮತ್ತೊಂದು ಉದಾಹರಣೆಯಾಗಿದೆ" ಎಂದು ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ದಾಳಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಖರ್ಗೆ, "ಸುಮಾರು 100 ದಲಿತರ ಮನೆಗಳಿಗೆ ಬೆಂಕಿ ಹಚ್ಚಿ, ಗುಂಡು ಹಾರಿಸಿ, ರಾತ್ರೋರಾತ್ರಿ ಬಡಕುಟುಂಬಗಳ ಜೊತೆಗಿದ್ದ ಎಲ್ಲವನ್ನೂ ಕಳ್ಳತನ ಮಾಡಿರುವುದು ಖಂಡನೀಯ" ಎಂದು ಬಿಜೆಪಿ ಮತ್ತು ಜೆಡಿ-ಯು ಎರಡೂ ಪಕ್ಷಗಳನ್ನು ಟೀಕಿಸಿದರು. "ಬಿಹಾರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ತನ್ನ ಕರ್ತವ್ಯವನ್ನು ನಿರ್ಲಕ್ಷಿಸುತ್ತಿದೆ" ಎಂದು ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಆರೋಪಿಸಿದರು.
"ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ದಲಿತರು ಮತ್ತು ಹಿಂದುಳಿದವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಅವರ ಅಪರಾಧ ನಿರ್ಲಕ್ಷ್ಯ, ಸಮಾಜ ವಿರೋಧಿ ಶಕ್ತಿಗಳ ಉತ್ತೇಜನ ಉತ್ತುಂಗಕ್ಕೇರಿದೆ. ಪ್ರಧಾನಿ ಮೋದಿ ಎಂದಿನಂತೆ ಮೌನವಾಗಿದ್ದಾರೆ. ಸಿಎಂ ನಿತೀಶ್ ಕುಮಾರ್ ಅವರು ಅಧಿಕಾರದ ದುರಾಸೆಯಿಂದ ತಲೆಕೆಡಿಸಿಕೊಂಡಿಲ್ಲ. ಎನ್‌ಡಿಎ ಮಿತ್ರಪಕ್ಷಗಳು ಈ ಬಗ್ಗೆ ಮೌನವಾಗಿವೆ" ಎಂದು ಖರ್ಗೆ ದೂರಿದರು.
ಕಾನೂನು ಕ್ರಮ, ಸಂತ್ರಸ್ತರಿಗೆ ನೆರವಿಗೆ ಮಾಯಾವತಿ ಆಗ್ರಹ: "ಬಿಹಾರದ ನಾವಡಾದಲ್ಲಿ ಗೂಂಡಾಗಳು ಬಡ ದಲಿತರ ಮನೆಗಳನ್ನು ಸುಟ್ಟುಹಾಕಿ ಅವರ ಜೀವನ ಹಾಳು ಮಾಡಿದ ಘಟನೆ ಅತ್ಯಂತ ದುಃಖಕರ ಮತ್ತು ಗಂಭೀರವಾಗಿದೆ. ಸರ್ಕಾರವು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಮತ್ತು ಸಂತ್ರಸ್ತರ ಪುನರ್ವಸತಿಗೆ ಸಂಪೂರ್ಣ ಆರ್ಥಿಕ ಸಹಾಯವನ್ನು ನೀಡಬೇಕು." ಎಂದು ಮಾಯಾವತಿ ಗುರುವಾರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಹಳಿ ತಪ್ಪಿದ ರಾಜಸ್ಥಾನಕ್ಕೆ ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್ ರೈಲು - Goods Train Derailed