ಕರ್ನಾಟಕ

karnataka

ETV Bharat / bharat

EVM ಹ್ಯಾಕ್ ಮಾಡಲು ಸಾಧ್ಯವೇ ಇಲ್ಲ: ಅಭ್ಯರ್ಥಿಗಳಿಂದ 14 ಹಂತದ ಪರಿಶೀಲನೆ - ಇನ್ಫೋ ಇನ್ ಡೇಟಾ ವರದಿ - EVM ISSUE

ಇವಿಎಂ ಗಳನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಇನ್ಫೋ ಇನ್ ಡೇಟಾ ವರದಿ ಹೇಳಿದೆ.

ಇವಿಎಂ
ಇವಿಎಂ (IANS)

By IANS

Published : Nov 29, 2024, 7:13 PM IST

ನವದೆಹಲಿ: ಇವಿಎಂಗಳ ಸಾಚಾತನವನ್ನು ಪ್ರಶ್ನಿಸುವ ವಾದಗಳನ್ನು ಶುಕ್ರವಾರ ಬಿಡುಗಡೆಯಾದ ವಿಶ್ಲೇಷಣೆ ಮತ್ತು ಸಂಶೋಧನಾ ಸಂಸ್ಥೆ ಇನ್ಫೋ ಇನ್ ಡೇಟಾದ ವರದಿ ತಳ್ಳಿಹಾಕಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳಲ್ಲಿ ಮಹಾ ವಿಕಾಸ ಅಘಾಡಿಯ ಸೋಲಿನ ನಂತರ ಇವಿಎಂಗಳ ಸಾಚಾತನದ ಬಗ್ಗೆ ದೇಶದಲ್ಲಿ ವ್ಯಾಪಕವಾಗಿ ಪ್ರಶ್ನೆಗಳನ್ನು ಎತ್ತಿರುವ ಈ ಸಂದರ್ಭದಲ್ಲಿ ಬಿಡುಗಡೆಯಾದ ಈ ವರದಿಯು ಮಹತ್ವ ಪಡೆದುಕೊಂಡಿದೆ.

ವರದಿಯಲ್ಲಿ ಏನಿದೆ?:ರಿಗ್ಗಿಂಗ್ ಮಾಡಲು ಸಾಧ್ಯವಾಗದ ಫೂಲ್-ಪ್ರೂಫ್ ವ್ಯವಸ್ಥೆಯ ಬಗ್ಗೆ ಈ ಹಿಂದಿನಿಂದಲೂ ಚುನಾವಣಾ ಆಯೋಗದ ವಾದಗಳನ್ನು ಪುರಸ್ಕರಿಸಿರುವ ಇನ್ಫೋ ಇನ್ ಡೇಟಾ, ಚುನಾವಣಾ ಪ್ರಕ್ರಿಯೆಯಲ್ಲಿನ ತಪಾಸಣೆ ಮತ್ತು ಸಮತೋಲನಗಳ ಬಗ್ಗೆ ವಿವರವಾದ ವರದಿಯನ್ನು ನೀಡಿದೆ. ಇವಿಎಂ ಬಳಕೆಯಲ್ಲಿ ಯಾವುದೇ ರೀತಿಯ ಅಕ್ರಮ ಎಸಗಲು ಸಾಧ್ಯವಿಲ್ಲ ಎಂದು ಇದು ಹೇಳಿದೆ.

ಚುನಾವಣಾ ಪ್ರಕ್ರಿಯೆಯಲ್ಲಿ ಇವಿಎಂಗಳ ಸೀಲ್​ಗಳನ್ನು ಪರಿಶೀಲಿಸುವ ಅಥವಾ ಸಹಿ ಹಾಕುವ 14 ಹಂತಗಳಲ್ಲಿ ಪಕ್ಷಗಳು ಮತ್ತು ಅಭ್ಯರ್ಥಿಗಳು ಪಾಲ್ಗೊಳ್ಳುವುದನ್ನು ವರದಿಯು ಎತ್ತಿ ತೋರಿಸಿದೆ. ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) -ಇವಿಎಂ ಘಟಕಗಳಲ್ಲಿ ಪರೀಕ್ಷೆ, ಯಾದೃಚ್ಛಿಕೀಕರಣ (randomisation) ಮತ್ತು ಇತರ ತಾಂತ್ರಿಕ ಹಂತಗಳಲ್ಲಿ ಎಲ್ಲ ಪಕ್ಷದ ಪ್ರತಿನಿಧಿಗಳು ಆರು ಸಂದರ್ಭಗಳಲ್ಲಿ ಹಾಜರಿರುತ್ತಾರೆ ಎಂದು ವರದಿ ತಿಳಿಸಿದೆ.

ಮೂರು ಬಾರಿ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುತ್ತೆ:ರಿಗ್ಗಿಂಗ್ ಮಾಡುವ ಸಾಧ್ಯತೆಯು ಶೂನ್ಯ ಎಂದಿರುವ ವರದಿಯು, ಇಡೀ ಪ್ರಕ್ರಿಯೆಯಲ್ಲಿ ವಿವಿಪ್ಯಾಟ್-ಇವಿಎಂ ಘಟಕಗಳನ್ನು ಚುನಾವಣಾ ಆಯೋಗದ ಸಿಬ್ಬಂದಿಯ ಸಹಿಯೊಂದಿಗೆ ಮೂರು ಬಾರಿ ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ. ಇದರಲ್ಲಿ ಶೇಕಡಾ 100 ರಷ್ಟು ಪರಿಶೀಲಿಸಿದ ಇವಿಎಂಗಳ ಪಟ್ಟಿ ಸೇರಿದೆ. ಇತ್ತೀಚಿನ ಚುನಾವಣಾ ಸೋಲಿಗೆ ಇವಿಎಂ ತಿರುಚುವಿಕೆಯೇ ಕಾರಣ ಎಂದು ಆರೋಪಿಸುತ್ತಿರುವ ಪ್ರತಿಪಕ್ಷಗಳಿಗೆ, ವಿಶೇಷವಾಗಿ ಕಾಂಗ್ರೆಸ್​ಗೆ ಈ ವರದಿ ಹೊಸ ಹಿನ್ನಡೆಯಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇವಿಎಂ ಸಾಚಾತನದ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಮಹಾರಾಷ್ಟ್ರದ ಫಲಿತಾಂಶಗಳು ಅನಿರೀಕ್ಷಿತ ಮತ್ತು ನಾವು ಈ ಬಗ್ಗೆ ವಿವರವಾದ ವಿಶ್ಲೇಷಣೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವವನ್ನು ಉಳಿಸಲು ಭವಿಷ್ಯದ ಚುನಾವಣೆಗಳನ್ನು ಇವಿಎಂಗಳ ಬದಲು ಬ್ಯಾಲೆಟ್ ಪೇಪರ್ ನಲ್ಲಿ ನಡೆಸಬೇಕು ಎಂದು ಒತ್ತಾಯಿಸಿ ಸಹಿ ಅಭಿಯಾನವನ್ನು ಪ್ರಾರಂಭಿಸುವುದಾಗಿ ಮಹಾರಾಷ್ಟ್ರ ಕಾಂಗ್ರೆಸ್ ಈಗಾಗಲೇ ಘೋಷಿಸಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ಯಾರೂ ನಂಬುವುದಿಲ್ಲ, ಇದರಲ್ಲಿ ಏನೋ ತಪ್ಪಾಗಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಎಫ್ ಪಟೋಲೆ ಆರೋಪಿಸಿದ್ದಾರೆ.

ಇದನ್ನೂ ಓದಿ : ನೂತನ ಪಂಬನ್ ಸೇತುವೆ 'ಆಧುನಿಕ ಎಂಜಿನಿಯರಿಂಗ್​ ಅದ್ಭುತ': ಕೇಂದ್ರ ಸಚಿವ ಅಶ್ವಿನಿ ವೈಷ್ಣವ್​ ಬಣ್ಣನೆ

ABOUT THE AUTHOR

...view details